*ಗ್ರಾಮೀಣ ಭಾಗದ ಎಲ್ಲಾ ರೂಟ್ ಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿ

Advt_Headding_Middle

*ಗ್ರಾಮೀಣ ಭಾಗದ ಎಲ್ಲಾ ರೂಟ್ ಗಳಿಗೆ ಬಸ್ ವ್ಯವಸ್ಥೆ ಕಲ್ಪಿಸ

*ಸುಳ್ಯ ತಾಲೂಕು ಸರಕಾರಿ ನೌಕರರ ಸಂಘ ಮನವಿ*

ಗ್ರಾಮೀಣ ಭಾಗದ ಎಲ್ಲರೂ ರೂಟ್ ಗಳಿಗೂ ಬಸ್ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸುವಂತೆ ಸುಳ್ಯ ತಾಲೂಕು ಸರ್ಕಾರಿ ನೌಕರರ ಸಂಘ ಸುಳ್ಯ ಕೆ.ಎಸ್.ಆರ್.ಟಿ.ಸಿ. ಡಿಪೋ ಮೆನೇಜರ್ ರಿಗೆ ಮನವಿ ಸಲ್ಲಿಸಿದ್ದಾರೆ.

ಜು.31ರಂದು ಸರಕಾರಿ ನೌಕರರ ಸಂಘದ ಸುಳ್ಯ ಶಾಖೆಯ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆಯವರು ಈ ಮನವಿ ಸಲ್ಲಿಸಿದರು. ಈಗಾಗಲೇ ಸರಕಾರಿ ಕಚೇರಿ ಖಾಸಗಿ ಸಂಸ್ಥೆ ಸಂಸ್ಥೆಗಳು ಕಾಲೇಜುಗಳು ಪ್ರಾರಂಭಗೊಂಡು ಕಾರ್ಯನಿರ್ವಹಿಸುತ್ತಿವೆ. ಅದಾಗಿಯೂ ಬಸ್ ಸಂಚಾರ ವ್ಯವಸ್ಥೆ ಹಿಂದಿನ ಸಮಯದಂತೆ ಎಲ್ಲಾ ಮಾರ್ಗಗಳಲ್ಲಿ ಕಾರ್ಯನಿರ್ವಹಿಸದೆ ಇರುವುದರಿಂದ ಸರಕಾರಿ ನೌಕರರು, ಸರಕಾರಿ ನೌಕರರು, ಖಾಸಗಿ ಸಂಸ್ಥೆಯ ನೌಕರರು ವಿದ್ಯಾರ್ಥಿಗಳು ಕ್ಲಪ್ತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಲು ಹಾಗೂ ಅವಧಿ ಮುಗಿದ ನಂತರ ತಮ್ಮ ಮನೆಗಳಿಗೆ ತೆರಳಲು ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

 

 

 

ಗುತ್ತಿಗಾರು ಮಾರ್ಗವಾಗಿ ಸುಳ್ಯದಿಂದ ಅಪರಾಹ್ನ 5 ಗಂಟೆಗೆ ಕೊನೆಯ ಬಸ್ಸು ಸಂಚಾರವಿರುತ್ತದೆ. ಈ ಹಿಂದೆ ಅಪರಾಧ ಸುಳ್ಯದಿಂದ ಬಿಡುತ್ತಿದ್ದ 5.30, 6.15, 7.15, 8:15 ಸಮಯದ ಬಸ್ಸುಗಳು ಮತ್ತು ಗುತ್ತಿಗಾರು ಮಾರ್ಗವಾಗಿ ಸುಳ್ಯಕ್ಕೆ ಬೆಳಗ್ಗೆ ಆಗಮಿಸುವ 8.25ರ ಕಂದ್ರಪ್ಪಾಡಿ ಬಸ್ ಹಾಗೂ ಸುಬ್ರಹ್ಮಣ್ಯದಿಂದ ಬರುವ 9.45ರ ಬಸ್ ರದ್ದುಪಡಿಸಿರುವುದರಿಂದ ಸರಕಾರಿ ನೌಕರರು ಹಾಗೂ ಖಾಸಗಿ ಸಂಸ್ಥೆಯ ನೌಕರರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ರದ್ದುಗೊಳಿಸಿರುವ ಎಲ್ಲ ಮಾರ್ಗದ ಬಸ್ಸು ಸಂಚಾರವನ್ನು ಪುನರ್ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡುವಂತೆ ನಾವು ವಿನಂತಿಸುತ್ತೇವೆ ಎಂದು ಅವರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕರಾದ ಸನತ್ ಎಸ್.ಪಿ., ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬೋದಕೇತರ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ಶಿವಪ್ರಸಾದ್ ಕೆ.ವಿ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.