ಮೊಗ್ರ : ಓವರ್ ಹೆಡ್ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ

Advt_Headding_Middle

 

ಎಚ್ಚರ ವಹಿಸಲು ಪುತ್ತೂರು ಮೆಸ್ಕಾಂ ವಿಭಾಗ ಸೂಚನೆ

ಗುತ್ತಿಗಾರು ಗ್ರಾಮದ ಮೊಗ್ರ ಎಂಬಲ್ಲಿ ಹೊಸದಾಗಿ ನಿರ್ಮಿಸಲಾದ 33/11 ಕೆ.ವಿ. ವಿದ್ಯುತ್ ವಿತರಣೆ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡಲು ಬೆಳ್ಳಾರೆಯಲ್ಲಿ ಹಾಲಿ ಇರುವ ವಿದ್ಯುತ್ ವಿತರಣಾ ಕೇಂದ್ರದಿಂದ ನೂತನವಾಗಿ ರಚಿಸಲಾದ 5 ಕಿ.ಮೀ. ಭೂಗತ ಕೇಬಲ್ ಹಾಗೂ 17.1 ಕಿ.ಮೀ. ಓವರ್ ಹೆಡ್ ಮಾರ್ಗದಲ್ಲಿ ಜುಲೈ 30 ರಂದು ವಿದ್ಯುತ್ ಸಂಪರ್ಕ ನೀಡಲಾಗುವುದು .
ನೆಟ್ಟಾರಿನಿಂದ ಬೆಳ್ಳಾರೆ, ಕಳಂಜ, ಬಾಳಿಲ, ಮುಪ್ಪೇರಿಯ, ಕಡಬ ತಾಲೂಕಿನ ಎಣ್ಮೂರು, ಸುಳ್ಯ ತಾಲೂಕಿನ ಕಲ್ಮಡ್ಕ, ಪಂಬೆತ್ತಾಡಿ, ಐವತ್ತೊಕ್ಲು, ಕೂತ್ಕುಂಜ, ಗುತ್ತಿಗಾರು ಗ್ರಾಮಗಳ ಮೂಲಕ ಈ ಮಾರ್ಗವು ಹಾದು ಹೋಗುವುದರಿಂದ ಸಾರ್ವಜನಿಕರು ಈ ಮಾರ್ಗದಲ್ಲಿ ಇರುವ ಗೋಪುರ, ಕಂಬ ಹಾಗೂ ಇನ್ನಿತರ ಉಪಕರಣಗಳನ್ನು ಮುಟ್ಟುವುದಾಗಲಿ ಗೋಪುರ, ಕಂಬಗಳನ್ನು ಹತ್ತುವುದಾಗಲಿ, ದನಕರುಗಳನ್ನು ಕಟ್ಟುವುದಾಗಲಿ, ಭೂ ಅಗೆತ ಮುಂತಾದ ಕಾಮಗಾರಿಗಳನ್ನು ಮಾಡಬಾರದೆಂದು ಮೆಸ್ಕಾಂ ಪುತ್ತೂರು ವಿಭಾಗ ಎಚ್ಚರಿಕೆ ನೀಡಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.