ಕೊಡಿಯಾಲಬೈಲು ಹಿಂದೂ ರುದ್ರಭೂಮಿಯ ಗೇಟಿಗೆ ಬೀಗ ಜಡಿದ ಹೋರಾಟ ಸಮಿತಿ ಹಾಗೂ ಸ್ಥಳೀಯರು

Advt_Headding_Middle

 

ಸುಳ್ಯ ಕೊಡಿಯಾಲಬೈಲು ಹಿಂದೂ ರುದ್ರಭೂಮಿಯಲ್ಲಿ ಶವಗಳನ್ನು ಸುಡುವ ವಿಷಯದಲ್ಲಿ ಕಳೆದ ಹಲವಾರು ದಿನಗಳಿಂದ ನಡೆಯುತ್ತಿದ್ದ ವಾದ ವಿವಾದವು ಇಂದು ಮತ್ತೊಂದು ಸ್ವರೂಪ ಪಡೆದಿದ್ದು, ಹೋರಾಟ ಸಮಿತಿ ಹಾಗೂ ಸ್ಥಳೀಯರು ಸೇರಿ ರುದ್ರಭೂಮಿಯ ಗೇಟಿಗೆ ಬೀಗ ಜಡಿದಿದ್ದಾರೆ.
ಅಪಘಾತಕ್ಕೀಡಾಗಿ ಮೃತರಾದ ಓರ್ವರ ಶವ ಸಂಸ್ಕಾರ ವೇಳೆ ನಿನ್ನೆ ರಾತ್ರಿ ನಡೆದ ಪ್ರತಿಭಟನೆಯ ಮುಂದುವರೆದ ಭಾಗವಾಗಿ ಬೀಗ ಜಡಿಯುವ ಕಾರ್ಯಕ್ಕೆ ಪ್ರತಿಭಟನಾಕಾರರು ತೀರ್ಮಾನಿಸಿದ್ದರು ಎನ್ನಲಾಗಿದೆ. ಅದರಂತೆ ಇಂದು ಬೆಳಿಗ್ಗೆ ೧೦ ಗಂಟೆಗೆ ಸ್ಥಳೀಯ ನಿವಾಸಿಗಳು ಮತ್ತು ಹೋರಾಟ ಸಮಿತಿಯ ಸುಮಾರು ೪೦ಕ್ಕೂ ಹೆಚ್ಚು ಮಂದಿ ಜಮಾಯಿಸಿ ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಪಿಡಿಒ ರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಹೋರಾಟ ಸಮಿತಿಯ ಕಾರ್ಯದರ್ಶಿ ರಾಜೇಶ್ ಕೆ.ಎ. ನಾವು ಹಲವಾರು ದಿನಗಳಿಂದ ನಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದರೂ ಅದಕ್ಕೆ ಯಾವುದೇ ರೀತಿಯ ಸ್ಪಂದನೆ ದೊರೆಯದೇ ಇರುವ ಕಾರಣದಿಂದ ಇಂದು ನಾವು ಗೇಟಿಗೆ ಬೀಗ ಜಡಿಯಲು ತೀರ್ಮಾನಿಸಿದ್ದೇವೆ.

ಉಬರಡ್ಕ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಯಾರಾದರೂ ಮೃತಪಟ್ಟರೆ ಮಾತ್ರ ಅವರ ಅಂತ್ಯಸಂಸ್ಕಾರ ಇಲ್ಲಿನಡೆಸಬೇಕು. ಸುಳ್ಯದ ಬೇರೆ ಬೇರೆ ಭಾಗಗಳಲ್ಲಿ ಸ್ಮಶಾನಗಳು ಇರುವಾಗ ಹೊರಗಿನ ಮೃತ ಶರೀರಗಳನ್ನು ತಂದು ಇಲ್ಲಿ ಸುಡಲು ನಾವು ಬಿಡುವುದಿಲ್ಲ. ಪಂಚಾಯತ್ ನವರು ಬಂದು ನಾವು ಜಡಿದಿರುವ ಬೀಗವನ್ನು ತೆಗೆದರೆ ಬೇರೆ ಬೀಗವನ್ನು ತಂದುಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ
ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ಗ್ರಾಪಂ ಅಧ್ಯಕ್ಷೆ ಚಿತ್ರ ಕುಮಾರಿ ಮಾತನಾಡಿ, ನಿನ್ನೆ ನಡೆದಿರುವ ಘಟನೆಗೆ ಪಿಡಿಒ ಅವರೇ ಕಾರಣ. ನಮಗೆ ಯಾವುದೇ ಮಾಹಿತಿಯನ್ನು ನೀಡದೆ ಶವಸಂಸ್ಕಾರಕ್ಕೆ ಅವರು ಅನುಮತಿ ನೀಡಿದ್ದಾರೆ. ಪಿಡಿಓ ರವರು ನಮ್ಮೊಂದಿಗೆ ಸ್ಪಂದಿಸದೇ ಇರುವ ಕಾರಣ ನಾವು ಇಲ್ಲಿ ಅಸಹಾಯಕರಾಗಿದ್ದೇವೆ. ನನಗೆ ಗ್ರಾಮಸ್ಥರು ಮುಖ್ಯ, ನನ್ನನ್ನು ಮತನೀಡಿ ಅಧಿಕಾರಕ್ಕೆ ಕಳಿಸಿದ ಜನತೆಯ ಪರವಾಗಿ ನಾನು ನಿಲ್ಲಬೇಕಾಗುತ್ತದೆ ಎಂದು ಹೇಳಿದರು. ನಂತರ ಅವರು ದೂರವಾಣಿ ಮೂಲಕ ಮಾತನಾಡಿ ಪಿಡಿಓ ಅವರನ್ನು ಸ್ಥಳಕ್ಕೆ ಬರುವಂತೆ ಕೇಳಿಕೊಂಡರು. ಆಗ ಪಿಡಿಒ ರವರು ನನಗೆ ಆಧಾರ್ ಕಾರ್ಡ್ ಸಂಬಂಧಿತವಾಗಿ ಬೇರೆ ಕೆಲಸ ಇರುವ ಕಾರಣ ಈಗ ಬರಲು ಸಾಧ್ಯವಿಲ್ಲ. ಹಾಗೆ ಬರುವುದಾದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಬರುತ್ತೇನೆ ಎಂದು ಹೇಳಿದರು. ಇದನ್ನು ಕೇಳಿ ಸ್ಥಳದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹಾಗಾದರೆ ಅವರು ದೂರು ನೀಡಿ ಬರಲಿ, ನಮಗೂ ಕೂಡ ದೂರು ನೀಡಲು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಸುರೇಶ್ ಅಮೈ ರವರು ನಮ್ಮ ಗ್ರಾಮ ಪಂಚಾಯತ್ ನಲ್ಲಿ ಸ್ಥಳೀಯ ಪಂಚಾಯತ್ ಸದಸ್ಯರುಗಳಿಗೆ ಮತ್ತು ಪಿಡಿಓ ರವರಿಗೆ ಹೊಂದಾಣಿಕೆ ಇಲ್ಲದೆ ಸಮಸ್ಯೆಯಾಗಿದೆ.

ಪಿಡಿಓ ರವರು ಮನಸ್ಸಿಗೆ ಬಂದಂತೆ ಪ್ರವರ್ತಿಸುತ್ತಿದ್ದು ಇದರಿಂದ ಊರಿನ ಜನತೆಗೆ ಸಮಸ್ಯೆ ಉಂಟಾಗಿದೆ. ಊರಿನ ಜನತೆಗೆ ಮತ್ತು ಹೋರಾಟ ಸಮಿತಿಗೆ ನ್ಯಾಯ ಸಿಗಬೇಕು. ಅಲ್ಲಿಯವರೆಗೆ ನಾನು ಬೆಂಬಲವನ್ನು ಸೂಚಿಸುತ್ತ ಅವರೊಂದಿಗೆ ಇರುತ್ತೇನೆ ಎಂದು ಹೇಳಿದರು. ನಂತರ ಜಮಾಯಿಸಿದ ಪ್ರತಿಭಟನಾಕಾರರು ಗೇಟಿಗೆ ಬೀಗವನ್ನು ಜಡಿದು ಪಿಡಿಒ ರವರ ವಿರುದ್ಧ ಧಿಕ್ಕಾರ ಕೂಗಿ ಅಲ್ಲಿಂದ ತೆರಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.