ಆಟಿ -18 ಪ್ರಯುಕ್ತ ಸುಳ್ಯದಲ್ಲಿ ವಿಶ್ವ ಅರೆಭಾಷೆ ಹಬ್ಬ

Advt_Headding_Middle

ದಿನವಿಡೀ ಸಾಮಾಜಿಕ ಜಾಲತಾಣದಲ್ಲಿ ನಡೆಯಲಿದೆ ಅರೆಭಾಷೆ ವೈವಿಧ್ಯ

ಭಾಷೆ ಸಮುದಾಯದಿಂದ ಸಾಮಾಜಿಕವಾಗಿ ಬೆಳೆಯಲಿ: ಡಾ.ಪೂವಪ್ಪ ಕಣಿಯೂರು

ಆಂಗಿಕ ಮಲ್ಟಿಮೀಡಿಯಾ ಮತ್ತು ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಸಹಯೋಗದಲ್ಲಿ ಆಟಿ – 18 ರ ಪ್ರಯುಕ್ತ ಎರಡನೇ ವರ್ಷದ ವಿಶ್ವ ಅರೆಭಾಷೆ ಹಬ್ಬ – 2021ಕ್ಕೆ ಇಂದು ಚಾಲನೆ ನೀಡಲಾಯಿತು.

ಸುಳ್ಯ ವೆಂಕಟರಮಣ ಟವರ್ ನ ಮದುವೆಗದ್ದೆ ಭೋಜಪ್ಪ ಗೌಡರ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ವಹಿಸಿದ್ದರು. ” ನಮ್ಮ ಸಂಸ್ಕಾರ ಪರಂಪರೆಯನ್ನು ಉಳಿಸಿಕೊಂಡಿದ್ದೇವೆ. ಇದನ್ನು ನಮ್ಮ ಮಕ್ಕಳಿಗೆ ತಿಳಿಸುವ ಮೂಲಕ ಭಾಷೆ ಬೆಳೆಸಬೇಕಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕಾಲೇಜಿನಲ್ಲಿ ಶಿಕ್ಷಣದೊಂದಿಗೆ ಅರೆಭಾಷೆ ಬೆಳವಣಿಗೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸುಳ್ಯ ನೆಹರೂ ಮೆಮೊರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಪೂವಪ್ಪ ಕಣಿಯೂರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. “ಮಾತೃಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು. ನಮ್ಮಲ್ಲಿ ಅಧ್ಯಯನ ಶೀಲತೆಯ ಕೊರತೆ ಕಾಣುತ್ತಿದೆ. ಆನಿಟ್ಟಿನಲ್ಲಿ ಫ್ರೋತ್ಸಾಹ ನೀಡುವ ಕೆಲಸ ಆಗಬೇಕಾಗಿದೆ. ನಮ್ಮ ಭಾಷೆ ನಮ್ಮ ಸಮುದಾಯದೊಳಗೆ ಇರುವುದಕ್ಕಿಂತ ಅದನ್ನು ಸಾಮಾಜಿಕವಾಗಿ ಪಸರಿಸಬೇಕು ಆಗ ಭಾಷೆ ವಿಸ್ತಾರವಾಗಿ ಬೆಳೆಯುತ್ತದೆ. ಅರೆಭಾಷೆಯಲ್ಲಿ ಸೃಜನ ಶೀಲ ಬರವಣಿಗೆ ಬರಬೇಕು. ಸಂಶೋಧನೆ ನಡೆಯಬೇಕಾದ ವಿಷಯಗಳು ಅರೆಭಾಷೆಯಲ್ಲಿವೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಪಿ.ಸಿ. ಜಯರಾಮ್ ಮಾತನಾಡಿ ಇಂದು ಅರೆಭಾಷೆಯನ್ನು ಎಲ್ಲರೂ ಮಾತನಾಡುತ್ತಾರೆ. ಹೀಗೆ ಭಾಷೆ ಸಾಮಾಜಿಕವಾಗಿ ಬೆಳೆದಾಗ ಅದು ವಿಶ್ವಭಾಷೆಯಾಗುತ್ತದೆ. ನಮ್ಮ ಸಂಸ್ಕೃತಿ, ಪರಂಪರೆ ಉಳಿಯುತ್ತದೆ. ಇದಕ್ಕೆಲ್ಲ ಪೂರಕವಾಗಿ ಅಕಾಡೆಮಿ ಸ್ಥಾಪನೆಯಾಯ್ತು. ಆ ಮೂಲಕ ಭಾಷೆ ಸಾಕಷ್ಟು ವಿಸ್ತಾರವಾಗಿದೆ. ನಾನು ಅಕಾಡೆಮಿಯ ಅಧ್ಯಕ್ಷನಾಗಿದ್ದ ಸಂದರ್ಭ ಸಂಶೋಧನೆಗಳಿಗೆ ಒತ್ತು ನೀಡಿದ್ದೇವೆ. ಅರೆಭಾಷೆಯಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಮಾಡಿ ತೋರಿಸಿದ್ದೇವೆ. ಈಗೀನ ಅಧ್ಯಕ್ಷರು ಕೂಡಾ ಉತ್ತಮ ಕೆಲಸಗಳನ್ನು ಅರೆಭಾಷೆಯಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿದರು.

 

ದ.ಕ. ಜಿಲ್ಲಾ ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಅಕ್ಷಯ್ ಕೆ.ಸಿ. ಮಾತನಾಡಿ ಕೋವಿಡ್ ಸಂದರ್ಭ ಎಲ್ಲರಿಗೂ ಕಷ್ಟವಾಗಿದೆ. ಅದನ್ನು ಮೆಟ್ಟಿ ಮುಂದೆ ಬರುವಲ್ಲಿ ನಾವು ಯೋಚಿಸಬೇಕು. ಇದಕ್ಕೆ ಲೋಕೇಶ್ ಊರುಬೈಲು ನಿದರ್ಶನ. ಅರೆಭಾಷೆ ನಮ್ಮ ಬದುಕಿನ ಭಾಷೆಯಾಗಿದೆ ಎಂದು ಹೇಳಿದರು.

ಗೌಡ ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಆಂಗಿಕ ಮಲ್ಟಿಮೀಡಿಯಾದ ಲೋಕೇಶ್ ಊರುಬೈಲು ಇದ್ದರು. ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.