ಮತ್ತೆ ಕುಸಿತದ ಭೀತಿಯಲ್ಲಿ ಸುಳ್ಯ ಮಡಿಕೇರಿ ರಾಜ್ಯ ಹೆದ್ದಾರಿ

Advt_Headding_Middle

 

ಮದೆನಾಡಿನ ಕರ್ತೋಜಿ ಬಳಿ ರಸ್ತೆಯಲ್ಲಿ ಉಬ್ಬಿನಿಂತ ಮಣ್ಣಿನ ರಾಶಿ

ಬಿರುಸಾಗಿ ಸುರಿಯುವ ಮಳೆಯ ಮಧ್ಯೆ ಜೆಸಿಬಿ ಮೂಲಕ ಕಾಮಗಾರಿ

ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯದಿಂದ ಮಡಿಕೇರಿ ರಸ್ತೆಯ ಮದೆನಾಡು ಗ್ರಾಮದ ಕರ್ತೋಜಿ ಎಂಬಲ್ಲಿ ಬಾರೀ ಮಳೆಗೆ ರಸ್ತೆಯಲ್ಲಿ ಮಣ್ಣಿನ ರಾಶಿ ಉಬ್ಬಿ ನಿಂತಿದ್ದು, ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರ ನಡೆಯುತ್ತಿದ್ದು, ಬಿರುಸಾಗಿ ಸುರಿಯುವ ಬಾರೀ ಮಳೆಯ ಮಧ್ಯೆ ಕಾಮಗಾರಿ ನಡೆಯುತ್ತಿದೆ.


ಕಳೆದ ಕೆಲವು ದಿನಗಳ ಹಿಂದೆ ಶಿರಾಡಿ ಹಾಗೂ ಚಾರ್ಮಾಡಿ ರಸ್ತೆಯಲ್ಲಿ ಗುಡ್ಡ ಕುಸಿತಗೊಂಡಿದ್ದು, ಮಂಗಳೂರು-ಬೆಂಗಳೂರು ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಇದೀಗ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲು ಉಳಿದಿರುವ ಏಕೈಕ ರಸ್ತೆ ಇದಾಗಿದ್ದು, ಇದೇ ರೀತಿಯಲ್ಲಿ ವಿಪರೀತವಾಗಿ ಮಳೆ ಸುರಿದರೆ ಮತ್ತೆ ಸುಳ್ಯ ಮಡಿಕೇರಿ ರಸ್ತೆಯೂ ಕುಸಿಯುವ ಭೀತಿ ಎದುರಾಗಿದೆ.


ಸುಳ್ಯದಿಂದ ಮಡಿಕೇರಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಮಂಜು ಕವಿದ ವಾತಾವರಣದಲ್ಲಿದ್ದು, ರಸ್ತೆಯ ಜೋಡುಪಾಲ, ಎರಡನೇ ಮೊಣ್ಣಂಗೇರಿ, ಮದೆನಾಡು, ತಾಳತ್ತಮನೆ ಮತ್ತಿತರ ಕಡೆಯ ಅಲ್ಲಲ್ಲಿ ರಸ್ತೆ ಬಿರುಕು ಬಿಟ್ಟಿದ್ದು,ರಸ್ತೆಯ ಬದಿ ಅಲ್ಲಲ್ಲಿ ಬ್ಯಾರಿಕೇಡ್ ಹಾಗೂ ಗೋಣಿಚೀಲವನ್ನು ಇಡಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.