ನೆಹರು ಮೆಮೋರಿಯಲ್ ಕಾಲೇಜು : ಯಶಸ್ವಿಯಾಗಿ ನಡೆದ ರಾಜ್ಯಮಟ್ಟದ ವಬಿನಾರ್

Advt_Headding_Middle

 

 

ನೆಹರು ಮೆಮೋರಿಯಲ್ ಕಾಲೇಜು ಕನ್ನಡ ವಿಭಾಗ ಆಯೋಜಿಸಿದ್ಧ. “ರಂಗ ಶಿಕ್ಷಣದ ಪ್ರಸ್ತುತತೆ” ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ವೆಬಿನಾರ್ ಜು.28 ರಂದು ಝಾಮ್ ಆನ್ಲೈನ್ ಮೂಲಕ ನಡೆಯಿತು.

ನೆಹರೂಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪೂವಪ್ಪ ಕಣಿಯೂರು ವೆಬಿನಾರನ್ನುಉದ್ಘಾಟಿಸಿ ಶುಭ ಹಾರೈಸಿದರು.

.” ರಂಗಭೂಮಿಯ ಸಾಧ್ಯತೆ ಬಹುಮುಖ್ಯವಾಗುವುದಾದರೆ ಅದು ಒಳಗೊಂಡಿರುವ ಅಂಗಾಂಗಳಾದ ಅಭಿನಯ, ಕಥೆ ,ಪಾತ್ರ ,ದೃಶ್ಯ, ಬೆಳಕು, ಬಣ್ಣ ಈ ಎಲ್ಲವನ್ನು ಒಳಗೊಂಡಿರುವ ಈ ಜಗತ್ತಿನ ಏಕೈಕ ಕಲಾ ಪ್ರಕಾರವೇ ರಂಗಭೂಮಿ. ಆ ಶಬ್ಧದಲೇ ಭೂಮಿ ಇದೆ. ಜಗತ್ತನ್ನು, ಮನುಷ್ಯರು ಇರುವ ಜಗತ್ತನ್ನು ಅಂದರೆ ಮನುಷ್ಯರನ್ನು ಸಂಸ್ಕಾರಿಸುವುದಕ್ಕೆ ಬೇರೆ ಕಲಾಪ್ರಕಾರಗಳಿಲ್ಲ ಈ ಎಲ್ಲಾ ಈ ಹಿನ್ನಲೆಯಲ್ಲಿ ಮಗುವೊಂದು ಅಥವಾ ಒಬ್ಬ ವಿದ್ಯಾರ್ಥಿ ರಂಗಭೂಮಿಯಲ್ಲಿ ತನ್ನ ಕಲಿಕಾ ಹಂತದಲ್ಲಿ ತೊಡಗಿಕೊಂಡರೆ , ರಂಗ ಆ ಶಕ್ತಿಯನ್ನು ಬೆಳೆಸಿಕೊಂಡರೆ ಅದಕ್ಕೆ ಪೂರಕವಾದ ವಾತಾವರಣ ಶಿಕ್ಷಣ ಸಂಸ್ಥೆಯಲ್ಲಿ ಇದ್ದರೆ ಆ ಮಗುವಿನ ಅಥವಾ ವಿದ್ಯಾರ್ಥಿಯ ಕಲಿಕಾ ಹಂತದಲ್ಲಿ ರಂಗಭೂಮಿ ಪರಿಚಯ, ಆಪ್ತತೆ, ಒಳಗೊಳ್ಳುವಿಕೆ ಸಾಧ್ಯವಾದರೆ ಮಗುವಿನ ಕೊಡುವ ಅಥವಾ ವಿದ್ಯಾರ್ಥಿಯ ಪದವಿ ಪತ್ರದಲ್ಲಿ ಆ ಆಸಕ್ತಿಯ ಬಗ್ಗೆ ಅಂಕಗಳು ಇಲ್ಲದಿದ್ದರೆ ಕೂಡಾ ಬದುಕುವ ಪರೀಕ್ಷೆ ಖಂಡಿತ ,ಅದು ಪೂರಕವಾಗಿರುತ್ತದೆ ಎಂದು ರಂಗಾ ಆಸಕ್ತ ನಿರ್ದೇಶಕ ಕಲಾವಿದ ರಮೇಶ ಚಂದ್ರದತ್ತ ಅವರು ಹೇಳಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ  ಸಂಜೀವ ಕುದ್ಪಾಜೆ ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು ಗುಣಮಟ್ಟ ಖಾತ್ರಿ ಕೋಶದ ಸಂಯೋಜಕಿ ಶ್ರೀಮತಿ ರತ್ನಾವತಿಯವರು ಅತಿಥಿಗಳನ್ನು ಪರಿಚಯಿಸಿದರು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಕರಾದ ರುದ್ರ ಕುಮಾರ್ ಎಂ.ಎಂ. ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.