ಬೂಡು : ಸ್ತನ್ಯಪಾನ ಸಪ್ತಾಹ

Advt_Headding_Middle

 

ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬಾಲವಿಕಾಸ ಸಮಿತಿ ಬೂಡು , ಅಂಗನವಾಡಿ ಕೇಂದ್ರ ಬೂಡು, ಲಹರಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಬೂಡು, ಇನ್ನರ್ ವೀಲ್ ಕ್ಲಬ್ ಸುಳ್ಯ, ಇವರ ಸಹಯೋಗದೊಂದಿಗೆ, ವಿಶ್ವ ಸ್ತನ್ಯಪಾನ ಸಪ್ತಾಹ ಬೂಡು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮಹಿಳಾ ಆರೋಗ್ಯ ಮೇಲ್ವಿಚಾರಕಿ ಶ್ರೀಮತಿ ಹಿಮಾಲೇಶ್ವರಿ ಮಾತನಾಡಿ “ತಾಯಿ ಹಾಲಿನ ಮಹತ್ವ ಆರು ತಿಂಗಳು ತಾಯಿ ಎದೆ ಹಾಲು ಮಾತ್ರ ನೀಡಬೇಕು. ಬಾಟಲಿ ಹಾಲಿಗೆ ಉತ್ತೇಜನ ನೀಡಬಾರದು, ತಾಯಿ ಮಗುವಿಗೆ ಎದೆ ಹಾಲು ನೀಡುವುದರಿಂದ ಮಗುವಿನ ಮರಣ ಕಡಿಮೆ ಮಾಡಬಹುದು” ಎಂಬ ಮಾಹಿತಿ ನೀಡಿದರು.
ಮೇಲ್ವಿಚಾರಕಿ ಶ್ರೀಮತಿ ಶೈಲಜಾ ಬಿ. . ಸ್ತನ್ಯಪಾನದ ಸಂದರ್ಭದಲ್ಲಿ ತಾಯಂದಿರಿಗೆ ನೀಡಬೇಕಾದ ಮಾನಸಿಕ ಮತ್ತು ದೈಹಿಕ ಬೆಂಬಲದ ಕುರಿತು ಮಾಹಿತಿ ನೀಡಿದರು.
ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ರಾಮಚಂದ್ರ ಇವರು “ಆರೋಗ್ಯ ಮತ್ತು ನೆಮ್ಮದಿ ತಾಯಿಗೆ ಬಹಳ ಮುಖ್ಯ. ಈ ಎರಡೂ ಕುಟುಂಬದಲ್ಲಿ ದೊರೆತಾಗ ತಾಯಿ ಅತ್ಯುತ್ತಮವಾಗಿ ಮಗುವಿನ ಕಾಳಜಿ ನಿರ್ವಹಿಸಲು ಸಾಧ್ಯವಾಗುತ್ತದೆ” ಎಂದು ತಿಳಿಸಿದರು.
ಸ್ತನ್ಯಪಾನ ಸಪ್ತಾಹದ ಕುರಿತು ತಾಯಂದಿರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ವಿಜೇತರಿಗೆ ಲಹರಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘ ಬೂಡು ಇವರಿಂದ ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸೌಮ್ಯ ಬೂಡು ವಹಿಸಿದ್ದರು. ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ನವ್ಯ ವಿ., ಇನ್ನರ್ ವೀಲ್ ಕ್ಲಬ್ನ ಅಧ್ಯಕ್ಷೆ ಪೂಜಾ ಸಂತೋಷ್ ಹಾಗೂ ಸೆಕ್ರೆಟರಿ ವಿನುತಾ ಶೇಟ್ ಸದಸ್ಯರಾದ ಲತಾ ರೈ ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕರ್ತೆ ಕವಿತಾ ಬಿ. ಸ್ವಾಗತಿಸಿ ನಿರೂಪಿಸಿದರು. ಇನ್ನರ್ ವೀಲ್ ಕ್ಲಬ್ ನ ಸೆಕ್ರೆಟರಿ ವಿನುತಾ ಶೇಟ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳು ಗರ್ಭಿಣಿಯರು, ಬಾಣಂತಿಯರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.