ಬೆಳ್ಳಾರೆ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ

Advt_Headding_Middle

 

ವಿವಿಧ ಕೊಡುಗೆಗಳ ವಿತರಣೆ, ವೃತ್ತಿ ಸೇವಾ ಗೌರವ

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ೨೦೨೧-೨೨ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದೇವಿ ಹೈಟ್ಸ್‌ನ ಅನುಗ್ರಹ ಸಭಾಂಗಣದಲ್ಲಿ ಬುಧವಾರ ನಡೆಯಿತು. ಪೂರ್ವ ಜಿಲ್ಲಾ ಕಾರ್ಯದರ್ಶಿ ಆಸ್ಕರ್ ಆನಂದ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಶುಭಹಾರೈಸಿದರು. ನೂತನ ಅಧ್ಯಕ್ಷರಾಗಿ ಪದ್ಮನಾಭ ಬೀಡು, ಕಾರ್ಯದರ್ಶಿ ಕೆ.ವಿನಯಕುಮಾರ್, ಸರ್ಜೆಂಟ್ ಆರ್ಮ್ ರಾಜಗೋಪಾಲ, ನಿಕಟಪೂರ್ವಾಧ್ಯಕ್ಷ ಮೋನಪ್ಪ ಗೌಡ ತಂಬಿನಮಕ್ಕಿ ಸೇರಿದಂತೆ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ಸನ್ಮಾನ, ವೃತ್ತಿ ಸೇವಾಗೌರವ,ಕೊಡುಗೆ
ಪೆರುವಾಜೆ ಡಾ.ಕೆ.ಶಿವಾರಮ ಕಾರಂತ ಪ್ರಥಮ ದರ್ಜೆ ಕಾಲೇಜಿಗೆ ಹತ್ತು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು. ಕೋವಿಡ್ ಸಂದರ್ಭ ಉತ್ತಮ ಸೇವೆ ನೀಡಿದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿ ಡಾ.ಆಶ್ವಥಿ ಅವರನ್ನು ರೋಟರಿ ವತಿಯಿಂದ ಸನ್ಮಾನಿಸಲಾಯಿತು. ಕೋವಿಡ್ ಸಂದರ್ಭದ ಸೇವೆಯನ್ನು ಗುರುತಿಸಿ ಬೆಳ್ಳಾರೆಯ ಆಶಾ ಕಾರ್ಯಕತೇಯರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿವಮೊಗ್ಗದ ಉದ್ಯಮಿ ಡಿ.ವಿ ಸತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನೂತನ ಸದಸ್ಯರಾಗಿ ಆರೀಫ್ ಬೆಳ್ಳಾರೆ, ನಾಗೇಶ್ ಕುಲಾಲ್, ಮೆಸ್ಕಾಂ ಜೆ.ಇ ಪ್ರಸಾದ್, ಅನಿಲ್ ಬರ್ಫಾ ಸೇರ್ಪಡೆಯಾದರು. ಜಿಲ್ಲಾ ಸಹಾಯಕ ಗವರ್ನರ್ ಜಿತೇಂದ್ರದೆನ್.ಎ, ಝೋನಲ್ ಕಾರ್ಯದರ್ಶಿ ಅಬ್ಬಾಸ್ ಕೆ ಮುರ, ಝೋನಲ್ ಲೆಫ್ಟಿನೆಂಟ್ ಭಾನುಪ್ರಕಾಶ್ ಬಿ.ಎನ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಕೆ.ಪ್ರಭಾಕರನ್ ನಾಯರ್ ಉಪಸ್ಥಿತರಿದ್ದರು. ಕ್ಲಬ್ ಸರ್ವಿಸ್ ಡೈರೆಕ್ಟರ್ ರವೀಂದ್ರ ಗೌಡ ವರದಿ ವಾಚಿಸಿದರು. ಪೂರ್ವಾಧ್ಯಕ್ಷ ಎ.ಕೆ ಮಣಿಯಾಣಿ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ವಿನಯಕುಮಾರ್ ಕೆ ವಂದಿಸಿದರು. ಪ್ರಭಾಕರ ಆಳ್ವ ಮತ್ತು ಉಮೇಶ್ ಮಣಿಕ್ಕಾರ ಕಾರ್ಯಕ್ರಮ ನಿರ್ವಹಿಸಿದರು.
*ಸುದ್ದಿಯ ನೈಜ ನ್ಯೂಸ್ ಡಿ.ವಿ ಸತೀಶ್ ಮೆಚ್ಚುಗೆ*
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿ.ವಿ ಸತೀಶ್ ತನ್ನ ಭಾಷಣದಲ್ಲಿ ದಿ|ಕುರುಂಜಿ ವೆಂಕಟ್ರಮಣ ಗೌಡರ ಸರಳತೆಯನ್ನು ವಿವರಿಸಿದರು. ರೋಟರಿ ಎಂದರೆ ಸೇವೆ ಮತ್ತು ನೆಮ್ಮದಿ ಇದಕ್ಕೆ ಸುದ್ದಿ ಬಿಡುಗಡೆ ಪತ್ರಿಕೆಯನ್ನು ಉಲ್ಲೇಖಿಸಿ ಮಾತನಾಡಿ, ಶಿವಮೊಗ್ಗದಲ್ಲಿ ನನ್ನೂರಿನ ಸುಳ್ಯದ ಸುದ್ದಿ ಬಿಡುಗಡೆಯನ್ನು ಓದುತ್ತಿದ್ದೇನೆ. ನೈಜಾಂಶವನ್ನು ಬೆಳಕಿಗೆ ತರುವ ಮೂಲಕ  ನೈಜ ಸುದ್ದಿಯನ್ನು ಪ್ರಕಟಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.