ತೊಡಿಕಾನ ದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಗೇರು ಕೃಷಿ ನಾಶ

Advt_Headding_Middle

ನ್ಯಾಯ ಸಿಗದಿದ್ದರೆ ಅರಣ್ಯ ಇಲಾಖೆ ಎದುರು ಪ್ರತಿಭಟನೆ – ರೈತ ಸಂಘ ಎಚ್ಚರಿಕೆ

ತೊಡಿಕಾನ ಗ್ರಾಮದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆಯವರು ಗೇರು ಕೃಷಿ ನಾಶಪಡಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅರಣ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗುವುದು. ನಮಗೆ ನ್ಯಾಯ ಸಿಗದದ್ದರೆ ಸುಳ್ಯದ ಅರಣ್ಯ ಕಚೇರಿ ಎದುರು ಹೋರಾಟ ನಡೆಸುತ್ತೇವೆ ಎಂದು ಸಂಘ ಎಚ್ಚರಿಕೆ ನೀಡಿದೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಈ ಎಚ್ಚರಿಕೆ ನೀಡಿದರು.

ತೊಡಿಕಾನ ಗ್ರಾಮದ ಕುಂಟುಕಾಡು ಶೇಷಮ್ಮ ಎಂಬವರ ಸ್ವಾಧೀನದಲ್ಲಿದ್ದ ಮೂರು ವರ್ಷ ಪ್ರಾಯದ 83 ಗೇರು ಗಿಡಗಳನ್ನು ಅರಣ್ಯ ರಕ್ಷಕರಾದ ಮನೋಜ್ ಕುಮಾರ್ ಹಾಗೂ ಅರಣ್ಯ ವೀಕ್ಷಕ ಚಿದಾನಂದ ಎಂಬವರು ಕಡಿದು ನಾಶ ಮಾಡಿದ್ದಾರೆ. ಈ ಜಮೀನು 50 ವರ್ಷಗಳಿಂದ ಇವರ ಸ್ವಾಧೀನದಲ್ಲಿದೆ. ಇಲಾಖೆಯವರು ಯಾವುದೇ ಮುನ್ಸೂಚನೆ ನೀಡದೆ ಜಮೀನಿಗೆ ಬಂದು ಗಿಡ ನಾಶ ಪಡಿಸಿದ್ದು ಸರಿಯಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯಾಧಿಕಾರಿಗಳಿಗೆ ಆ. 6ರಂದು ಮನವಿ ನೀಡುತ್ತೇವೆ. ನ್ಯಾಯ ಸಿಗದಿದ್ದರೆ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಕೊರೋನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಶಾಲಾ ಮಕ್ಕಳಿಗೆ ಸರಿಯಾಗಿ ತರಗತಿಗಳು ನಡೆಯಲಿಲ್ಲ. ಮೊಬೈಲ್ ಪಾಠಗಳು ಆಗಿದೆ. ಗ್ರಾಮೀಣ ಭಾಗದಲ್ಲಿ ನೆಟ್ ವರ್ಕ್ ಸಮಸ್ಯೆಯಾಗಿದೆ. ಆದ್ದರಿಂದ ರೈತರ ಮಕ್ಕಳಿಗೆ 15 ಕೃಪಾಂಕ ನೀಡಬೇಕು ಎಂದು ನಾವು ಸರಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು

ಕೊರೋನಕ್ಕೆ ಸರಕಾರ ವ್ಯಾಕ್ಸಿನೇಷನ್ ನೀಡುವ ಕ್ರಮವನ್ನು ಸರಕಾರ ಮಾಡುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ವ್ಯಾಕ್ಸಿನೇಷನ್ ನೀಡುವಾಗ ಈಗ ನೀಡುವುದಕ್ಕಿಂತ ಹೆಚ್ಚುಪಟ್ಟು ವಿತರಿಸಬೇಕು ಎಂದು ಸರಕಾರವನ್ನು ಒತ್ತಾಸುತ್ತೇವೆ. ಎ

ಬೆಳೆ ಸಮೀಕ್ಷೆಯನ್ನು ಕಂದಾಯ ಇಲಾಖೆ ಸರಿಯಾಗಿ ನಿರ್ವಹಿಸಬೇಕು. ಕಳೆದ ವರ್ಷ ಬೆಳೆ ಸಮೀಕ್ಷೆ ಮಾಡಿದ ವಿವರವನ್ನು ಪಹಣಿ ಪತ್ರದಲ್ಲಿ ನಮೂದಿಸಿಲ್ಲ. ಅಧಿಕಾರಿಗಳು ಬೆಳೆ ಸಮೀಕ್ಷೆ ವಿಷಯದಲ್ಲಿ ನಾಟಕವಾಡುವುದು ಸರಿಯಲ್ಲ ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

 

ಸಾಲ ಮನ್ನಾ ವಿಚಾರದಲ್ಲಿ ಇದ್ದ ಷರತ್ತುಗಳನ್ನು ಸರಕಾರ ರದ್ದುಪಡಿಸಿದೆ ಇದನ್ನು ರೈತ ಸಂಘ ಸ್ವಾಗತಿಸುತ್ತದೆ. ಆದರೆ ಇದನ್ನು ಮಾಡಬೇಕೆಂದು ಸರಕಾರವನ್ನು ನಾವು ಕೂಡ ಒತ್ತಾಯಿಸಿದ್ದೆವು. ಹಳದಿ ರೋಗ ಪೀಡಿತ ಪ್ರದೇಶದ ಸರಕಾರ ಸಂಶೋಧನೆಗೆ ಅನುದಾನ ಬಿಡುಗಡೆಮಾಡಿದೆ. ಜೊತೆಗೆ ಹಳದಿ ರೋಗಕ್ಕೆ ಶಾಶ್ವತ ಔಷಧ ಕಂಡುಹಿಡಿಯಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ತೀರ್ಥರಾಮ ಅರ್ನೋಜಿ, ಭರತ್ ಕುಮಾರ್ ರಾಮಕೃಷ್ಣ ಕುಂಟುಕಾಡು ಮಂಜುನಾಥ್ ಮಡ್ತಿಲ ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.