ಸುಳ್ಯ ರೋಟರಿ ವಿದ್ಯಾಸಂಸ್ಥೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಕೆ. ವಿ.ಯವರಿಗೆ ಬೀಳ್ಕೊಡುಗೆ

Advt_Headding_Middle

 

ರೋಟರಿ ಅಂಗ್ಲಮಾಧ್ಯಮವಿದ್ಯಾಸಂಸ್ಥೆಯಲ್ಲಿ ೧೯೮೫ರ ಜೂನ್ ನಿಂದ ಶಿಕ್ಷಕಿಯಾಗಿ, ಪ್ರೌಢಶಾಲಾ ಸಹಶಿಕ್ಷಕಿಯಾಗಿ, ಕಳೆದ ಆರು ವರ್ಷಗಳಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕಿಯಾಗಿ ಒಟ್ಟು ೩೬ ವರ್ಷಗಳ ಸುದೀರ್ಘ ಅವಧಿಯ ಕರ್ತವ್ಯ ನಿರ್ವಹಿಸಿ ಕಳೆದ ಮೇ ೩೧ರಂದು ನಿವೃತ್ತರಾದ ಶ್ರೀಮತಿ ಜಯಲಕ್ಷ್ಮಿ ಕೆ ವಿ ಯವರ ಬೀಳ್ಕೊಡುಗೆ ಕಾರ್ಯಕ್ರಮ ಜುಲೈ ೨೬ ರಂದು ರೋಟರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ. ಪ್ರಭಾಕರ ನಾಯರ್ ರವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶಾಲಾ ಸಂಚಾಲಕ ರೊ. ಜಿತೇಂದ್ರ ಎನ್ ಎ, ಆಡಳಿತ ಮಂಡಳಿ ಕೋಶಾಧಿಕಾರಿ ರೊ. ಗಿರಿಜಾಶಂಕರ ತುದಿಯಡ್ಕ, ವಿದ್ಯಾಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ರೊ. ಪಿ ರಾಮಚಂದ್ರ, ಟ್ರಸ್ಟಿಗಳಾದ ರೊ. ಬಿ ಬೆಳ್ಳಿಯಪ್ಪ ಗೌಡ, ರೊ. ಡಾ.ಪುರುಷೋತ್ತಮ ಕೆ ಜಿ, ರೊ. ಮಹಾಲಕ್ಷ್ಮಿ ಕೊರಂಬಡ್ಕ, ಪಿ.ಯು.ಕಾಲೇಜ್ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ನೂತನ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಅಚ್ಯುತ ಅಟ್ಲುರ್, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ರೊ. ಸನತ್ ಪಿ ಆರ್ ಮತ್ತು ರೊ. ಹರಿರಾಯ ಕಾಮತ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿದರು. ಅಚ್ಯುತ ಅಟ್ಲೂರುರವರು ಅಭಿನಂದನಾ ಮಾತುಗಳನ್ನಾಡಿದರು.

ಸ್ಥಾಪಕ ಅಧ್ಯಕ್ಷರಾದ ರೊ ಪಿ. ರಾಮಚಂದ್ರರವರು,ಸಂಚಾಲಕರಾದ ರೊ. ಜಿತೇಂದ್ರ ಎನ್ ಎ ರವರು, ಶಾಲಾ ವಿದ್ಯಾರ್ಥಿಗಳಾದ ಅಮರ್ ಕೆ ಪಿ ಮತ್ತು ಧೃತಿ ಕೆ ಎಚ್, ಶಿಕ್ಷಕರಾದ ಶ್ರೀಮತಿ ರಶ್ಮಿ ಎಸ್ ಎನ್ ಮತ್ತು ಶ್ರೀಹರಿ ಪೈಂದೋಡಿ, ಹಳೆ ವಿದ್ಯಾರ್ಥಿಗಳದ ರೊ. ಸನತ್ ಪಿ ಆರ್ ಮತ್ತು ಶ್ರೀಮತಿ ತಾರಾ ರೋಷನ್ ಹಾಗೂ ಪೋಷಕರ ನೆಲೆಯಲ್ಲಿ ರೊ ಗಿರಿಜಾಶಂಕರ ತುದಿಯಡ್ಕರವರು ನಿವೃತ್ತರ ಬಗ್ಗೆ ಮಾತನಾಡಿದರು.

ರೋಟರಿ ಶಾಲಾ ಆಡಳಿತ ಮಂಡಳಿ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿ ಯು ಕಾಲೇಜು ಹಾಗೂ ಹಳೆ ವಿದ್ಯಾರ್ಥಿಗಳ ವತಿಯಿಂದ ಶಾಲು ಹಾರ ಫಲಪುಷ್ಪ, ಸ್ಮರಣಿಕೆಗಳೊಂದಿಗೆ ಆತ್ಮೀಯವಾಗಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿಯವರು, ‘ಖಾಸಗಿ ಅನುದಾನರಹಿತ ಶಾಲೆಯಲ್ಲಿ ಸುದೀರ್ಘ ೩೬ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ, ತಾವು ಸಾಗಿ ಬಂದ ಹಾದಿಯನ್ನು ಮೆಲುಕು ಹಾಕಿ ತಮ್ಮ ಈ ಸಾಧನೆಗೆ ಕಾರಣಕರ್ತರಾದ ಪ್ರತಿಯೊಬ್ಬರನ್ನೂ ನೆನಪಿಸಿಕೊಂಡರು’.

ಈ ಸಂದರ್ಭದಲ್ಲಿ ಪೂರ್ವ ಸಂಚಾಲಕರಾದ ರೊ. ಬಾಪು ಸಾಹೇಬ್ ಎಂ ಹಾಗೂ ರೊ ಡಾ. ಕೇಶವ ಪಿ ಕೆ..,ಮತ್ತು ಶ್ರೀಮತಿ ಜಯಲಕ್ಷ್ಮಿಯವರ ಪತಿ, ನಿವೃತ್ತ ಪ್ರೌಢಶಾಲಾ ಅಧ್ಯಾಪಕ ಕಲ್ಕುದಿ ನೋಣಪ್ಪ ಗೌಡ, ಮಕ್ಕಳಾದ ಅಖಿಲೇಶ್ ಕೆ ಎನ್ ಹಾಗೂ ಅಕ್ಷತಾ ಕೆ ಎನ್. ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಬೊಮ್ಮೆಟ್ಟಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳಾದ ಅನನ್ಯ ಎಚ್ ಶೆಟ್ಟಿ ಮತ್ತು ಧ್ರುವ ಟಿ ಎಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಶ್ರೀಮತಿ ಜಯಶ್ರೀ ಕೆ ಹಾಗೂ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಸಹಕರಿಸಿದರು.

ಕಾರ್ಯಕ್ರಮದ ಬಳಿಕ ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ, ಪ್ರಸ್ತುತ ಅಮೆರಿಕಾದಲ್ಲಿರುವ ಹಳೆವಿದ್ಯಾರ್ಥಿ ಕೆ ಸಿ ತೇಜಸ್ವಿ ಕೇದುಂಬಾಡಿ ಇವರಿಂದ ಆಧುನಿಕ ಆವಿಸ್ಕಾರಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.