ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಮಹಾಸಭೆ

Advt_Headding_Middle

 

ರೂ.24.40 ಕೋಟಿ ವ್ಯವಹಾರ, ರೂ.21.01 ಲಕ್ಷ ನಿವ್ವಳ ಲಾಭ, 2೦% ಡಿವಿಡೆಂಟ್

ಪುತ್ತೂರು:ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘವು 2020-21 ನೇ ಸಾಲಿನಲ್ಲಿ ಒಟ್ಟು ೨೪.೪೦ ಕೋಟಿ ರೂ.ಗಳ ವ್ಯವಹಾರ ನಡೆಸಿದೆ. 1.2೦ಲಕ್ಷ ಕೆ.ಜಿ ಜೇನು ಮಾರಾಟ ಮಾಡಿದ್ದು, ರೂ.97.86 ಲಕ್ಷ ವ್ಯವಹಾರ ಲಾಭಗಳಿಸಿದೆ. ರೂ.21.೦1 ಲಕ್ಷ ನಿವ್ವಳ ಲಾಭ ಗಳಿಸಿ ಸದಸ್ಯರಿಗೆ ಶೇ.2೦ ಡಿವಿಡೆಂಟ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಮಾಡಿದರು.
ಮಹಾಸಭೆಯು ಆ.3 ರಂದು ಸಂಘದ ಪ್ರಧಾನ ಕಚೇರಿ `ಮಾಧುರಿ ಸೌಧ’ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆರ್ಥಿಕ ವರ್ಷದಲ್ಲಿ ಕೊರೋನಾ ಮಹಾಮಾರಿಯಿಂದಾಗಿ ವ್ಯವಹಾರವು ಸ್ವಲ್ಪಮಟ್ಟಿನ ಕುಂಠಿತಗೊಂಡಿದ್ದರೂ ವರ್ಷಾಂತ್ಯದಲ್ಲಿ ಮಾರಾಟ ವ್ಯವಹಾರಗಳು ಗಣನೀಯವಾಗಿ ಏರಿಕೆ ಕಂಡಿವೆ. ವರ್ಷಾಂತ್ಯಕ್ಕೆ ಸರ್ವಕಾಲಿಕ ದಾಖಲೆಯಾಗಿ 1.2೦ ಲಕ್ಷ ಕೆ.ಜಿ ಜೇನು ಮಾರಾಟ ಮಾಡಲಾಗಿದೆ. ಸಂಘವು ಗಳಿಸಿದ ಲಾಭಾಂಶದಲ್ಲಿ ಜೇನು ವ್ಯವಸಾಯಗಾರರಿಗೆ ಪ್ರತಿ ಕೆ.ಜಿಗೆ ರೂ.1೦ರಂತೆ ಬೋನಸ್ ನೀಡಲಾಗುವುದು. ಸಂಘವು ಗಳಿಸಿದ ಲಾಭಾಂಶವನ್ನು ಇಲಾಖೆಯ ನಿಯಮಾವಳಿಯಂತೆ ವಿಂಗಡಣೆ ಮಾಡಲಾಗಿದೆ. ಆಡಿಟ್ ವರ್ಗೀಕರಣದಲ್ಲಿ ಸಂಘವು ನಿರಂತರವಾಗಿ `ಎ’ ಶ್ರೇಣಿಯನ್ನು ಕಾಯ್ದುಕೊಂಡಿದೆ ಎಂದು ಅವರು ತಿಳಿಸಿದರು.
ಸನ್ಮಾನ, ಬಹುಮಾನ ವಿತರಣೆ: ವರದಿ ವರ್ಷದಲ್ಲಿ ಸಂಘದಿಂದ ಅತೀ ಹೆಚ್ಚ ಜೇನು ಖರೀದಿಸಿ ಮಾರಾಟ ಮಾಡಿದ ಮಂಗಳೂರಿನ ಪೂರ್ಣಾನಂದ ವಿವಿಧೋzಶ ಸೌಹಾರ್ದ ಸಂಸ್ಥೆಯ ಪದಾಧಿಕಾರಿಗಳನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಸಂಘಕ್ಕೆ ಅತೀ ಹೆಚ್ಚು ಜೇನು ನೀಡಿದ ವ್ಯವಸಾಯಗಾರರಾದ ಪುತ್ತೂರು ತಾಲೂಕಿನ ಮನಮೋಹನ್ ಅರಂಬ್ಯ ಇರ್ದೆ, ದಿನೇಶ್ ಅರಂಬ್ಯ ಇರ್ದೆ, ಬೆಳ್ತಂಗಡಿ ತಾಲೂಕಿನ ಕುಮಾರ್ ಎಲ್., ಸುಳ್ಯ ತಾಲೂಕಿನ ಚೆನ್ನಕೇಶವ ಪೊಯ್ಯಮಜಲು ದೇವಚಳ್ಳ, ರಾಧಾಕೃಷ್ಣ ದಾಸ್ ಉಬರಡ್ಕ ಮಿತ್ತೂರು, ಕೆ.ಪುಟ್ಟಣ್ಣ ಗೌಡ ಕಾಡುತೋಡ ಉಬರಡ್ಕ ಮಿತ್ತೂರು, ಚಂದ್ರಶೇಖರ ಗೌಡ ಉಬರಡ್ಕ ಮಿತ್ತೂರು, ಬೆಳ್ತಂಗಡಿ ತಾಲೂಕಿನ ಶಿವಾನಂದ ಗೌಡ ಉಜಿರೆ, ಬಂಟ್ವಾಳ ತಾಲೂಕಿನ ವೆಂಕಟೇಶ ಪ್ರಸಾದ್ ಅಡ್ಯನಡ್ಕ, ವಿಜಯ ಕುಮಾರ್ ಬಾಳೆಕಲ್ಲು ಮಾಣಿಲರವರನ್ನು ಬಹುಮಾನ ನೀಡಿ ಗೌರವಿಸಲಾಯಿತು.
ಧನ ಸಹಾಯ: ಕೆಲ ಸಮಯಗಳ ಹಿಂದೆ ಮೃತಪಟ್ಟ ಸಂಘದ ನಿವೃತ್ತ ಸಿಬಂದಿ ಕೂಸಪ್ಪರವರ ಕುಟುಂಬಕ್ಕೆ ರೂ.5೦೦೦ ಧನ ಸಹಾಯವನ್ನು ಕೂಸಪ್ಪರವರ ಪತ್ನಿ ಭಾರತಿಯವರಿಗೆ ಹಸ್ತಾಂತರಿಸಲಾಯಿತು.
ಸಂಘದ ನಿರ್ದೇಶಕರಾದ ಜಿ.ಪಿ.ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ.ತನಿಯಪ್ಪ, ಶ್ರೀಷ ಕೊಡವೂರು, ಎಚ್.ಸುಂದರ ಗೌಡ, ಇಂದಿರಾ ಕೆ., ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ., ಚಂದ್ರಶೇಖರ ತಾಳ್ತಜೆ, ರಾಜೀವಿ, ಶಿವಾನಂದ, ಮನಮೋಹನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಚಂದ್ರ ಕೋಲ್ಚಾರ್ ಸ್ವಾಗತಿಸಿದರು. ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿಂಡಿಮನೆ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಮಂಡಿಸಿದರು. ನಿರ್ದೇಶಕ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ವಂದಿಸಿದರು. ಸಿಬಂದಿಗಳು ಸಹಕರಿಸಿದರು.

ಮುಂದಿನ ಯೋಜನೆಗಳು
ಮುಂದಿನ ವರ್ಷದಲ್ಲಿ ಸಹಕಾರಿ ಸಂಘದ ಸುಳ್ಯ ಶಾಖೆಯ ಸ್ವಂತ ನಿವೇಶನದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಕೇಂದ್ರ ಸರಕಾರದ ಸಹಾಯಧನದೊಂದಿಗೆ ಅತ್ಯಾಧುನಿಕ ರೀತಿಯ ಜೇನು ಸಂಸ್ಕರಣಾ ಘಟಕವನ್ನು ನಿರ್ಮಿಸುವ ಯೋಜನೆಯಿದೆ. ಜೊತೆಗೆ ಹೊಸ ಜೇನು ಕೃಷಿಕರಿಗೆ ಉನ್ನತ ತರಬೇತಿ, ಜೇನು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಪ್ರೋತ್ಸಾಹ, ಕೃಷಿಯೊಂದಿಗೆ ಜೇನು ಸಾಕಾಣಿಕೆಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸಿ ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ ನೀಡಲಾಗುವುದು ಎಂದು ಅಧ್ಯಕ್ಷ ಚಂದ್ರ ಕೋಲ್ಚಾರ್ ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.