ಅರಂತೋಡು: ರೈತರ ಉತ್ಪಾದಕ ಸಂಸ್ಥೆಯ ಕುರಿತು ಮಾಹಿತಿ ಕಾರ್ಯಗಾರ

Advt_Headding_Middle

ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಸಹಕಾರದೊಂದಿಗೆ ಅರಂತೋಡಿನ ಮಾಜಿ ಪ್ರಾಂಶುಪಾಲ ಕೆ.ಜಿ. ಗಂಗಾಧರ್ ಮತ್ತು ಜತ್ತಪ್ಪ ಮಾಸ್ತರ್ ನೇತೃತ್ವದಲ್ಲಿ ಅರಂತೋಡು ಸಿರಿ ಸೌಧ ಸಭಾಭವನದಲ್ಲಿ ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ರವರ ಅಧ್ಯಕ್ಷತೆಯಲ್ಲಿ ರೈತರ ಉತ್ಪಾದಕ ಸಂಸ್ಥೆಯ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು. ಈ ಸಂದರ್ಭದಲ್ಲಿ 2020-21 ನೇ ಸಾಲಿನ ಅರಂತೋಡು ಕೃಷಿ ಉತ್ಪಾದಕರ ಸಂಸ್ಥೆ ರಚಿಸಲಾಯಿತು.

ನಿಟ್ಟೆ ಎಜ್ಯುಕೇಶನ್ ಟ್ರಸ್ಟ್‌ನ ಪ್ರಸನ್ನರವರು ಮಾಹಿತಿಯನ್ನು ನೀಡಿದರು. ರೈತರಿಂದ ರೈತರಿಗಾಗಿ ರೈತರಿಗೋಸ್ಕರ ಕಂಪೆನಿ ಕಾಯಿಲೆಯಡಿ ನೋಂದಾಯಿಸಲ್ಪಡುವ ಸಂಸ್ಥೆಗೆ ಆರ್.ಟಿ.ಸಿ. ಹೊಂದಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವಂತಹ ರೈತರು ಹೆಸರು ನೋಂದಾಯಿಸಿಕೊಳ್ಳಬಹುದು ಮತ್ತು ಸಂಘಕ್ಕೆ ಸೇರಲು ಬೇಕಾದ ಮಾಹಿತಿಯನ್ನು ನೀಡಿದರು. ಇದರ ಬಗ್ಗೆ ಡಾ.ರಂಗಯ್ಯ, ಭವಾನಿಶಂಕರ ಅಡ್ತಲೆ ಮೊದಲಾದವರು ಅಧಿಕಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟದ ಬಗ್ಗೆ ಪ್ರಶ್ನಿಸಿದಾಗ ಪ್ರಸನ್ನರವರು ಸೂಕ್ತವಾದ ಉತ್ತರವನ್ನು ನೀಡಿದರು.


ವೇದಿಕೆಯಲ್ಲಿ ಡಾ.ರಂಗಯ್ಯ, ಗ್ರಾ.ಪಂ. ಸದಸ್ಯ ಶಿವಾನಂದ ಕುಕ್ಕುಂಬಳ, ತೋಟಗಾರಿಕಾ ಇಲಾಖೆ ಅಧಿಕಾರಿ ಅರ್ಬಣ್ಣ ಪೂಜಾರಿ ಉಪಸ್ಥಿತರಿದ್ದು, ಸಲಹೆ ಸೂಚನೆ ನೀಡಿದರು. ಸಭೆಯನ್ನುದ್ದೇಶಿಸಿ ಸಂತೋಷ್ ಕುತ್ತಮೊಟ್ಟೆ ಹಾಗೂ ಶಿವಾನಂದ ಕುಕ್ಕುಂಬಳರವರು ಮಾತನಾಡಿದರು.

ಸುಳ್ಯ ಫೆಡೆರೇಷನ್‌ಗೆ ಕುಸುಮಾಧರ ಅಡ್ಕಬಳೆ, ಹರಿಶ್ಚಂದ್ರ ಹೊದ್ದೆಟ್ಟಿ, ದೀಪಕ್ ಕುತ್ತಮೊಟ್ಟೆ, ಪ್ರದೀಪ್ ನಾಯರ್ ಇವರನ್ನು ಆಯ್ಕೆಮಾಡಲಾಯಿತು. ಕಾರ್ಯಕ್ರಮದಲ್ಲಿ ಕೆ.ಆರ್. ಗಂಗಾಧರ್‌ರವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜತ್ತಪ್ಪ ಮಾಸ್ತರ್ ವಂದಿಸಿದರು. ಈ ಸಂದರ್ಭದಲ್ಲಿ ಊರಿನ ಕೃಷಿಕರು ಉಪಸ್ಥಿತರಿದ್ದು, ಮಾಹಿತಿ ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.