ಪಂಜ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ

Advt_Headding_Middle

ಸಂತೋಷ್ ಜಾಕೆಯವರ ತಂಡ ಅಧಿಕಾರ ಸ್ವೀಕಾರ

ಪಂಜ ಲಯನ್ಸ್ ಕ್ಲಬ್ ಇದರ ನೂತನ ಅಧ್ಯಕ್ಷ ಸಂತೋಷ್ ಜಾಕೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು.29 ರಂದು ಪಡ್ಪಿನಂಗಡಿ ‌ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು.

ಪದಗ್ರಹಣ ಅಧಿಕಾರಿ ಮತ್ತು ಮುಖ್ಯ ಅತಿಥಿಯಾಗಿ ಜಿಲ್ಲಾ ಉಪ ರಾಜ್ಯಪಾಲ ಸಂಜೀತ್ ಶೆಟ್ಟಿ ಶುಭ ಹಾರೈಸಿದರು.ಲಯನ್ಸ್ ಕ್ಲಬ್ ಅಧ್ಯಕ್ಷ ಕುಮಾರಸ್ವಾಮಿ ಕಿನ್ನಿಕುಮ್ರಿ ಸಭಾಧ್ಯಕ್ಷತೆ ವಹಿಸಿದ್ದರು. ಪದಗ್ರಹಣ ಬಳಿಕ ನೂತನ
ಅಧ್ಯಕ್ಷ ಸಂತೋಷ್ ಜಾಕೆ ಸಭಾಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಂಪುಟದ ಕೋಶಾಧ್ಯಕ್ಷ ಶ್ರೀನಿವಾಸ ಪೂಜಾರಿ, ಜಿಲ್ಲಾ ಸಂಪುಟದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಯರಾಮ ದೇರಪ್ಪಜ್ಜನ ಮನೆ, ಪ್ರಾಂತೀಯ ಅಧ್ಯಕ್ಷ ಹೇಮನಾಥ್ ಶೆಟ್ಟಿ , ವಲಯಾಧ್ಯಕ್ಷ ವೆಂಕಪ್ಪ ಕೇನಾಜೆ, ಪಂಜ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಡ್ಕ, ಕಾರ್ಯದರ್ಶಿ ಕುಸುಮಾಧರ ಕೆಮ್ಮೂರು, ಕೋಶಾಧ್ಯಕ್ಷ ಕರುಣಾಕರ ಎಣ್ಣೆಮಜಲು, ನೂತನ ಕಾರ್ಯದರ್ಶಿ ರಾಜೇಶ್ ರೈ, ನೂತನ ಕೋಶಾಧ್ಯಕ್ಷ ಬಾಲಿಶ್ ಪಳಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಜಿಲ್ಲಾ ಪ್ರಥಮ ಉಪ ರಾಜ್ಯಪಾಲ ಸಂಜೀತ್ ಶೆಟ್ಟಿರವರನ್ನು
ಸನ್ಮಾನಿಸಿ ಗೌರವಿಸಲಾಯಿತು.

ಇದೇ ಸಂದರ್ಭ ಮೇಘಶ್ರೀ ಅವರ ಕಂಪ್ಯೂಟರ್ ಶಿಕ್ಷಣಕ್ಕೆ ದೇಣಿಗೆ ನೀಡಲಾಯಿತು. ಅಂತರಾಷ್ಟಿಯ ಪೀಸ್ ಪೋಸ್ಟ್ ನಲ್ಲಿ ಪಂಜ ಲಯನ್ಸ್ ಕ್ಲಬ್ಬ್ ನಿಂದ ಪ್ರತಿನಿಧಿಸಿ ಬಹುಮಾನ ಪಡೆದ ಜಸ್ವಿತ್ ತೋಟ ರವರಿಗೆ ಅಂತರಾಷ್ಟ್ರೀಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 97.6 ವಿಶಿಷ್ಟ ಶ್ರೇಣಿಯಲ್ಲಿ ಶೇಕಡ ಅಂಕಗಳಿಸಿ ತೇರ್ಗಡೆ ಹೊಂದಿದ
ಪೂರ್ವಿಕಾ ಕೆ ಕೆ ಕಿನ್ನಿಕುಮ್ರಿ ಯವರನ್ನು ಗೌರವಿಸಲಾಯಿತು. ಕರಿಕಳ ಅಂಗನವಾಡಿ ಕೇಂದ್ರಕ್ಕೆ ಬೇಬಿ ಚೆಯರ್ ನೀಡಲಾಯಿತು.

ಲಯನ್ಸ್ ಕ್ಲಬ್ ಗೆ ಸ್ವಂತ ಕಟ್ಟಡ ಆಗಬೇಕು : ಸಂತೋಷ್ ಜಾಕೆ
ಪಂಜ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಸಂತೋಷ್ ಜಾಕೆಯವರು “ಪಂಜ ಲಯನ್ಸ್ ಕ್ಲಬ್ ಗೆ ಸ್ವಂತ ನಿವೇಶನ ಅಗತ್ಯವಿದೆ. ನಮ್ಮ ಅವಧಿಯಲ್ಲಿ ಕಟ್ಟಡ ನಿರ್ಮಿಸುವ ಯೋಜನೆ ಮಾಡುವುದಾಗಿ ಸಭಾಧ್ಯಕ್ಷತೆ ಮಾತಿನಲ್ಲಿ ಹೇಳಿದರು.


ಕಟ್ಟಡ ನಿರ್ಮಿಸುವುದಾದರೆ ಜಿಲ್ಲಾ ಪ್ರಥಮ ಉಪ ರಾಜ್ಯಪಾಲ ಸಂಜೀತ್ ಶೆಟ್ಟಿ ರೂ 50 ಸಾವಿರ ಮತ್ತು ಜಿಲ್ಲಾ ಸಂಪುಟದ ಕೋಶಾಧ್ಯಕ್ಷ ಶ್ರೀನಿವಾಸ ಪೂಜಾರಿ ರೂ 50 ಸಾವಿರ ದೇಣಿಗೆ ನೀಡುತ್ತೇವೆ” ಎಂದು ಇದೇ ಸಂದರ್ಭದಲ್ಲಿ ಹೇಳಿದರು.


ಕಾರ್ಯಕ್ರಮದಲ್ಲಿ ಜಾಕೆ ಮಾಧವ ಗೌಡರವರು ಸ್ವಾಗತಿಸಿದರು. ಮೋಹನ ಗೌಡ ರವರು ಲಯನ್ಸ್ ನೀತಿ ಸಂಹಿತೆ ಓದಿದರು. ಚಿನ್ಮಯಿ ಕೆ ಪ್ರಾರ್ಥಿಸಿದರು. ದಿಲೀಪ್ ಬಾಬ್ಲುಬೆಟ್ಟು ಲಯನ್ಸ್ ಪ್ರಾರ್ಥನೆ ಮಾಡಿದರು. ಸುಬ್ಬಪ್ಪ ಕಲ್ಗುಂಡಿ ಧ್ವಜ ವಂದನೆ ಮಾಡಿದರು. ಪುರಂದರ ಪನ್ಯಾಡಿ, ಶಶಿಧರ್ ಪಳಂಗಾಯ ಪರಿಚಯಿಸಿದರು. ಪುರುಷೋತ್ತಮ ದಂಬೆಕೋಡಿ ಸೇವಾ ಕೊಡುಗೆ ನಿರ್ವಹಿಸಿದರು. ರಾಜೇಶ್ ರೈ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.