ಕಳಂಜ: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಬಗ್ಗೆ ಪೂರ್ವಭಾವಿ ಸಭೆ

Advt_Headding_Middle

 

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವನ್ನು ಕಳಂಜ ಗ್ರಾಮಸ್ಥರು, ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಆಚರಿಸುವ ನಿಟ್ಟಿನಲ್ಲಿ ಪ್ರಥಮ ಪೂರ್ವಭಾವಿ ಸಭೆಯು ಆ. 2ರಂದು ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ವಹಿಸಿದ್ದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಕೂಸಪ್ಪ ಗೌಡ ಮುಗುಪ್ಪು, ಉಪಾಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಕಳಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಧರ ಕೆ. ಪ್ರಾಸ್ತಾವಿಕವಾಗಿ ಮಾತನಾಡುತ್ತಾ 75 ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಸರಕಾರದ ಆದೇಶಕ್ಕನುಗುಣವಾಗಿ ಸುದ್ದಿ ಸಂಪಾದಕರ ಆಶಯದಂತೆ ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳು ಮತ್ತು ಗ್ರಾಮಸ್ಥರ ಒಗ್ಗೂಡುವಿಕೆಯಿಂದ ಆಚರಿಸೋಣ ಎಂದರು. ಸುದ್ದಿ ವರದಿಗಾರ ಮತ್ತು ಕಳಂಜ ಬಳಕೆದಾರರ ವೇದಿಕೆಯ ಅಧ್ಯಕ್ಷ ಈಶ್ವರ ವಾರಣಾಶಿ ಸ್ವಾಗತಿಸಿ, ಕಳಂಜ ಯುವಕ ಮಂಡಲದ ಅಧ್ಯಕ್ಷ ಸುದ್ದಿ ಪತ್ರಿಕೆಯ ವರದಿಗಾರ ಶಿವರಾಮ ಕಜೆಮೂಲೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸ್ಥಳೀಯ ಶಾಲಾ‌ ಶಿಕ್ಷಕರು, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರು, ಕಳಂಜ ಗ್ರಾ.ಪಂ. ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಊರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ವಿಯಾಗಿ ನಡೆಯುವಲ್ಲಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ರೂಪುರೇಷೆ: ಕಳಂಜ ಗ್ರಾ.ಪಂ. ವ್ಯಾಪ್ತಿಯ 3 ಸರಕಾರಿ ಶಾಲೆಗಳ ಮಕ್ಕಳಿಗೆ ದೇಶಭಕ್ತಿಯನ್ನು ಬಿಂಬಿಸುವ ದೇಶ ಭಕ್ತಿಗೀತೆ, ಪ್ರಬಂಧ ಸ್ಪರ್ಧೆಗಳನ್ನು‌ ಆಯಾ ಶಾಲೆಗಳಲ್ಲಿ ಏರ್ಪಡಿಸುವುದು ಮತ್ತು ಅದರಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ದೇಶ ಭಕ್ತಿಗೀತೆ ಮತ್ತು ಪ್ರಬಂಧಗಳನ್ನು ಆ. 15ರಂದು ವೇದಿಕೆಯಲ್ಲಿ ನಡೆಸುವುದು, ಆ. 15ರಂದು 3 ಶಾಲೆಗಳ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸುವುದೆಂದು ನಿರ್ಣಯಿಸಲಾಯಿತು. ಎಲ್ಲ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಸಭಾ ಕಾರ್ಯಕ್ರಮದಲ್ಲಿ ವಿತರಿಸುವುದು. ಆ. 15ರಂದು ಬೆಳಿಗ್ಗೆ ಆಯಾ ಸಂಸ್ಥೆಗಳು ಪ್ರತೀ ವರ್ಷದಂತೆ ಧ್ವಜಾರೋಹಣಗೈದು ಬಳಿಕ ಕೋಟೆ ಮುಂಡುಗಾರು ಶಾಲೆಯ ಬಳಿ ಸೇರುವುದು. ನಂತರ ಅಲ್ಲಿಂದ ಘೋಷಣೆಯೊಂದಿಗೆ ಮೆರವಣಿಗೆ ಮೂಲಕ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆವರಣಕ್ಕೆ ಆಗಮಿಸಿ, ಧ್ವಜಾರೋಹಣ ಮಾಡಿ ಸಭಾ ಕಾರ್ಯಕ್ರಮ ನಡೆಸುವುದು. ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಗ್ರಾಮ ವ್ಯಾಪ್ತಿಯ ಯೋಧರನ್ನು ಗೌರವಿಸುವುದೆಂದು ನಿರ್ಣಯಿಸಲಾಯಿತು. ಆ. 11ರಂದು 2 ನೇ ಪೂರ್ವಭಾವಿ ಸಭೆ ನಡೆಯಲಿದ್ದು, ಕಾರ್ಯಕ್ರಮಗಳ ರೂಪುರೇಷೆ ಅಂತಿಮಗೊಳ್ಳಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.