ನೆಹರು ಮೆಮೋರಿಯಲ್ ಕಾಲೇಜು ಹಾಗೂ ಸಜ್ಜನ ಪ್ರತಿಷ್ಠಾನ ವತಿಯಿಂದ ರಾಜ್ಯ ಮಟ್ಟದ ಆನ್ಲೈನ್ ವೆಬಿನಾರ್

Advt_Headding_Middle

 

 

ನೆಹರು ಮೆಮೋರಿಯಲ್ ಕಾಲೇಜು ಕನ್ನಡ ವಿಭಾಗ ಹಾಗೂ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಸಹಯೋಗದಲ್ಲಿ ಆನ್ಲೈನ್ ಶಿಕ್ಷಣ ಸಂಬಂಧ ಭಂಗ ಶಿಕ್ಷಣವೇ ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ವೆಬಿನಾರ್ ಜು.19 ರಂದು ಝೂಮ್ ಅಂತರ್ಜಾಲದ ಮೂಲಕ ನಡೆಯಿತು.

ನೆಹರು ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಪೂವಪ್ಪ ಕಣಿಯೂರು ವೆಬಿನಾರನ್ನು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ಅಧ್ಯಕ್ಷರು ಹಾಗು ಫಾರ್ಮೆಡ್ ಗ್ರೂಪ್ ಆಫ್ ಕಂಪನಿ ಬೆಂಗಳೂರು ಇದರ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ ಭಾಗವಹಿಸಿ ಶುಭಹಾರೈಸಿದರು.

ವೆಬಿನಾರಿನ ಕೇಂದ್ರ ಬಿಂದು ಹಾಗು ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ಬರಹಗಾರರು ಮತ್ತು ಪ್ರಾಧ್ಯಾಪಕರಾದ ಡಾ.ನರೇಂದ್ರ ರೈ ದೇರ್ಲರವರು ಕೊರೋನ ಕಾರಣದಿಂದಾಗಿ ಆನ್ಲೈನ್ ಶಿಕ್ಷಣ ವ್ಯವಸ್ಥೆಯಿಂದ ಪ್ರಸ್ತುತ ಶಿಕ್ಷಣ ವಲಯದಲ್ಲಿ ಅನುಭವಿಸುತ್ತಿರುವ ಅನೇಕ ತೊಂದರೆಗಳನ್ನು ವಿದ್ಯಾರ್ಥಿಗಳ , ಪೋಷಕರ ಹಾಗು ಶಿಕ್ಷಕರ ಮನಸ್ಸಿನಲ್ಲಿರುವ ತಲ್ಲಣಗಳನ್ನು ಸವಿವರವಾಗಿ ವಿವರಿಸುವ ಮೂಲಕ ಮುಂದೆ ಮಾಡಬೇಕಾಗಿರುವ ಬದಲಾವಣೆಯ ಕುರಿತು ಸುದೀರ್ಘ ಉಪನ್ಯಾಸ ನೀಡಿದರು.

ವೆಬಿನಾರಿನಲ್ಲಿ ರಾಜ್ಯ , ಅಂತರಾಜ್ಯ ಹಾಗು ವಿದೇಶಗಳಿಂದ ಸುಮಾರು ಅರುವತ್ತೈದಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
ನೆಹರು ಮೆಮೋರಿಯಲ್ ಕಾಲೇಜು ಕನ್ನಡ ಪ್ರಾಧ್ಯಾಪಕರಾದ ಸಂಜೀವ ಕುದ್ಪಾಜೆ ಎಲ್ಲರನ್ನೂ ಸ್ವಾಗತಿಸಿದರು.
ನೆಹರು ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ರುದ್ರಕುಮಾರ್ ರವರು ವಂದಿಸಿದರು.
ವೆಬಿನಾರಿನಲ್ಲಿ ಭಾಗವಹಿಸಿದ ಎಲ್ಲರಿಗೂ ಕಾಲೇಜಿನ ವತಿಯಿಂದ ಇ-ಸರ್ಟಿಫಿಕೇಟ್ ಕಳುಹಿಸಿಕೊಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.