ರಾಜ್ಯದಲ್ಲೇ ಇದು ಮಾದರಿ, ಮೊದಲ ತರಬೇತಿ ಕಾರ್ಯಕ್ರಮ : ಬೋಜರಾಜ್

Advt_Headding_Middle

ಸುಬ್ರಹ್ಮಣ್ಯದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಬರೆಯುಲಿರುವ ಅಭ್ಯರ್ಥಿಗಳ ಉಚಿತ ತರಬೇತಿ, ಸಮಾರೋಪ

 

ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಕಡಬ ತಾಲೂಕು ಕ್ರೀಡಾ ಭಾರತಿ ವತಿಯಿಂದ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಯೋಗದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ ಬರೆಯಲಿರುವವರಿಗೆ ಒಂದು ವಾರದ ಉಚಿತ ತರಬೇತಿ ನಡೆದು ಜು.೩೧ ರಂದು ಸಮಾಪನಗೊಂಡಿತು. ೫೧ ಮಂದಿ ಶಿಭಿರಾರ್ಥಿಗಳು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕ್ರೀಡಾ ಭಾರತಿಯ ವಲಯ ಸಂಚಾಲಕರಾದ ಬೋಜರಾಜ್ ಮಾತನಾಡಿ, ರಾಜ್ಯದಲ್ಲೇ ಇದು ಮಾದರಿ ಹಾಗೂ ಮೊದಲ ಉಚಿತ ತರಬೇತಿ ಕಾರ್ಯಕ್ರಮ ಸಂಘಟಕರು ಬಾರಿ ಕಷ್ಟ ಪಟ್ಟು ಈ ತರಬೇತಿ ಆಯೋಜಿಸಿದ್ದಾರೆ. ನೀವು ಯಾರೂ ಯಾವುದೇ ಅಡ್ಡದಾರಿ ಹಿಡಿದು ಉದ್ಯೋಗ ಪಡೆಯಲು ಮಂದಾಗಬಾರದು ಎಂದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೃಷ್ಣ ಶೆಟ್ಟಿ ಪಾಲೆಮಾರ್, ಜಿಲ್ಲಾ ಉಪಾಧ್ಯಕ್ಷ ದಯಾನಂದ ಮಾಡ, ಎಸ್ ಎಸ್ ಪಿ ಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಸದಸ್ಯರಾದ ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ ಮರ್ದಾಳ, ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ತರಭೇತಿ ಪಡೆದ ಸಂದೀಪ್ ಪಲ್ಲೋಡಿ ಅನಿಸಿಕೆ ವ್ಯಕ್ತಪಡಿಸಿದರು . ಕಡಬ ತಾಲೂಕು ಕ್ರೀಡಾ ಭಾರತೀಯ ಅಧ್ಯಕ್ಷ ಶಿವರಾಮ ಏನೆಕಲ್ಲು ಸ್ವಾಗತಿಸಿದರು. ಕಾರ್ಯದರ್ಶಿ ಮಾದವ ಕೋಲ್ಪೆ ವಂದಿಸಿದರು. ಕೊಣಾಲು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ತರಬೇತಿ ಕಾರ್ಯದಲ್ಲಿ ಪ್ರಮುಖವಾಗಿ ಹಾಸನದ ನಿವೃತ್ತ ಕಮಿಷನರ್ ಗೋಪಾಲಕೃಷ್ಣ, ಮಂಗಳೂರು ಕಮಿಷನರ್ ಕೇಂದ್ರದ ಜಿಲ್ಲಾ ಸುಪರಿಟೆಂಡೆಂಟ್ ರವೀಂದ, ಸುಬ್ರಹ್ಮಣ್ಯ ಠಾಣೆಯ ಎಸ್ ಐಜಂಬೂರಾಜ್ ಮಹಾರಾಜ್  , ರಾಮಕುಂಜೇಶ್ವರ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸತೀಶ್ ಭಟ್, ಕೆ ಎಸ್ ಎಸ್ ಕಾಲೇಜು ಮತ್ತು ಎಸ್ ಎಸ್ ಪಿ ಯು ಕಾಲೇಜಿನ ಉಪನ್ಯಾಸಕರು ತರಬೇತಿ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.