ಸುಬ್ರಹ್ಮಣ್ಯ ರೋಟರಿ ಕ್ಲಬ್, ಸುಳ್ಯ ಕ್ಲಬ್ ಮತ್ತು ಸುಳ್ಯ ಸಿಟಿ ಕ್ಲಬ್ ವತಿಯಿಂದ ವನಮಹೋತ್ಸವ

Advt_Headding_Middle

ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸುಳ್ಯ ಮತ್ತು ಸುಳ್ಯ ಸಿಟಿ ಇದರ ಜಂಟಿ ಆಶ್ರಯದಲ್ಲಿ ನಮ್ಮ ನಡೆ ಅರಣ್ಯದೆಡೆಗೆ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ್ ಅವರು ಬಿಸಿಲೆ ಗಡಿ ಚಾಮುಂಡಿ ದೇವಸ್ಥಾನದ ವಠಾರದಲ್ಲಿ ಆ.1 ರಂದು ಗಿಡ ನೆಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ರೋಟರಿ ಸಂಸ್ಥೆಗಳ ಸುಮಾರು ಅರುವತ್ತು ಜನ ಸದಸ್ಯರು ಗಡಿ ಚಾಮುಂಡಿ ದೇವಸ್ಥಾನದ ವಠಾರದಲ್ಲಿ ಮತ್ತು ಬಿಸಿಲೆ ರಸ್ತೆಯ ಇಕ್ಕೆಲಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ಸುಮಾರು ೫ಕಿಲೋ ಮೀಟರ್ ನಡಿಗೆ ಮಾಡಿ ರಸ್ತೆಯ ಇಕ್ಕೆಲಗಳಿಗೆ ಹಣ್ಣಿನ ಬೀಜಗಳನ್ನು ಮತ್ತು ಬಿದಿರಿನ ಬೀಜಗಳನ್ನು ಬಿತ್ತಲಾಯಿತು.
ಈ ಕಾರ್ಯಕ್ರಮದಲ್ಲಿ ಎಸಳೂರು ವಿಭಾಗದ ಅರಣ್ಯ ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ರೊ ಜಿತೇಂದ್ರ ನಿಡ್ಯಮಲೆ, ಪೂರ್ವ ಂ ಉ ಗಳಾದ ರಾಮಕೃಷ್ಣ ಮಲ್ಲಾರ, ಡಾ ಕೇಶವ ಸುಳ್ಯ, ಸುಳ್ಯ ಸಿಟಿ ಕ್ಲಬಿನ ಅಧ್ಯಕ್ಷ ಪ್ರೀತಮ್ ಡಿ ಕೆ, ಸುಳ್ಯ ಕ್ಲಬ್‌ನ ಅಧ್ಯಕ್ಷ ಪ್ರಭಾಕರ ನಾಯರ್ , ವಲಯ ಸೇನಾನಿ ಭರತ್ ನೆಕ್ರಾಜೆ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಕ್ಲಬ್ಬಿನ ಅಧ್ಯಕ್ಷರಾದ ವಿಜಯ ಕುಮಾರ್ ಅವರು ಕಾರ್ಯಕ್ರಮದಲ್ಲಿ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.