ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿರುವಿಕೆಯ ವಿಚಾರವಾಗಿ ನಿಲುವು ಬದಲಾಯಿಸಿರುವ ಸರಕಾರದ ಕ್ರಮ ಅಭಿನಂದನಾರ್ಹ : ಎಂ.ಡಿ.ವಿಜಯ್ ಕುಮಾರ್

Advt_Headding_Middle

 

ಕೃಷಿ ಅಭಿವೃದ್ಧಿ ಸಾಲಗಳಿಗೆ ಸರಕಾರ ಹೇರಿದ ನಿಯಮಗಳ ನಿಲುವು ಬದಲಾಯಿಸಿದ ಸರಕಾರದ ಕ್ರಮ ಅಭಿನಂದನಾರ್ಹವಾಗಿದೆ ಎಂದು ಕೃಷಿಕ ಮುಖಂಡ ಎಂ.ಡಿ.ವಿಜಯಕುಮಾರ್ ಮಡಪ್ಪಾಡಿಯವರು ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಕಳೆದ 7 ವರ್ಷಗಳಿಂದ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ನೀಡುತ್ತಿದ್ದ ಅಲ್ಪಾವಧಿ ಬೆಳೆ ಸಾಲ ಮತ್ತು 15 ವರ್ಷಗಳಿಂದ ನೀಡುತ್ತಿರುವ ದೀರ್ಘಾವಧಿ ಕೃಷಿ ಅಭಿವೃದ್ಧಿ ಸಾಲಗಳಿಗೆ ಸರಕಾರ ಈ ಬಾರಿ ಅನಪೇಕ್ಷಿತ ನಿಯಮಗಳನ್ನು ಹೇರಿದ ಪರಿಣಾಮ ಒಂದಷ್ಟು ರೈತರು ಈ ಸೌಲಭ್ಯ ದಿಂದ ವಂಚಿತರಾಗಿದ್ದರು. ಅಂತೂ ಇಂತೂ ಕುಂತಿ ಮಕ್ಕಳು ಉಪವಾಸ ಎಂಬಂತಾಗಿತ್ತು ಹಲವು ರೈತರ ಪರಿಸ್ಥಿತಿ.

ಈ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಕೂಡಾ ಈ ಸಮಸ್ಯೆಗೆ ಸ್ಪಂದಿಸದೆ ಜಾಣ ಮೌನ ನೀತಿ ಅನುಸರಿಸಿ ಹೋಂ ಕ್ವಾರಂಟೈನ್ ಗೆ ಒಳಗಾಗಿ ರೈತರ ಪರ ಬಲವಾಗಿ ದ್ವನಿ ಎತ್ತಲಿಲ್ಲ.

ಇದೀಗ ಒಂದು ಕೈಯಿಂದ ಚಿವುಟಿ ಮತ್ತೊಂದು ಕೈಯಲ್ಲಿ ತೊಟ್ಟಿಲು ತೂಗುವ ರೀತಿಯಲ್ಲಿ ಇದ್ದ ಸೌಲಭ್ಯ ವನ್ನು ರದ್ದು ಪಡಿಸಿ ಮತ್ತೆ ಪುನಃ ಕೊಡಮಾಡಿದ ಪ್ರಕ್ರಿಯೆ ಆದಂತಾಗಿದೆ.

ಆದಾಗ್ಯೂ ಈ ವಿಚಾರದಲ್ಲಿ ನಿಲುವು ಬದಲಾಯಿಸಿ ರೈತಪರ ಕಾಳಜಿ ತೋರಿಸಿದ ನಮ್ಮ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿರುವ ಜನಪ್ರತಿನಿದಿನಿಗಳು ಮತ್ತು ಮುಖಂಡರು ನಿಜಕ್ಕೂ ಅಭಿನಂದನಾರ್ಹರು.

ಕೃಷಿಕರಿಗೆ ಸಿಗುವ ಈ ಸಾಲ ಸೌಲಭ್ಯ ನಿರಂತರ ಮುಂದುವರಿಯಲಿ ಎಂಬುದು ಕೃಷಿಕರ ಆಶಯವಾಗಿದೆ.

– ಯಂ ಡಿ ವಿಜಯಕುಮಾರ್
ಕಾರ್ಯಕಾರೀ ಸಮಿತಿ ಸದಸ್ಯ
ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಪುತ್ತೂರು

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.