ಶಿಕ್ಷಣ ಇಲಾಖೆಯ ರಾಜ್ಯ ಟಾಸ್ಕ್ ಫೋರ್ಸ್‌ನಲ್ಲಿ ತಜ್ಞ ಸದಸ್ಯರಾಗಿ ಡಾ. ದಾಮ್ಲೆ

Advt_Headding_Middle

ಕೊರೋನಾ ವೈರಸ್ ಹರಡದಂತೆ ಸುಮಾರು ಒಂದೂವರೆ ವರ್ಷದ ಹಿಂದೆ ಮುಚ್ಚಿದ ಶಾಲೆಗಳನ್ನು ಆರಂಭಿಸುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಉದ್ದೇಶದಿಂದ ಸಲಹೆ ನೀಡಲು ಶಿಕ್ಷಣ ಇಲಾಖೆಯು ಆಯುಕ್ತ ವಿ. ಅನ್ಬು ಕುಮಾರ್ ಅ.ಭಾ.ಸೇ. ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಟಾಸ್ಕ್ ಫೋರ್ಸ್ ನ್ನು ರಚಿಸಿದೆ. ಇದರಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳಲ್ಲದೆ ವಿವಿಧ ಎನ್.ಜಿ.ಒ.ಗಳ ಪ್ರತಿನಿಧಿಗಳೊಡನೆ ತಜ್ಞ ಸಲಹೆಗಾರರಾಗಿ ಸುಳ್ಯದ ಡಾ.ಚಂದ್ರಶೇಖರ ದಾಮ್ಲೆಯವರೂ ಆಹ್ವಾನಿತರಾಗಿದ್ದಾರೆ. ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಯ ಪ್ರತಿನಿಧಿಗಳೂ ಸದಸ್ಯರಾಗಿದ್ದಾರೆ.
ಮನೆಗಳಲ್ಲೇ ಉಳಿದಿರುವ ವಿದ್ಯಾರ್ಥಿಗಳು ಬೌದ್ಧಿಕ ಮತ್ತು ಭೌತಿಕ ಬೆಳವಣಿಗೆಯಲ್ಲಿ ಋಣಾತ್ಮಕ ಪರಿಣಾಮಗಳಿಗೆ ಒಳಗಾಗುವುದನ್ನು ತಪ್ಪಿಸಲು ಶಿಕ್ಷಣ ಇಲಾಖೆಯು ಮುಂದಾಗಿದೆ. ಕೋವಿಡ್ ನ ಮೂರನೇ ಅಲೆ ಬಾಧಿಸುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಶಾಲೆ ಆರಂಭಿಸುವ ಪೂರ್ವದ ಮುಂಜಾಗ್ರತೆಗಳು, ಸೆನಿಟೈಸೇಶನ್, ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಮುಂತಾದ ಸುರಕ್ಷಾ ವಿಧಾನಗಳು, ಪಾಠದ ಅವಧಿ, ಪಠ್ಯದ ಪ್ರಮಾಣ, ಶಿಕ್ಷಕರ ಹೊನೆಗಾರಿಕೆಗಳು, ಆಡಳಿತ ಮಂಡಳಿ, ಎಸ್,ಡಿ.ಏಂ.ಸಿ. ಹಾಗೂ ಹೆತ್ತವರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಕೂಲಂಕುಶ ರೂಪುರೇಷೆಗಳನ್ನು ಈ ಸಮಿತಿಯು ನಿರ್ಧರಿಸಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.