ಕಲ್ಮಡ್ಕ ಗ್ರಾ. ಪಂ. ವಿಶೇಷ ಗ್ರಾಮಸಭೆ

Advt_Headding_Middle

 

ಅಮೃತ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪಂಬೆತ್ತಾಡಿ, ಕಲ್ಮಡ್ಕ ಗ್ರಾಮಗಳ ವಿವಿಧೆಡೆ ಸ್ವಾತಂತ್ರ್ಯದ ನಡಿಗೆ ಏರ್ಪಡಿಸಲು ನಿರ್ಧಾರ
ಕಲ್ಮಡ್ಕ ಗ್ರಾಮ ಪಂಚಾಯತಿನ ವಿಶೇಷ ಗ್ರಾಮ ಸಭೆ ಆಗಸ್ಟ್ 2 ರಂದು ಪಡ್ಪಿನಂಗಡಿಯ ಶಿವಗೌರಿ ಕಲಾ ಮಂದಿರದ ವಠಾರದಲ್ಲಿ ನಡೆಯಿತು. ನನ್ನ ಪಂಚಾಯತ್, ನನ್ನ ಅಧಿಕಾರ, ನಮ್ಮಿಂದಲೇ ಜನರ ಸೇವೆ ಎಂಬ ಅಭಿಯಾನದ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತಲ್ಲದೆ ಮುಂಬರುವ ಆಗಸ್ಟ್ 15 ರಂದು ನಡೆಯುವ ಎಪ್ಪತ್ತೈದನೇ ಸ್ವಾತಂತ್ರ್ಯೋತ್ಸವವನ್ನು ಕಲ್ಮಡ್ಕ ಮತ್ತು ಪಂಬೆತ್ತಾಡಿ ಗ್ರಾಮಗಳ ಜನವಸತಿ ಪ್ರದೇಶಗಳಲ್ಲಿ *ಸ್ವಾತಂತ್ರ್ಯದ ನಡಿಗೆ* ಯನ್ನು ಹಮ್ಮಿಕೊಳ್ಳುವ ಮೂಲಕ ಜನರ ಹಬ್ಬವಾಗಿ ಆಚರಿಸಬೇಕೆಂದು ನಿರ್ಧರಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಹಾಜಿರಾ ಗಫೂರ್ ವಹಿಸಿದ್ದರು. ಉಪಾಧ್ಯಕ್ಷ ಮಹೇಶ್ ಕರಿಕ್ಕಳ ಮತ್ತು ಇತರ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಕಲ್ಮಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಲ್ಮಡ್ಕ ಪೇಟೆ ಪಡ್ಪಿನಂಗಡಿ ಪೇಟೆ ಮತ್ತಿತರ ಕಡೆಗಳ ಸುಮಾರು ಐವತ್ತೈದು ಅಂಗಡಿಗಳವರಿಂದ ಕಸವನ್ನು ವಾಹನದಲ್ಲಿ ಹೋಗಿ ಸಂಗ್ರಹಿಸುವುದೆಂದು ನಿರ್ಧರಿಸಲಾಯಿತು. ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ಕಸಗಳನ್ನು ಬೇರೆ ರೀತಿಯಲ್ಲಿ ವಿಲೇವಾರಿ ಮಾಡದೆ ಸಂಗ್ರಹಿಸಿಟ್ಟು ಗ್ರಾಮ ಪಂಚಾಯತ್ ನ ವಾಹನಕ್ಕೆ ನೀಡಬೇಕು. ಪ್ರತಿ ತಿಂಗಳು ಆ ಅಂಗಡಿಗಳವರು ನಿಗದಿತ ತ್ಯಾಜ್ಯ ವಿಲೇವಾರಿ ಶುಲ್ಕವನ್ನು ಪಂಚಾಯತಿಗೆ ಪಾವತಿಸಬೇಕು. ಪ್ರತಿ ಮನೆಗಳವರು ಕೂಡ ಕಸ ವಿಲೇವಾರಿಗಾಗಿ ನಿರ್ದಿಷ್ಟ ಪ್ರಮಾಣದ ಹಣವನ್ನು ವಾರ್ಷಿಕವಾಗಿ ನೀಡಬೇಕು ಎಂದು ನಿರ್ಧರಿಸಲಾಯಿತು.

ಸಮಾಲೋಚನಾ ಸಭೆಯಲ್ಲಿ ವಿಶೇಷವಾಗಿ ಕಲ್ಮಡ್ಕ ಸೊಸೈಟಿ ಅಧ್ಯಕ್ಷ ಉದಯ ಕುಮಾರ್ ಬೆಟ್ಟ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಜಾಕೆ, ಪಡ್ಪಿನಂಗಡಿ ಭಜನಾ ಮಂದಿರದ ಅಧ್ಯಕ್ಷ ಧರ್ಮಪಾಲ ನಡ್ಕ, ಎಣ್ಮೂರು ಮಸೀದಿಯ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಪ್ರಕೃತಿ ಯುವತಿ ಮಂಡಲ ಪಡ್ಪಿನಂಗಡಿ ಇದರ ಅಧ್ಯಕ್ಷೆ ಸವಿತಾ ಅಲೆಂಗಾರ, ಕಲ್ಮಡ್ಕ ಮತ್ತು ಗ್ರಾಮಗಳ ಶಾಲಾ ಮುಖ್ಯೋಪಾಧ್ಯಾಯರು ಗಳು, ಆರೋಗ್ಯ ಕಾರ್ಯಕರ್ತೆಯರು, ಸ್ವಸಹಾಯ ಸಂಘದವರು, ಸಂಜೀವಿನಿ ಒಕ್ಕೂಟದವರು ಮತ್ತು ಎಂ.ಬಿ.ಕೆ.ಗಳು, ಗ್ರಾಮ ವ್ಯಾಪ್ತಿಯ ವ್ಯಾಪಾರಸ್ಥರು, ಮುಚ್ಚಿಲ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶ್ರಫ್, ಪಂಜ ಜೇಸಿ ಮಾಜಿ ಅಧ್ಯಕ್ಷ ತೀರ್ಥಾನಂದರು ಹೀಗೆ ಅನೇಕ ಗಣ್ಯರು ಭಾಗವಹಿಸಿದ್ದರು.
ಸಮಾಲೋಚನಾ ಸಭೆ ವಿಶೇಷ ಆಹ್ವಾನಿತರಾಗಿದ್ದ ಸುದ್ದಿಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಅವರು ಮುಂದಿನ ಆಗಸ್ಟ್ 15 ರ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಜನರ ಹಬ್ಬವಾಗಿ ಆಚರಿಸುವ ಬಗ್ಗೆ ಮಾತನಾಡಿ ಯಾವ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದೆಂಬ ವಿವರ ನೀಡಿದರು. ಈ ಬಗ್ಗೆ ವಿಸ್ತೃತ ಚರ್ಚೆ ನಡೆಸಿದ ಸಭೆಯು ಗ್ರಾಮ ಕೇಂದ್ರದಲ್ಲಿ ಹೆಚ್ಚು ಜನ ಸೇರಿಸುವ ಕಾರ್ಯಕ್ರಮ ನಡೆಸದೆ ಗ್ರಾಮದ ಅಲ್ಲಲ್ಲಿ ಸ್ವಾತಂತ್ಯದ ನಡಿಗೆ ಏರ್ಪಡಿಸುವುದೆಂದು ನಿರ್ಧರಿಸಲಾಯಿತು. ಪ್ರತೀ ಮನೆಗೆ ರಾಷ್ಟ್ರ ಧ್ವಜ ನೀಡಿ ಅವರು ಮನೆಗಳಲ್ಲಿ ಧ್ವಜವಂದನೆ ಗೈಯ್ಯುವಂತೆ ಮತ್ತು ಅದರ ಫೋಟೊವನ್ನು ಪಂಚಾಯತ್ ನ ವಾಟ್ಸಾಪ್ ನಂಬರಿಗೆ ಅಪ್ಲೋಡ್ ಮಾಡುವಂತೆ ಹೇಳುವುದೆಂದು ನಿರ್ಧರಿಸಲಾಯಿತು. ಕುಳಾಯಿ ತೋಡಿ ಸುತ್ತಮುತ್ತಲಿನ ಮನೆಗಳವರು ಕುಳಾಯಿತೋಡಿಯಲ್ಲಿ ಸೇರಿ ಅಲ್ಲಿಂದ ಪಡ್ಪಿನಂಗಡಿಯಲ್ಲಿರುವ ಗ್ರಾ.ಪಂ. ಕಚೇರಿ ವರೆಗೆ ಸ್ವಾತಂತ್ರ್ಯದ ನಡಿಗೆ ಯಲ್ಲಿ ಬರುವುದು. ಕರಿಕ್ಕಳ ಮತ್ತು ಸುತ್ತಮುತ್ತಲಿನ ಪ್ರದೇಶದವರು ಕರಿಕ್ಕಳದಲ್ಲಿ ಸೇರಿ ಮುಚ್ಚಿಲದ ವರೆಗೆ ಬಂದು ಮುಚ್ಚಿಲದಲ್ಲಿ ಸೇರಿದ ಆ ಭಾಗದ ಜನರೊಂದಿಗೆ ಸೇರಿ ಪಡ್ಪಿನಂಗಡಿ ಗ್ರಾ.ಪಂ. ಕಚೇರಿ ವರೆಗೆ ಸ್ವಾತಂತ್ತ್ಯದ ನಡಿಗೆ ನಡೆಸುವುದು ಎಂದು ನಿರ್ಧರಿಸಲಾಯಿತು. ಕಲ್ಮಡ್ಕ ಪರಿಸರದವರು ಕಲ್ಮಡ್ಕದಲ್ಲಿ ಸೇರಿ ಸ್ವಾತಂತ್ರ್ಯದ ನಡಿಗೆ ಮಾಡಿದರೆ, ಉಡುವೆಕೋಡಿ ಸುತ್ತಮುತ್ತಲಿನವರು ಉಡುವೆಕೋಡಿ ಜಂಕ್ಷನ್ ವರೆಗೆ ನಡಿಗೆಯಲ್ಲ ಬಂದು ಅಲ್ಲಿ ಸಿಹಿ ಹಂಚಿ ಸ್ವಾತಂತ್ರ್ಯವನ್ನು ಸಂಭ್ರಮಿಸಿ ಹಿಂತಿರುಗುವುದು, ಕಾಚಿಲ ಶೆಟ್ಟಿಗದ್ದೆ ಪರಿಸರದವರು ಶೆಟ್ಟಿಗದ್ದೆಯಲ್ಲಿ ಸೇರಿ ಕಾಚಿಲದ ವರೆಗೆ ಅಥವಾ ಕಲ್ಲಡ್ಕ ಸೊಸೈಟಿಯ ವರೆಗೆ ಸ್ವಾತಂತ್ರ್ಯದ ನಡಿಗೆ ಹಮ್ಮಿಕೊಳ್ಳುವುದು, ಪಂಬೆತ್ತಾಡಿ ಸುತ್ತಮುತ್ತಲಿನವರು ಪಂಬೆತ್ತಾಡಿ ಸೊಸೈಟಿ ಎದುರು ಸೇರಿ ಅಲ್ಲಿಂದ ಪಂಬೆತ್ತಾಡಿ ಶಾಲೆವರೆಗೆ ಹಾಗೂ ಕೋಟೆಗುಡ್ಡೆ ಪರಿಸರದವರು ಒಂದೆಡೆ ಸೇರಿ ಕೋಟೆಗುಡ್ಡೆ ಶಾಲೆ ವರೆಗೆ ಸ್ವಾತಂತ್ರ್ಯದ ನಡಿಗೆ ಮಾಡುವುದೆಂದು ನಿರ್ಧರಿಸಲಾಯಿತು. ಒಟ್ಟಿನಲ್ಲಿ ಸ್ವಾತಂತ್ರ್ಯ ಉತ್ಸವ ಜನರ ಹಬ್ಬವಾಗಬೇಕೆಂಬ ದೃಷ್ಠಿಯಿಂದ ಪ್ರತೀ ಮನೆಯ ಮಹಿಳೆಯರು ಪುರುಷರು ತಮ್ಮ ತಮ್ಮ ಪರಿಸರದಲ್ಲಿ ಸಾರ್ವಜನಿಕವಾಗಿ ಸೇರಿ ಈ ಬಾರಿಯ 75 ನೇ ಸ್ವಾತಂತ್ರ್ಯೋವ ವನ್ನು ಆಚರಿಸಿಕೊಳ್ಳುವುದಕ್ಕೆ ಸ್ವ ಇಚ್ಛೆಯಿಂದ ಮುಂದೆ ಬರುವಂತೆ ಕರೆ ನೀಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.