ಅಜ್ಜಾವರ : ಚೈತನ್ಯ ಸೇವಾ ಆಶ್ರಮದಲ್ಲಿ ಗುರುಪೂರ್ಣಿಮ ಆಚರಣೆ

Advt_Headding_Middle

 

 

ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾಶ್ರಮದಲ್ಲಿ‌ ಗುರುಪೂರ್ಣಿಮೆ ಆಚರಣೆ, ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ 179 ಕ್ರತಿ ಮಾನವನ ಜನ್ಮಚಕ್ರ ಬಿಡುಗಡೆ, ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಸಭಾ ಕಾರ್ಯಕ್ರಮದ ಅಧ್ತಕ್ಷತೆ ವಹಿಸಿದರು. ಡಾ.ಸಾಯಿಗೀತಾ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ‘ಮಾನವನು ಆಧುನಿಕ ಕಾಲಚಕ್ರದೊಳಗೆ ಸಿಲುಕಿ ನಮ್ಮ ಸಂಪ್ರದಾಯಗಳನ್ನು ಮೂಢನಂಬಿಕೆ ಎಂದು ತಿಳಿದು ದೂರ ಮಾಡುತ್ತಿದ್ದಾನೆ. ಇದು ಸಲ್ಲದು. ನಮ್ಮ ನಂಬಿಕೆಗಳಿಗೆ ಪ್ರತಿಯೊಂದಕ್ಕು ಅರ್ಥ ಇದ್ದು ವೈಜ್ಞಾನಿಕ ಕಾರಣಗಳಿರುತ್ತವೆ ಎಂದು ಹೇಳಿದರು.
ಆಶ್ರಮದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿ ಮಾತನಾಡಿದ ಅಜ್ಜಾವರ ಧನಲಕ್ಷ್ಮೀ ಮಹಿಳಾ ಮಂಡಲದ ಅಧ್ಯಕ್ಷೆ ಶಶ್ಮಿ ಭಟ್ ” ಸಮಾಜಕ್ಕೆ ಸಂಸ್ಕಾರ ನೀಡುತ್ರಿರುವ ಸ್ವಾಮಿಗಳ ಸೇವೆ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಸ್ವಾಮಿಗಳು ಗುರುಪೂರ್ಣಿಮೆಯ ಮಹತ್ವದ ಬಗ್ಗೆ ಮಾತನಾಡಿದರು.
ಚಂದ್ರಶೇಖರ ದೊಡ್ಡೇರಿ,ಆಶ್ರಮದ ಟ್ರಸ್ಟಿ ಪ್ರಣವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.