ಪಡಿತರ ಚೀಟಿದಾರರ ಇ-ಕೆವೈಸಿ ನೀಡಲು ಸೂಚನೆ

Advt_Headding_Middle

ಸರ್ಕಾರದ ಸೂಚನೆಯಂತೆ ಎಲ್ಲಾ ಪಡಿತರ ಚೀಟಿದಾರರ ಕುಟುಂಬದ ಸದಸ್ಯರ ಇ-ಕೆವೈಸಿ ಸಂಗ್ರಹಣಾ ಕಾರ್ಯವನ್ನು ಕಳೆದ 4 ವರ್ಷಗಳಿಂದ ನಿರ್ವಹಿಸಲಾಗುತ್ತಿದೆ. ಆದರೂ ಕೆಲವು ಕಾರ್ಡುದಾರರು ಈವರೆಗೆ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಇ-ಕೆವೈಸಿ ನೀಡಿರುವುದಿಲ್ಲ. ಅಂತಿಮವಾಗಿ ಆ.01 ರಿಂದ ಆ.10 ರವೆರೆಗೆ ಮರುಸಂಗ್ರಹಿಸಲು ಆದೇಶವಾಗಿದ್ದು, ಆಗಸ್ಟ್ 2021 ರ ಮಾಹೆಯಿಂದ ಇ-ಕೆವೈಸಿ ನೀಡದ ಸದಸ್ಯರ ಪಡಿತರ ತಡೆಹಿಡಿಯಲಾಗುತ್ತದೆ. ಆದುದರಿಂದ ಬಾಕಿ ಉಳಿದಿರುವ ಎಲ್ಲಾ ಚೀಟಿದಾರರು ಕೂಡಲೇ ತಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗಳಲ್ಲಿ ತಮ್ಮ ಎಲ್ಲಾ ಕುಟುಂಬದ ಸದಸ್ಯರ ಇ-ಕೆವೈಸಿ ನೀಡುವಂತೆ ತಿಳಿಸಿದೆ. ಇ-ಕೆವೈಸಿ ನೀಡುವಾಗ ಜಾತಿ ದೃಢಪತ್ರ, ಅನಿಲ ಸಂಪರ್ಕದ ವಿವರ ಮತ್ತು ಆಧಾರ್ ಸಂಖ್ಯೆಗೆ ನೊಂದಾಯಿಸಿದ ಮೊಬೈಲ್ ಸಂಖ್ಯೆಯನ್ನು ಹಾಜರುಪಡಿಸಬೇಕು.


ಇ-ಕೆವೈಸಿ ನೀಡಲು ಯಾವುದೇ ಶುಲ್ಕ ಇರುವುದಿಲ್ಲ. ಹೊಸದಾಗಿ ಅಂಚೆ ಮೂಲಕ ಪಡಿತರ ಚೀಟಿ ಪಡೆದವರು ಹಾಗೂ ಈಗಾಗಲೇ ಇ-ಕೆವೈಸಿ ಆಗಿರುವ ಕಾರ್ಡುದಾರರು ಮತ್ತೊಮ್ಮೆ ಇ-ಕೆವೈಸಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಸುಳ್ಯ ತಹಶೀಲ್ದಾರ್ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.