ಮರ್ಕಂಜದ ಶ್ರೀಮತಿ ಜ್ಯೋತ್ಸ್ನಾ ಶಾಸ್ತ್ರಿ ದೋಳ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ

Advt_Headding_Middle

ಮರ್ಕಂಜದ ದೋಳ ಶಂಕರನಾರಾಯಣ ಶಾಸ್ತ್ರಿ – ವಿಜಯಲಕ್ಷ್ಮಿ ದಂಪತಿಯ ಪುತ್ರಿ, ಪುತ್ತೂರಿನಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ಜ್ಯೋತ್ಸ್ನಾ ಶಾಸ್ತ್ರಿ ದೋಳರವರು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
ಜ್ಯೋತ್ಸ್ನಾರವರು ಕಳೆದ 14 ವರ್ಷಗಳಿಂದ ಪುತ್ತೂರಿನ ಖ್ಯಾತ ನ್ಯಾಯವಾದಿ ಬೆಟ್ಟ ಈಶ್ವರ ಭಟ್ ರವರಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಫೆಬ್ರವರಿ ಮಾರ್ಚಲ್ಲಿ ನ್ಯಾಯಾಧೀಶ ಹುದ್ದೆಗೆ ಪರೀಕ್ಷೆ ಬರೆದಿದ್ದ ಅವರು ರಾಜ್ಯದಾದ್ಯಂತದಿಂದ ಉತ್ತೀರ್ಣರಾದ 40 ಮಂದಿಯಲ್ಲಿ ಒಬ್ಬರಾಗಿದ್ದರು. ಆ 40 ಮಂದಿಗೆ ಇಂಟರ್ ವ್ಯೂ ನಡೆದು 12 ಮಂದಿಯನ್ನು ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆ ಮಾಡಲಾಗಿತ್ತು. ಆ 12 ಮಂದಿಯಲ್ಲಿ ಜ್ಯೋತ್ಸ್ನಾ 2 ನೇ ರ್ಯಾಂಕ್ ಪಡೆದಿದ್ದಾರೆ.
ಇನ್ನು ತರಬೇತಿಯ ಬಳಿಕ ಅವರಿಗೆ ಕರ್ತವ್ಯದ ಜಿಲ್ಲೆ ತೋರಿಸಲಾಗುವುದೆಂದು ತಿಳಿದುಬಂದಿದೆ.
ಜ್ಯೋತ್ಸ್ನಾರವರು ಮಿತ್ತಡ್ಕ ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ತೇರ್ಥಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ , ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪಿ.ಯು. ಮತ್ತು ಕಾನೂನು ಪದವಿ ಪಡೆದಿದ್ದರು. ಅವರು ಎಲ್.ಎಲ್.ಎಂ. ಪದವಿ ಪಡೆಯುವಾಗಲೂ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.