ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಮಣಿಯಾನ ಓಬಯ್ಯ ಗೌಡರಿಗೆ ಶ್ರದ್ಧಾಂಜಲಿ, ವೈಕುಂಠ ಸಮಾರಾಧನೆ

Advt_Headding_Middle

ಗುತ್ತಿಗಾರು ಗ್ರಾಮದ ಪ್ರಗತಿಪರ ಕೃಷಿಕ, ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಮಣಿಯಾನ ಓಬಯ್ಯ ಗೌಡರು ಜು.23 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಆ.3 ರಂದು ಮಣಿಯಾನ ಮನೆಯಲ್ಲಿ ನಡೆಯಿತು.

ಪಿ.ಆರ್.ಕಿಶೋರ್ ಕುಮಾರ್ ರವರು ಮಾತನಾಡಿ ಪ್ರಗತಿಪರ ಕೃಷಿಕ ಮಣಿಯಾನ ದಿ.ಓಬಯ್ಯ ಗೌಡರು ಕುಟುಂಬದ ಹಿರಿಯರಾಗಿದ್ದು ಅಂತರಾಷ್ಟ್ರೀಯ ಮಟ್ಟದ ಹಿರಿಯ ಕ್ರೀಡಾಪಟುವಾಗಿದ್ದರು, ಕಠಿಣ ಪರಿಶ್ರಮಿಯಾಗಿದ್ದು ಕೊಡುಗೈ ದಾನಿಯಾಗಿದ್ದರು.ಹಿಂದಿನ ಪರಂಪರೆಯನ್ನು ಉಳಿಸಿಕೊಂಡು ಹೋಗುವಂತಹ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದು ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುತ್ತಿದ್ದರು , ಯುವಕರಿಗೆ ಸದಾ ಪ್ರೋತ್ಸಾಹಕರಾಗಿದ್ದರು. ಇವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವುದರ ಮುಖಾಂತರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಎಂದು ಹೇಳಿದರು.


ಆಗಮಿಸಿದ ನೂರಾರು ಜನರು ದಿ.ಓಬಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುತ್ರರಾದ ಹರಿಹರಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಣಿಯಾನ ಪುರುಷೋತ್ತಮ, ಮಣಿಯಾನ ಸೀತಾರಾಮ,ಮಣಿಯಾನ ದುರ್ಗೇಶ,ಮಣಿಯಾನ ಶಿವಕುಮಾರ ಹಾಗೂ ಪುತ್ರಿ ಶ್ರೀಮತಿ ಮಮತಾ ರಾಧಾಕೃಷ್ಣ ಪೈಸಾರಿ ಪಳಂಗಾಯ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.