ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಜೀವವಿಜ್ಞಾನ ವಿಚಾರದ ರಾಜ್ಯ ಮಟ್ಟದ ವೆಬಿನಾರ್

Advt_Headding_Middle

ನೆಹರೂ ಸ್ಮಾರಕ ಮಹಾವಿದ್ಯಾಲಯ ಸುಳ್ಯ ಇಲ್ಲಿನ ಸಸ್ಯಶಾಸ್ತ್ರ ವಿಭಾಗ, ಪ್ರಾಣಿಶಾಸ್ತ್ರ ವಿಭಾಗ ಮತ್ತು ಗುಣಮಟ್ಟ ಖಾತರಿ ಕೋಶ ವತಿಯಿಂದ ನೇಚರ್ ಕ್ಲಬ್ ಮತ್ತು ಸಂಶೋಧನಾ ಘಟಕ ಸಹಯೋಗದೊಂದಿಗೆ ‘Estuarine ecosystem- ecology and conservation’ ವಿಷಯವಾಗಿ ರಾಜ್ಯ ಮಟ್ಟದ ವೇಬಿನಾರ್ ಜು.23ರಂದು ನಡೆಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ಸಹಾಯಕ ಪ್ರಾದ್ಯಾಪಕ ಡಾ. ಮುರುಗನ್ ಎಸ್, ನದಿ ಮುಖಜ ಭೂಮಿಯಲ್ಲಿನ ಜೀವವೈವಿಧ್ಯ, ಅದರ ಮಹತ್ವ, ಅಲ್ಲಿ ಮಾನವನ ಹಸ್ತಕ್ಷೇಪ, ಆ ಪರಿಸರ ವ್ಯವಸ್ಥೆಯ ಸಂರಕ್ಷಣಾ ಅಗತ್ಯತೆ ಮುಂತಾದ ವಿಷಯಗಳ ಬಗ್ಗೆ ಸವಿವರವಾದ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಪೂವಪ್ಪ ಕಣಿಯೂರು ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಹಿಂದಿನ ಸಂಶೋದನಾ ವಿಷಯಗಳ ಮಾಹಿತಿ ಮುಂದಿನ ಅಧ್ಯಯನಕ್ಕೆ ಪೂರಕ, ಎಲ್ಲರೂ ಇದರ ಪ್ರಯೋಜನ ಪಡೆದು ಕೊಳ್ಳುವಂತಾಗಲಿ ಎಂದು ಹೇಳಿದರು. ಕಾಲೇಜಿನ ಗುಣಮಟ್ಟ ಖಾತರಿ ಕೋಶದ ಸಂಯೋಜಕಿ ರತ್ನಾವತಿ ಡಿ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ರುದ್ರಕುಮಾರ್ ಎಂ ಉಪಸ್ಥಿತರಿದ್ದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಅಕ್ಷತಾ ಸ್ವಾಗತಿಸಿ, ಸಂಶೋಧನಾ ಘಟಕದ ಸಂಯೋಜಕಿ ಅರ್ಥಶಾಸ್ತ್ರ ಉಪನ್ಯಾಸಕಿ ಡಾ. ವಿಜಯಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿ, ಜೀವವಿಜ್ಞಾನ ಉಪನ್ಯಾಸಕ ಅಜಿತ್ ಕುಮಾರ್ ವಂದಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕಾಲೇಜುಗಳ ಉಪನ್ಯಾಸಕರು, ಸಂಶೋಧಕರು, ವಿದ್ಯಾರ್ಥಿಗಳು ಸುಮಾರು 270ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಚರ್ಚಾಗೋಷ್ಠಿ ಯಲ್ಲಿ ಭಾಗಿಯಾದರು.ಭಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್ ಕಳುಹಿಸಲಾಯಿತು.ಸಸ್ಯಶಾಸ್ತ್ರ ಉಪನ್ಯಾಸಕಿ ಕೃತಿಕಾ ಕಾರ್ಯಕ್ರಮ ಸಂಘಟಿಸಿ ನಿರೂಪಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕುಲದೀಪ್ ಪೆಲ್ತಡ್ಕ ಮತ್ತು ಇತರ ಉಪನ್ಯಾಸಕರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.