ಸೋಣಂಗೇರಿ ಬಿಎಸ್‌ಎನ್‌ಎಲ್ ಟವರ್ ಕಾರ್ಯಾರಂಭ ಮಾಡದ ಹಿನ್ನೆಲೆ

Advt_Headding_Middle

ಆಗಸ್ಟ್ 11ರಂದು ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ

ಜಾಲ್ಸೂರು ಗ್ರಾಮದ ಸೋಣಂಗೇರಿ ಎಂಬಲ್ಲಿ 2 ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಬಿಎಸ್‌ಎನ್‌ಎಲ್ ಟವರ್ ಇನ್ನೂ ಜನರ ಉಪಯೋಗಕ್ಕೆ ಸಿಕ್ಕಿಲ್ಲ. ನಾವು ಈ ಬಗ್ಗೆ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಿದ್ದರೂ ಬೇಡಿಕೆ ಈಡೇರಿಲ್ಲ. ಆದ್ದರಿಂದ ಬೇಡಿಕೆ ಈಡೇರಿಕೆಗಾಗಿ ಆ.11ರಂದು ಸೋಣಂಗೇರಿ ಬಿಎಸ್‌ಎನ್‌ಎಲ್ ಟವರ್ ಎದುರುಗಡೆ ಹೋರಾಟ ಸಮಿತಿಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೋರಾಟ ಸಮಿತಿಯವರು ತಿಳಿಸಿದ್ದಾರೆ.

ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೋರಾಟ ಸಮಿತಿಯ ಪ್ರಮುಖರಾದ ಗಿರಿಧರ ನಾಯರ್ ಹಿತ್ಲು, ಶಿವಪ್ರಸಾದ್ ನೀರಬಸಿರು, ಶ್ಯಾಮ್ ಪ್ರಸಾದ್, ಸುಬ್ಬಯ್ಯ ನಾಯರ್ ಹಿತ್ಲು, ಸತ್ಯ ಶಾಂತಿ ತ್ಯಾಗ ಮೂರ್ತಿ, ಯೋಗೀಶ್ ಈ ವಿಷಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಾಲ್ಸೂರು ಗ್ರಾಮ ಪಂಚಾಯಿತಿ ಸದಸ್ಯರುಆಗಿರುವ ಶಿವಪ್ರಸಾದ್ ಅವರು “2 ವರ್ಷಗಳ ಹಿಂದೆ ಬಿಎಸ್ಎನ್ಎಲ್ ಟವರ್ ಸೋಣಂಗೇರಿ ಯಲ್ಲಿ ನಿರ್ಮಾಣಗೊಂಡಿತ್ತು. ಕೆಲಸ ಮುಗಿದು ಎರಡು ವರ್ಷ ಕಳೆದರೂ ಟವರ್ ಜನರ ಉಪಯೋಗಕ್ಕೆ ಸಿಗುತ್ತಿಲ್ಲ . ಇದರಿಂದ ನಮಗೆ ತುಂಬಾ ಬೇಸರವಾಗಿದೆ. ಆ ಭಾಗದ ಮಕ್ಕಳು ಆನ್ ಲೈನ್ ಶಿಕ್ಷಣ ಕ್ಕೆ, ಸೊಸೈಟಿಯಿಂದ ಪಡಿತರ ಪಡೆಯಲು ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಶಾಸಕರು, ಸಂಸದರಿಗೆ ಹಲವು ಬಾರಿ ಮನವಿ ಮಾಡಿಕೊಂಡರು ನಮ್ಮ ಬೇಡಿಕೆ ಈಡೇರಿಲ್ಲ. ಪಂಚಾಯತ್ ಸಭೆಯಲ್ಲಿಯೂ ಚರ್ಚೆಯಾಗಿದೆ. ಆದರೂ ಪ್ರಯೋಜನ ಆಗಿಲ್ಲ ಎಂದು ಹೇಳಿದರು.

ಟವರ್ ನಿರ್ಮಾಣಗೊಂಡಿರುವ ಜಾಗದ ಮಾಲೀಕ ಶ್ಯಾಮ್ ಪ್ರಸಾದರು ಮಾತನಾಡಿ “ಎರಡೂವರೆ ವರ್ಷಗಳ ಹಿಂದೆ ಅಗ್ರಿಮೆಂಟ್ ಆಗಿದೆ. ಕೆಲಸವು ಆಗಿದರ. ಆದರೆ ಜನರ ಉಪಯೋಗಕ್ಕೆ ಸಿಗುತ್ತಿಲ್ಲ. ಈ ಭಾಗದಲ್ಲಿ ನೆಟ್ವರ್ಕ್ ಬಿಡಿ, ರೇಂಜ್ ಕೂಡ ಸಿಗದಂತ ಪರಿಸ್ಥಿತಿ ಇದೆ ಎಂದು ಹೇಳಿದರು.

ಗಿರಿಧರ ನಾಯರ್ ಹಿತ್ಲು ರವರು ಮಾತನಾಡಿ ಹಿಂದೆ ಪ್ರತಿ ಮನೆಯಲ್ಲಿಯೂ ಲ್ಯಾಂಡ್ ಫೋನ್ ಇರುತ್ತಿತ್ತು. ಆಗ ರೇಂಜ್, ನೆಟ್ವರ್ಕ್ ಸಮಸ್ಯೆಗೆ ಇರುತ್ತಿರಲಿಲ್ಲ. ಈಗ ಲಕ್ಷ ಗಟ್ಟಲೆ ದುಡ್ಡು ಹಾಕಿ ಟವರ್ ನಿರ್ಮಿಸಿದ್ದಾರೆ ಆದರೆ ಅದು ನಿಷ್ಪ್ರಯೋಜಕವಾಗಿದೆ. ಇದೊಂತರ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗದೆ ಎಂದು ಹೇಳಿದರು.

ಸುಬ್ಬಯ್ಯನಾಯರ್ ಹಿತ್ಲು ಮಾತನಾಡಿ ಕಳೆದ ಬಾರಿ ಗ್ರಾಪಂ ಚುನಾವಣೆಯ ಸಂದರ್ಭ ಮತದಾನದ ಬಹಿಷ್ಕಾರಕ್ಕೆ ಬ್ಯಾನರ್ ಹಾಕಲಾಗಿತ್ತು. ಅಧಿಕಾರಿಗಳು ಬಂದು ಭರವಸೆ ನೀಡಿ ಬ್ಯಾನರ್ ತೆಗೆದರು. ಆದರೆ ಅವರು ಬೇಡಿಕೆ ಈಡೇರಿಸಿಲ್ಲ ಜನಪ್ರತಿನಿಧಿಗಳು ಕೂಡ ಅಷ್ಟೆ ಓಟಿನ ಸಂದರ್ಭ ಬರುತ್ತಾರೆ. ಆ ಬಳಿಕ ಏನು ಮಾಡುತ್ತಾರೆಂದು ಗೊತ್ತಾಗುತ್ತಿಲ್ಲ. ಇದು ನಮ್ಮ ದುರವಸ್ಥೆ ಎಂದು ಹೇಳಿದರು.

ಸತ್ಯ ಶಾಂತಿ ತ್ಯಾಗ ಮೂರ್ತಿ ಮಾತನಾಡಿ ಆಗಸ್ಟ್ 11ರಂದು ಹೋರಾಟ ಸಮಿತಿಯವರು ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ. ಬೆಳಗಿನಿಂದ ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದು ವಿವರ ನೀಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.