ಕೊರೋನಾ ಲಸಿಕೆ: ನ.ಪಂ. ಸಭೆಯಲ್ಲಿ ವಾಗ್ವಾದ

Advt_Headding_Middle

ವಾರ್ಡ್ ವಾರ್ಡ್‌ಗಳಲ್ಲಿ ಲಸಿಕೆ ವಿತರಿಸಲು ಆಗ್ರಹ

ಸುಳ್ಯ ನಗರ ಪಂಚಾಯತ್ ಸಾಮಾನ್ಯ ಸಭೆಯು ಇಂದು ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿಯೇ ಲಸಿಕೆಯ ಕುರಿತು ವಿರೋಧಪಕ್ಷದ ಸದಸ್ಯರುಗಳು ಹಾಗೂ ನಗರ ಪಂಚಾಯತ್ ಅಧ್ಯಕ್ಷರ ನಡುವೆ ಕೆಲವು ಹೊತ್ತು ಮಾತಿನ ಚಕಮಕಿ ನಡೆಯಿತು. ಸಭೆ ಪ್ರಾರಂಭವಾಗುತ್ತಿದ್ದಂತೆ ನಗರ ಪಂಚಾಯತ್ ಸದಸ್ಯ ವೆಂಕಪ್ಪ ಗೌಡರು, ಸಭೆಯಲ್ಲಿ ಮೊದಲು ಕೋವಿಡ್ ಲಸಿಕೆಯ ಕುರಿತು ಚರ್ಚೆ ನಡೆಯಬೇಕೆಂದು ಪಟ್ಟು ಹಿಡಿದರು.

ಇದಕ್ಕೆ ಬೆಂಬಲ ಸೂಚಿಸಿದ ಇನ್ನೋರ್ವ ಸದಸ್ಯ ಕೆ ಎಸ್ ಉಮ್ಮರ್, ಲಾಕ್ಡೌನ್ ಸಂದರ್ಭದಲ್ಲಿ ಸುಳ್ಯದ ಜನತೆ ಹಲವಾರು ಕಷ್ಟ ನೋವುಗಳನ್ನು ಅನುಭವಿಸಿದರು. ನಮ್ಮ ನಗರ ಪಂಚಾಯತಿನ ಅಧ್ಯಕ್ಷರು ಕನಿಷ್ಠಪಕ್ಷ ಈ ಮೂರು ತಿಂಗಳುಗಳಲ್ಲಿ ಒಂದು ಕೋವಿಡ್ ಸಭೆಯನ್ನಾದರೂ ಮಾಡಬೇಕಾಗಿತ್ತು. ಅದು ಬಿಟ್ಟು ನಮ್ಮ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಇಂದಿನ ಸಭೆಗೆ ಕರೆಸಿ ಲಸಿಕೆಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿಕೊಂಡರು. ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಆರೋಗ್ಯ ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ ಸಭೆಗೆ ಬರುವಂತೆ ತಿಳಿಸಿದ ನಂತರ ಸಭೆ ಆರಂಭವಾಯಿತು.

ಪ್ರತೀ ವಾರ್ಡ್ ವಾರ್ಡ್‌ನಲ್ಲಿಯೂ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸಿದರು. ಎರಡು ವರ್ಷದಿಂದ ವಾರ್ಡ್ ನಲ್ಲಿ ಕಾಮಗಾರಿಗೆ ಅನುದಾನ ನೀಡದಿರುವ ಬಗ್ಗೆ ಸದಸ್ಯ ಉಮ್ಮರ್ ಕೆ.ಎಸ್. ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಧರಣಿಯ ಎಚ್ಚರಿಕೆ ನೀಡಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.