ಸಂಪಾಜೆ: ಎ‌.ಸಿ. ನೇತೃತ್ವದಲ್ಲಿ ಅಧಿಕಾರಿಗಳ ತಂಡದಿಂದ ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆಗಳ ಕುರಿತು ಸಭೆ

Advt_Headding_Middle

 

 

ನೆಟ್ವರ್ಕ್ ಸಮಸ್ಯೆ ಹಿನ್ನೆಲೆ ಶಾಲೆಗಳಿಗೆ ವೈ ಪೈ ಅಳವಡಿಕೆಗೆ ಎ.ಸಿ. ಸೂಚನೆ

ಸಂಪಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಸ್ಯೆಗಳು ಪರಿಹಾರಗೊಂಡಿಲ್ಲವೆಂದು ಗ್ರಾಮಸ್ಥರು ಸುಳ್ಯ ತಹಶಿಲ್ದಾರ್ ಕಛೇರಿಯ ಮುಂಭಾಗ ಕಳೆದ ಎರಡು ವಾರಗಳ ಹಿಂದೆ ಪ್ರತಿಭಟನೆ ನಡೆಸಿದ್ದ, ಹಿನ್ನೆಲೆಯಲ್ಲಿ ಎ.ಸಿ. ನೇತೃತ್ವದಲ್ಲಿ ಅಧಿಕಾರಿಗಳ ತಂಡದ ವತಿಯಿಂದ ಸಮಸ್ಯೆಗಳ ಕುರಿತು ಸಭೆಯು ಸಂಪಾಜೆ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜು.29ರಂದು ನಡೆಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ.ಹಮೀದ್ ಅಧ್ಯಕ್ಷತೆ ವಹಿಸಿ, ಮಾತನಾಡಿ ಸಂಪಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೃಷಿ ತೋಟಗಳಿಗೆ ಕಾಡು ಪ್ರಾಣಿಗಳ ಹಾವಳಿ, ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಜಾಗ, ಪೊಲೀಸ್ ಠಾಣೆಗೆ ಜಾಗ, , ಅಂಗನವಾಡಿ ಕೇಂದ್ರಕ್ಕೆ ಜಾಗ, ಆರೋಗ್ಯ ಕೇಂದ್ರಕ್ಕೆ ಜಾಗ, ವಿದ್ಯುತ್ ಸಬ್ ಸ್ಟೇಶನ್ ವ್ಯವಸ್ಥೆ, 94 ಸಿ ಹಕ್ಕುಪತ್ರದ ಸಮಸ್ಯೆ, ಪ್ಲಾಟಿಂಗ್ ಸಮಸ್ಯೆ, ರಾಜ್ಯ ಹೆದ್ದಾರಿ ಬದಿಗಳಲ್ಲಿ ಅಸಮರ್ಪಕ ಚರಂಡಿ ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಸಹಾಯಕಿಯ ನೇಮಕ ಸೇರಿದಂತೆ ವಿವಿಧ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದ್ದು, ಅಧಿಕಾರಿಗಳು ವಿಶೇಷ ಗಮನಹರಿಸುವಂತೆ ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ನಂದಕುಮಾರ್ ಮಾತನಾಡಿ ಸುಳ್ಯ ತಾಲೂಕಿನಲ್ಲಿ ಒಟ್ಟು ಹದಿನೈದು ಕಡೆಗಳಲ್ಲಿ ಆರೋಗ್ಯ ಸಹಾಯಕಿಯರ ನೇಮಕ ಮಾಡಲಾಗಿದ್ದು, ಸಂಪಾಜೆ, ಗೂನಡ್ಕ, ಮೊಗ್ರ ಹಾಗೂ ಮಡಪ್ಪಾಡಿ ಗ್ರಾಮಗಳಲ್ಲಿ ನೇಮಕಾತಿ ಪ್ರಕ್ರಿಯೆ ಬಾಕಿಯಿದೆ ಎಂದು ಹೇಳಿದರು.
ಸ್ಥಳೀಯವಾಗಿ ಆರೋಗ್ಯ ಇಲಾಖೆಯಲ್ಲಿ ತರಬೇತಿ ಪಡೆದವರು ಇದ್ದರೆ ತಿಳಿಸಿದ್ದಲ್ಲಿ ಮುಂದೆ ನಿಯಮಾನುಸಾರದಂತೆ ನೇಮಕಾತಿ ಮಾಡುತ್ತೇವೆ ಎಂದು ಎ.ಸಿ. ಡಾ. ಯತೀಶ್ ಉಳ್ಳಾಲ್ ಹೇಳಿದರು.
ಕಾಡಾನೆಗಳ ಉಪಟಳದಿಂದ ಗ್ರಾಮದ ಅನೇಕ ಕಡೆಗಳಲ್ಲಿ ಕೃಷಿಕರಿಗೆ ತಾವು ಬೆಳೆದ ಕೃಷಿ ಉತ್ಪನ್ನಗಳು ಕೈಗೆ ಸಿಗುತ್ತಿಲ್ಲ. ಹಗಲು ಹೊತ್ತಿನಲ್ಲಿಯೂ ಕಾಡಾನೆಗಳು ಉಪಟಳ ನೀಡುತ್ತಿದ್ದು, ಕೀಲಾರುಮೂಲೆ, ಬಂಟೋಡಿ ಪ್ರದೇಶದಲ್ಲಿ ವ್ಯಾಪಕವಾಗಿ ಹಾನಿಗೊಳಿಸಿವೆ ಎಂದು ಕೃಷಿಕರಾದ ಕೆ.ಪಿ.ಜಗದೀಶ್ ಹೇಳಿದರು.
ತಗ್ಗುಪ್ರದೇಶದಲ್ಲಿ ಅತಿಯಾಗಿ ಹಾವಳಿ ನಡೆಸುತ್ತಿದ್ದು, ತಡೆಬೇಲೆ ಅಥವಾ ಆನೆಕಂದಕಗಳನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.
ವಲಯ ಅರಣ್ಯಾಧಿಕಾರಿ ಆರ್.ಗಿರೀಶ್ ಮಾತನಾಡಿ ಗ್ರಾಮದಲ್ಲಿ ಅರಣ್ಯ ಪ್ರದೇಶದೊಳಗೆ ಹಾದುಹೋಗುವ ರಸ್ತೆಗಳನ್ನು ಪಟ್ಟಿ ಮಾಡಿ ಇಲಾಖೆಗೆ ನೀಡಿದ್ದಲ್ಲಿ ಆನೆಕಂದಕಗಳನ್ನು ನಿರ್ಮಿಸಬಹುದು ಎಂದು ಹೇಳಿದರು.
ಗ್ರಾಮದಲ್ಲಿ 125 , 129,123, 120 ಸರ್ವೆ ನಂಬರ್ ಗಳನ್ನು ವಿಂಗಡಿಸಿ, ಸರ್ವೆ ಮಾಡಿಸಿಕೊಡಲಾಗುವುದು.
ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮನೆನಂಬ್ರ ನೀಡಲು ತಾತ್ಕಾಲಿಕ ವ್ಯವಸ್ಥೆ ಮಾಡಿಸುತ್ತೇನೆ ಎಂದು ಎ.ಸಿ. ಯತೀಶ್ ಉಳ್ಳಾಲ್ ಹೇಳಿದರು.
ಅಂಗನವಾಡಿ ಕೇಂದ್ರಕ್ಕೆ ಸ್ಥಳ ನೀಡಲು ತಹಶೀಲ್ದಾರ್ ಗೆ ಸೂಚಿಸಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್ ಹೇಳಿದರು.
ಘನತ್ಯಾಜ್ಯ ವಿಲೇವಾರಿಗೆ ವಾಹನ ಖರೀದಿಸಲಾಗುವುದು ಎಂದು ಅಧ್ಯಕ್ಷ ಜಿ.ಕೆ.ಹಮೀದ್ ಹೇಳಿದರು.
ಘನತ್ಯಾಜ್ಯ ಘಟಕಕ್ಕೆ ಅರಣ್ಯ ಇಲಾಖೆಯಲ್ಲಿ ಜಾಗ ಪೆಂಡಿಂಗ್ ನಲ್ಲಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಹಾಗೂ ಸಚಿವರ ನೇತೃತ್ವದಲ್ಲಿ ಸರಿಪಡಿಸಲಾಗುವುದು ಎಂದು ಎ.ಸಿ. ಡಾ. ಯತೀಶ್ ಉಳ್ಳಾಲ್ ಹೇಳಿದರು.
ಗ್ರಾಮದಾದ್ಯಂತ ಸಧ್ಯ ಆನ್ ಲೈನ್ ತರಗತಿಗಳು ನಡೆಯುತ್ತಿದ್ದು, ತೀವ್ರತರಹದ ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಗ್ರಾಮಸ್ಥರೊಬ್ಬರ ಪ್ರಶ್ನೆಗೆ ಉತ್ತರಿಸಿದ ಎ.ಸಿ‌.ಯವರು ಸುಳ್ಯ ತಾಲೂಕಿನಲ್ಲಿ ಸಚಿವ ಅಂಗಾರರ ನೇತೃತ್ವದಲ್ಲಿ ನೆಟ್ವರ್ಕ್ ಸಮಸ್ಯೆ ಕುರಿತು ಈ ಹಿಂದೆ ಸಭೆ ನಡೆಸಿದಾಗ ಹೆಚ್ಚಿನ ನೆಟ್ವರ್ಕ್ ಸಮಸ್ಯೆಯಿರುವ ಕಡೆಗಳಲ್ಲಿ ಬೂಸ್ಟರ್ ಅಳವಡಿಕೆ ಮಾಡುವಂತೆ ನಿರ್ಧರಿಸಿದ್ದು, ನಿಮ್ಮ ಗ್ರಾಮದ ಶಾಲೆಗಳ ಪಟ್ಟಿ ತಯಾರಿಸಿ ಕೊಡಿ ಶಾಲೆಗಳಿಗೆ ವೈಪೈ ಅಳವಡಿಸುವ ಕಾರ್ಯ ಮಾಡಿಸುತ್ತೇನೆ ಎಂದು ಎ.ಸಿ. ಹೇಳಿದರು.
ಸಂಪಾಜೆ ಗ್ರಾಮ ಪಂಚಾಯತಿ ದ.ಕ. ಜಿಲ್ಲೆಯ ಹೆಬ್ಬಾಗಿಲಾಗಿದ್ದು, ಇಲ್ಲಿನ ಆಡಳಿತ ಮಂಡಳಿಯವರು ಗ್ರಾಮದ ಅಭಿವೃದ್ಧಿಗೆ ತುಂಬಾ ಆಸಕ್ತಿ ವಹಿಸುತ್ತಿದ್ದಾರೆ. ದ.ಕ.ಜಿಲ್ಲೆಯಲ್ಲಿ ಸಂಪಾಜೆ ಅತ್ಯುತ್ತಮ ಗ್ರಾಮ ಪಂಚಾಯತಿ ಆಗಿ ಕೆಲಸ ಮಾಡುತ್ತಿದೆ ಎಂದು ಎ.ಸಿ. ಡಾ. ಯತೀಶ್ ಉಳ್ಳಾಲ್ ಹೇಳಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಅನಿತಾಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.