ಬೆಳ್ಳಾರೆ ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆ

Advt_Headding_Middle

 

 

ಬೆಳ್ಳಾರೆ ಗ್ರಾಮ ಪಂಚಾಯತ್ ವಿಶೇಷ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆಯವರ ಅಧ್ಯಕ್ಷತೆಯಲ್ಲಿ ಜು.28 ರಂದು ಬೆಳ್ಳಾರೆ ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಿತು.
ಪಂಚಾಯತ್ ರಾಜ್ ಮಂತ್ರಾಲಯ ಭಾರತ್ ಸರಕಾರದಿಂದ ಗ್ರಾಮ ಪಂಚಾಯತ್ ಗಳಲ್ಲಿ ನಾಗರೀಕ ಸನ್ನದು ತಯಾರಿಸಲು ನನ್ನ ಪಂಚಾಯತಿ ನನ್ನ ಅಧಿಕಾರ ನಮ್ಮಿಂದ ಜನರಸೇವೆ ಅಭಿಯಾನದಡಿ ವಿಶೇಷ ಗ್ರಾಮ ಸಭೆ ನಡೆಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಭವ್ಯ ಎಂ.ಬಿ.ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಗೌರಿ ನೆಟ್ಟಾರು,ಸದಸ್ಯರಾದ ಅನಿಲ್ ರೈ ಚಾವಡಿಬಾಗಿಲು, ಅನಿಲ್ ರೈ ಪುಡ್ಕಜೆ, ಇಕ್ಬಾಲ್ ಬೆಳ್ಳಾರೆ,ಶ್ರೀಮತಿ ಜಯಶ್ರೀ, ವೀಣಾ, ಮೋಹಿನಿ ಕೆ.ಟಿ, ನಮಿತ ಎಲ್.ರೈ, ಭವ್ಯ ರವಿಕುಮಾರ್,ದಿನೇಶ್ಚಂದ್ರ ಹೆಗ್ಡೆ,ಎನ್.ಎಸ್.ಡಿ.ವಿಠಲದಾಸ್, ಎಂ.ನಸೀಮಾ, ಮಣಿಕಂಠ, ಲೆಕ್ಕ ಸಹಾಯಕಿ ಶ್ರೀಮತಿ ಸುಶೀಲ ಉಪಸ್ಥಿತರಿದ್ದರು.
ಸಭೆಯಲ್ಲಿ ಬೆಳ್ಳಾರೆ ಜೂನಿಯರ್ ಕಾಲೇಜು ಪ್ರಾಂಶುಪಾಲರಾದ ಹಸೀನಾ ಬಾನು,ಉಪಪ್ರಾಂಶುಪಾಲರಾದ ಶ್ರೀಮತಿ ಉಮಾ ಕುಮಾರಿ, ಕೆ.ಪಿ.ಎಸ್.ನ ಮುಖ್ಯೋಪಾಧ್ಯಾಯ ಮಾಯಿಲಪ್ಪ, ಪಶುವೈದ್ಯಾಧಿಕಾರಿ ಸೂರ್ಯನಾರಾಯಣ, ಗ್ರಾಮ ಲೆಕ್ಕಾಧಿಕಾರಿ ವಸುಧಾ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.