ಸುಬ್ರಹ್ಮಣ್ಯ : ಇನ್ನರ್ ವೀಲ್ ಕ್ಲಬ್ ಪದಗ್ರಹಣ ಸಮಾರಂಭ

Advt_Headding_Middle

 

 

ಇನ್ನರ್ ವೀಲ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಪದಗ್ರಹಣ ಸಮಾರಂಭ ಜು.29 ರಂದು ಸುಬ್ರಹ್ಮಣ್ಯದ ರವಿ ಕಕ್ಕೆಪದವು ಅವರ ಮನೆಯಲ್ಲಿರುವ ಜೆಸಿ ಭವನದಲ್ಲಿ ನಡೆಯಿತು.

ಇನ್ನರ್ ವೀಲ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ ಅಧ್ಯಕ್ಷರಾಗಿ ಸಚಿತಾ ಗೋಪಾಲ್, ಕಾರ್ಯದರ್ಶಿಯಾಗಿ ಭಾರತಿ ದಿನೇಶ್ ವೇದಿಕೆಯಲ್ಲಿದ್ದು ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ಅಧಿಕಾರಿಯಾಗಿ ಜಾನಕಿ ವೆಂಕಟೇಶ್ ಪದಗ್ರಹಣ ನೆರವೇರಿಸಿದರು. ನಿಕಟಪೂರ್ವ ಅಧ್ಯಕ್ಷೆ ಸವಿತಾ ಕೈಲಾಶ್ ಭಟ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷರಾದ ವಿಜಯಕುಮಾರ ಅಮೈ, ಕುಮಾರಸ್ವಾಮಿ ವಿದ್ಯಾಲಯದ ಕನ್ನಡ ಶಿಕ್ಷಕಿ ವನಿತಾ ಕೂಜುಗೋಡು ಇದ್ದರು.

ಈ ಸಂದರ್ಭ ಸಮಾಜಸೇವೆಗಾಗಿ ಗೀತಾ ರವಿ ಕಕ್ಕೆಪದವು , ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ವಿದ್ಯುತ್ ಸೇವೆಗಾಗಿ
ದೇವಪ್ಪ ಅಂಜೇರಿ ಮತ್ತು
ಪ್ರಶಾಂತ್ ಪೂಜಾರಿ ಅವರುಗಳನ್ನು ಸನ್ಮಾನಿಸಲಾಯಿತು. ಸವಿತಾ ಕೈಲಾಸ್ ಸ್ವಾಗತಿಸಿ, ಭಾರತಿ ದಿನೇಶ್ ವಂದಿಸಿದರು. ಲೀಲಾ ವಿಶ್ವನಾಥ್ ಮತ್ತು ಸೌಮ್ಯಾ ಬಿ ಪೈ ಕಾರ್ಯಕ್ರಮ ನಿರೂಪಿಸಿದರು.

 

ಸಾಂಸ್ಕೃತಿಕ ಕಾರ್ಯಕ್ರಮ
ಪದಗ್ರಹಣ ಸಮಾರಂಭದ ಬಳಿಕ ಸಾಯಿಶ್ರುತಿ ಪಿಲಿಕಜೆ ಇವರಿಂದ ಬೊಂಬೆಯೊಂದಿಗೆ ಮಾತು ಕಾರ್ಯಕ್ರಮ ಮತ್ತು ಇನ್ನರ್ ವೀಲ್ ಕ್ಲಬ್ ಸದಸ್ಯರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.