ಬಿಜೆಪಿ ರೈತ ಮೋರ್ಚಾ ಪ್ರಯತ್ನದ ಫಲವಾಗಿ ಎಲ್ಲಾ ರೈತರಿಗೆ ಮತ್ತೆ ಶೂನ್ಯ ಬಡ್ಡಿದರ ಸಾಲ : ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು

Advt_Headding_Middle

 

 

ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿ ದರದ ಕೃಷಿ ಸಾಲದ ಮೇಲೆ ಜಾರಿಗೆ ತಂದಿದ್ದ ಷರತ್ತನ್ನು ಸರಕಾರ ಸಡಿಲಿಕೆ ಮಾಡಿದೆ. ಇದರಿಂದ ಒಂದು ರೇಶನ್ ಕಾರ್ಡಿಗೆ ಒಂದು ಬಡ್ಡಿರಹಿತ ಕೃಷಿ ಸಾಲ ಎಂಬುದು ರದ್ದಾಗಿದ್ದು ಎಲ್ಲ ಆರ್.ಟಿ.ಸಿ. ಹೊಂದಿದ ರೈತರಿಗೂ 3 ಲಕ್ಷದ ವರೆಗಿನ ಬಡ್ಡಿರಹಿತ ಕೃಷಿ ಸಾಲ ದೊರೆಯಲಿದೆ ” ಎಂದು ದ.ಕ.ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾದಾಕೃಷ್ಣ ಬೊಳ್ಳೂರು ತಿಳಿಸಿದ್ದಾರೆ.
ಜು.31 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಅವರು ಇದರ ವಿವರ ನೀಡಿದರು.
ಬಿ.ಜೆ.ಪಿ.ಯ ರಾಜ್ಯ ರೈತ ಮೋರ್ಚಾ ಸಮಿತಿ, ಕರಾವಳಿ ಭಾಗದ ಸಚಿವರು ಹಾಗೂ ಶಾಸಕರು ಮತ್ತು ನಾವೆಲ್ಲ ನಡೆಸಿದ ಪ್ರಯತ್ನ‌ ಫಲ ನೀಡಿದೆ. ಅದಕ್ಕಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ” ಎಂದು ಅವರು ಹೇಳಿದರು.
” ಸಹಕಾರ ಸಂಘಗಳ ಮೂಲಕ ರೈತರಿಗೆ ನೀಡುವ ಅಲ್ಪಾವಧಿ ಬೆಳೆ ಸಾಲ, ದೀರ್ಘಾವಧಿ ಮತ್ತು ಮಧ್ಯಮಾವಧಿ ಹಾಗು ಕೃಷಿ ಸಂಬಂಧಿಸಿದ ಬೆಳೆ ಸಾಲದಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ 3 ಲಕ್ಷದವರಿಗೆ ಮಾತ್ರ ಬಡ್ಡಿ ರಿಯಾಯಿತಿ ನೀಡಲಾಗುವುದು. ಒಂದು ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಮೊದಲ 3 ಲಕ್ಷದವರೆಗೆ ಸಾಲ ಬಡ್ಡಿ ರಿಯಾಯಿತಿ ಸಾಲ ಅನ್ವಯವಾಗುವುದು. ಉಳಿದ ಸದಸ್ಯರಿಗೆ ಸಹಾಯ ಧನ ಲಭ್ಯವಿರುವುದಿಲ್ಲ. ದೀರ್ಘಾವಧಿ‌ ಮತ್ತು ಮಧ್ಯಮಾವಧಿ ಕೃಷಿ ಹಾಗು ಕೃಷಿ ಸಂಬಂಧಿ ಸಾಲಗಳಿಗೆ ಕುಟುಂಬಕ್ಕೆ 10 ಲಕ್ಷ ಸಾಲ ಅಥವಾ 2004 ರಿಂದ ಈ ವರೆಗೆ 4 ಲಕ್ಷ ಬಡ್ಡಿ ರಿಯಾಯಿತಿ ಪಡೆದಿದ್ದರೆ ಅಂತಹಾ ರೈತರು ಶೇ.3 ಬಡ್ಡಿಯಲ್ಲಿ ರಿಯಾಯಿತಿ ಪಡೆಯಲು ಅರ್ಹರಾಗುವುದಿಲ್ಲ ಎಂದು ಸರಕಾರ ಆದೇಶ ನೀಡಿತ್ತು. ರೈತ ಮೋರ್ಚಾದ ಪ್ರಯತ್ನದ ಫಲವಾಗಿ ಈ ಕಾನೂನನ್ನು ಸರಕಾರ ಈಗ ಪರಿಷ್ಕರಿಸಿದ್ದು ಇಡೀ ರಾಜ್ಯದ ರೈತರಿಗೆ ಅನುಕೂಲವಾಗಲಿದೆ. ಒಂದು ಕುಟುಂಬದಲ್ಲಿ ಎಷ್ಟೇ ಸದಸ್ಯರಿದ್ದರೂ ಅವರಿಗೆ ಕೃಷಿ ಭೂಮಿಯಿದ್ದರೆ ರೂ. 3 ಲಕ್ಷ ಶೂನ್ಯ ಬಡ್ಡಿದರದ ಸಾಲ ಇನ್ನು ಮುಂದೆ ನಿರಾತಂಕವಾಗಿ ದೊರೆಯಲಿದೆ. ಕುಮಾರಸ್ವಾಮಿಯ ಕಾಲದ ಕಾನೂನಿನಿಂದಾಗಿ ಅಧಿಕಾರಿಗಳು ರೂಪಿಸಿದ್ದ ನಿಯಮಾವಳಿಗಳು ರೈತ ಸಮುದಾಯವನ್ನು ಸಂಕಷ್ಟಕ್ಕೆ ದೂಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರೈತ ಮೋರ್ಚಾ ಜಿಲ್ಲಾ ಸಮಿತಿಯು, ರಾಜ್ಯ ಬಿಜೆಪಿ ರೈತಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಮತ್ತು ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಅವರ ಮೂಲಕ ಸರಕಾರದ ಗಮನಕ್ಕೆ ತಂದಿದ್ದರಲ್ಲದೆ, ರೈತಮೋರ್ಚಾದ ಜಿಲ್ಲಾಧ್ಯಕ್ಷನಾಗಿ ನಾನು ಅದರ ಬೆನ್ನು ಬಿದ್ದಿದ್ದೆ. ಸಚಿವರಾಗಿದ್ದ ಎಸ್.ಅಂಗಾರ, ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಸಹ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರದ ಗಮನಕ್ಕೆ ತಂದು ಕಾನೂನನ್ನು ಪರಿಷ್ಕರಿಸಲು ಒತ್ತಾಯಿಸಿದ್ದರು. ಈ ಎಲ್ಲದರ ಫಲವಾಗಿ ಸರಕಾರ ಕಾನೂನು ಬದಲಾಯಿಸಿದ್ದು ಎಲ್ಲಾ ರೈತರಿಗೂ ಅನುಕೂಲ ಮಾಡಿಕೊಟ್ಟಿದೆ.
ಸರಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮಾಸಿಕ 20 ಸಾವಿರ ರೂ ವೇತನ, ಪಿಂಚಣಿ ಪಡೆಯುವ ಮತ್ತು ಕಳೆದ ಮೂರು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ್ದರೂ ಅಂತಹ ರೈತರು ಶೂನ್ಯ ಬಡ್ಡಿಯ ಪ್ರಯೋಜನ ಪಡೆಯುವಂತಿಲ್ಲ ಎಂಬ ನಿಯಮಾವಳಿಯನ್ನು ಕೂಡ ಬದಲಾಯಿಸಲಾಗಿದೆ ” ಎಂದು ಬೊಳ್ಳೂರು ವಿವರಿಸಿದರು.
ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅಧಿಕಾರ ವಹಿಸಿಕೊಂಡ ಕೂಡಲೇ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಯೋಜನೆಯನ್ನು ತಂದಿರುವುದು ಅಭಿನಂದನಾರ್ಹವಾಗಿದೆ. ಮುಂದೆ ಸಾಲಮನ್ನಾ ಯೋಜನೆಯಿಂದ ವಂಚಿತರಾಗಿರುವ ಎಲ್ಲರಿಗೂ ಸಾಲಮನ್ನಾ ಒದಗಿಸುವಂತೆ ಸರಕಾರದ ಗಮನ ಸೆಳೆಯಲಾಗುವುದು ಎಂದು ಅವರು ಹೇಳಿದರು.
*ಕಾನ, ಬಾಣೆ, ಕುಮ್ಕಿಯ ಹಕ್ಕು ಒದಗಿಸಲು ಪ್ರಯತ್ನ: ಎ.ವಿ.ತೀರ್ಥರಾಮ*

ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಎ.ವಿ.ತೀರ್ಥರಾಮರು ಮಾತನಾಡಿ, ರೈತರಿಗೆ ನೀಡಲಾಗುವ ಶೂನ್ಯ ಬಡ್ಡಿದರ ಸಾಲದ ಮೇಲಿನ ಷರತ್ತು ಸಡಿಲಿಸುವಂತೆ ದ.ಕ.ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅವರು ರಾಜ್ಯ ಮಟ್ಟದ ನಾಯಕರುಗಳ ಬೆನ್ನು ಬಿದ್ದಿದ್ದರು. ಒಂದು ಹಂತದಲ್ಲಿ ನಮ್ಮ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯವರು, ನಿಮ್ಮ ಜಿಲ್ಲಾಧ್ಯಕ್ಷರು ನಮ್ಮನ್ನು ನಿದ್ದೆ ಮಾಡಲೂ ಬಿಡುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ದ.ಕ.ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರ ರೀತಿ ಪಟ್ಟು ಹಿಡಿದು ಕೆಲಸ ಮಾಡಬೇಕು ಎಂದು ರಾಜ್ಯ ರೈತಮೋರ್ಚಾ ಕಾರ್ಯಕಾರಿಣಿಯಲ್ಲಿ ಹೇಳಿದ್ದರು. ನಾನು ಅದೇ ಕಾರ್ಯಕಾರಿಣಿಯಲ್ಲಿ ಸಹಾರಿ ಸಚಿವ ಎಸ್.ಟಿ. ಸೋಮಶೇಖರ್ ರವರ ಮುಂದೆ ಈ ನಿಬಡ್ಡಿ ಕೃಷಿಸಾಲದ ವಿಚಾರ ಪ್ರತಿಪಾದಿಸಿದಾಗ ಸಚಿವರು ಭರವಸೆ ನೀಡಿದ್ದರು. ಅದರಂತೆ ಸರಕಾರ ನಡೆದುಕೊಂಡಿದೆ ” ಎಂದರಲ್ಲದೆ, ಮುಂದೆ ಪ್ರತಿ ಮನೆಯ ರೈತರ ಮಕ್ಕಳಿಗೂ ಸರಕಾರಿ ಉದ್ಯೋಗದಲ್ಲಿ ಅವಕಾಶ ದೊರೆಯುವಂತೆ, ಕಾನ, ಬಾಣೆ, ಕುಮ್ಕಿಯ ಹಕ್ಕನ್ನು ರೈತರಿಗೆ ಒದಗಿಸುವಂತೆಯೂ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ” ಎಂದರು.

ಸುದ್ದಿ ಗೋಷ್ಠಿಯಲ್ಲಿ ರೈತಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಕುಮಾರ್ ರೈ ಮೇನಾಲ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.