ಜಯನಗರ : ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ

Advt_Headding_Middle

ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬಾಲವಿಕಾಸ ಸಮಿತಿ ಜಯನಗರ ಅಂಗನವಾಡಿ ಕೇಂದ್ರ, ಮೈತ್ರಿ ಮಹಿಳಾ ಮಂಡಲ ಜಯನಗರ ಇವರ ಸಹಯೋಗದೊಂದಿಗೆ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಇಂದು ಜಯನಗರ ಮೈತ್ರಿ ಮಹಿಳಾ ಮಂಡಲ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನಗರ ಪಂಚಾಯತ್ ಸದಸ್ಯೆ ಶಿಲ್ಪಾ ಸುದೇವ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಲೀಲಾವತಿ ಮಾತನಾಡಿ ತಾಯಿ ಹಾಲಿನಮಹತ್ವ, ಎಕ್ಸ್ ಕ್ಲೂಸಿವ್ ಬ್ರೆಸ್ಟ್ ಫೀಡಿಂಗ್ , ಮತ್ತು ಸ್ತನ್ಯ ಪಾನದ ಸಂದರ್ಬದಲ್ಲಿ ತಾಯಂದಿರು ಎದುರಿಸಬಹುದಾದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಬಗ್ಗೆ ಮಾಹಿತಿ ನೀಡಿದರು.

ಮೇಲ್ವಿಚಾರಕಿ ಶೈಲಜಾ.ಬಿ ಸ್ತನ್ಯಪಾನದ ಸಂದರ್ಭದಲ್ಲಿ ತಾಯಂದಿರಿಗೆ ನೀಡಬೇಕಾದ ಮಾನಸಿಕ ಮತ್ತು ದೈಹಿಕ ಬೆಂಬಲದ ಕುರಿತು ಮಾಹಿತಿ ‌ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈತ್ರಿ ಮಹಿಳಾ ಮಂಡಲ ಜಯನಗರ ಪೂರ್ವಾಧ್ಯಕ್ಷ ಮಹಾಲಕ್ಷ್ಮಿ ಕೊರಂಬಡ್ಕ ವಹಿಸಿದ್ದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಯಶಿಕಾ ಉಪಸ್ಥಿತರಿದ್ದರು.ಅಂಗನವಾಡಿ ಕಾರ್ಯಕರ್ತೆ ತಿರುಮಲೇಶ್ವರಿ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.