ಜು.31 ರಂದು ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಆಲೆಟ್ಟಿ ಗ್ರಾಮದಾದ್ಯಂತ 10- ಸಾವಿರ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮ

Advt_Headding_Middle

 

 

ಸುದ್ದಿ ಸಂಪಾದಕ ಡಾ.ಯು.ಪಿ.ಶಿವಾನಂದರಿಂದ “ಹಸಿರೇ ಉಸಿರು” ವಾಹನ ಜಾಥಾಕ್ಕೆ ಚಾಲನೆ

ಸುಳ್ಯ ಲಯನ್ಸ್ ಕ್ಲಬ್ ಹಾಗೂ ಆಲೆಟ್ಟಿ ಗ್ರಾಮ ಪಂಚಾಯತ್ ಜಂಟಿ ಆಶ್ರಯದಲ್ಲಿ ಆಲೆಟ್ಟಿ ಗ್ರಾಮದಾದ್ಯಂತ ಸುಮಾರು 10 ಸಾವಿರ ಗಿಡ ನೆಡುವ “ಹಸಿರೇ ಉಸಿರು” ಕಾರ್ಯಕ್ರಮದ ಯೋಜನೆಯಡಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಜು.31 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಮೈದಾನದಲ್ಲಿ ನಡೆಯಲಿರುವುದು.
ಬೆಳಗ್ಗೆ 9.30 ಕ್ಕೆ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ.ಯು.ಪಿ. ಶಿವಾನಂದ ರವರು ಉದ್ಘಾಟಿಸಿ ಚಾಲನೆ ನೀಡಲಿದ್ದಾರೆ. ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ಲ|ಆನಂದ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ.
ಆಲೆಟ್ಟಿ ಗ್ರಾಮ ಪಂಚಾಯತ್ ನ ಪ್ರತಿ ವಾರ್ಡಿನ ಸದಸ್ಯರು ಹಾಗೂ ಲಯನ್ಸ್ ಕ್ಲಬ್ ಪದಾಧಿಕಾರಿಗಳು ಮತ್ತು ಸದಸ್ಯರ ನೇತೃತ್ವದಲ್ಲಿ ಗ್ರಾಮದ ಪ್ರತಿ ಮನೆಯಲ್ಲೂ ಗಿಡ ನೆಡುವ ಕಾರ್ಯಕ್ರಮ ನಡೆಯಲಿರುವುದು.
ಅದೇ ದಿನ ಬೆಳಗ್ಗೆ “ಹಸಿರೇ ಉಸಿರು” ಎಂಬ ಟ್ಯಾಬ್ಲೋ ದೊಂದಿಗೆ ಏಕಕಾಲದಲ್ಲಿ ಸುಮಾರು 20 ಪಿಕ್ ಅಪ್ ವಾಹನದಲ್ಲಿ ಗಿಡಗಳನ್ನು ಹೊತ್ತೊಯ್ದ ವಾಹನ ಜಾಥಾ ಸುಳ್ಯ ನಗರದಲ್ಲಿ ಸಂಚರಿಸಿ ಆಲೆಟ್ಟಿ ಗ್ರಾಮದ ಎಲ್ಲಾ ವಾರ್ಡಿಗೆ ಸಂಚರಿಸಲಿರುವುದು ಎಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.