ಜೆ ಸಿ ಐ ಸುಳ್ಯ ಸಿಟಿ ರೀಜನ್ ವತಿಯಿಂದ ಆಟಿ ಉತ್ಸವ

Advt_Headding_Middle

ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಮೌನ ಸಾಧಕಿ ಪ್ರಶಸ್ತಿ ಪ್ರದಾನ

ಜೆ ಸಿ ಐ ಸುಳ್ಯ ಸಿಟಿ ರೀಜನ್ ಇದರ ಆಶ್ರಯದಲ್ಲಿ ಆಟಿ ಉತ್ಸವ ಮತ್ತು ವಿಶ್ವ ಅರೆಭಾಷೆ ಹಬ್ಬ ಮ್ಯಾಟ್ರಿಕ್ಸ್ ಸಭಾಂಗಣದಲ್ಲಿ ಇಂದು (ಆ.೨) ನಡೆಯಿತು. ವಲಯ ಉಪಾಧ್ಯಕ್ಷೆ ಹೇಮಲತಾ ಪ್ರದೀಪ್ ಬಾಕಿಲ ಚೆನ್ನಮಣೆ ಆಟ ಆಡುವುದರ ಮೂಲಕ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಂದ್ರಶೇಖರ್ ಕನಕಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ದಿನೇಶ್ ಮುರುಳ್ಯ, ಗೌರವ ಉಪಸ್ಥಿತಿಯಾಗಿ ಪುಷ್ಪಾವತಿ ಅದಿತ್ಯ ಬೆಳ್ಳಾರೆ ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಜೆ ಸಿ ವಿನಯ್‌ರಾಜ್ ಮಡ್ತಿಲ, ಜೆ ಸಿ ಸ್ಥಾಪಕ ಅಧ್ಯಕ್ಷ ಮನಮೋಹನ್ ಬಳ್ಳಡ್ಕ, ಕಾರ್ಯದರ್ಶಿ ಅಶ್ವತ್ ಅಡ್ಕಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಇಬ್ಬರು ಆಶಾ ಕಾರ್ಯಕರ್ತೆಯರಾದ ಭವಾನಿ ಬುಡ್ಲೆಗುತ್ತು, ವೀಣಾ ಕಾರಿಂಜ ಮತ್ತು ಆರೋಗ್ಯ ಸಹಾಯಕಿಯಾದ ಪುಷ್ಪಾವತಿರವನ್ನು ಮೌನ ಸಾಧಕಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕೆ.ಟಿ. ಭಾಗೇಶ್ ದಂಪತಿಗಳಿಗೆ ಪ್ರೇಮಿಗಳ ದಿನಾಚರಣೆ ದಿನ ನಡೆದ ವಿಡಿಯೋ ಡ್ಯಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದಕ್ಕೆ ಪತ್ರವನ್ನು ನೀಡಲಾಯಿತು. ನಂದರಾಜ್ ಸಂಕೇಶ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಚಂದ್ರಶೇಖರ ಸ್ವಾಗತಿಸಿ, ಅಶ್ವತ್ ಅಡ್ಕಾರ್ ವಂದಿಸಿದರು. ಸಂಪ್ರಿತಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಗಲಿದ ಯೋಗ ಶಿಕ್ಷಕರಾದ ಆದಿತ್ಯ ಬೆಳ್ಳಾರೆ ರವರಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆಟಿಯ ವಿಶೇಷ ಊಟವನ್ನು ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.