Breaking News

ಬೆಳ್ಳಾರೆ : ಕಾಮಧೇನು ಮಲ್ಟಿಪರ್ಪಸ್ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ

Advt_Headding_Middle

 

 

ಬ್ರಹ್ಮಕುಮಾರಿ ಈಶ್ವರೀ ವಿದ್ಯಾಲಯ ಸುಳ್ಯ ಜಂಟಿ ಆಶ್ರಯದಲ್ಲಿ

ಕಲಿಕೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ರಕ್ಷಾ ಬಂಧನ ಕಾರ್ಯಕ್ರಮ

ಪೊಲೀಸರಿಗೆ ಹಾಗೂ ಆಶಾ ಕಾರ್ಯಕರ್ತೆಗೆ ಸನ್ಮಾನ

ಕಾಮಧೇನು ಮಲ್ಟಿಪರ್ಪಸ್ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಮತ್ತು ಈಶ್ವರಿ ವಿದ್ಯಾಲಯ ಸುಳ್ಯ ವತಿಯಿಂದ ಕಲಿಕೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ರಕ್ಷಾ ಬಂಧನ ಹಾಗೂ ಸನ್ಮಾನ ಕಾರ್ಯಕ್ರಮವು ಆ.24 ರಂದು ಕಾಮಧೇನು ಎಂ.ಮಾಧವ ಗೌಡರ ಧರ್ಮಶ್ರೀ ನಿಲಯದಲ್ಲಿ ನಡೆಯಿತು.

ಕು.ನಮ್ರತಾ ಮತ್ತು ಶ್ರೀಮತಿ ಪ್ರಜ್ಞಾ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು.

ಈಶ್ವರೀ ವಿದ್ಯಾಲಯದ ಉಮಾರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ರಕ್ಷಾ ಬಂಧನದ ಮೂಲಕ ಜಾಗೃತಿ ಮೂಡಬೇಕು. ಪ್ರತೀ ಮನೆಯಲ್ಲಿಯೂ ಶಾಂತಿ,ಪವಿತ್ರತೆ,ಸಂಸ್ಕಾರ ಬರಬೇಕು.
ಪ್ರತಿಯೊಬ್ಬರ ಜೀವನ ,ಕುಟುಂಬ, ಚೆನ್ನಾಗಿರಬೇಕು,ಸಂಬಂಧ ಸುಧಾರಿಸಬೇಕು ರಕ್ಷಾ ಬಂಧನಕ್ಕೆ ಬಹಳ ಮಹತ್ವವಿದೆ. ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು,ಪರಸ್ಪರ ದ್ವೇಷದಿಂದ ಇರಬಾರದು.
ಸಂಸ್ಕಾರ ಮನೆಯಿಂದಲೇ ಪ್ರಾರಂಭವಾಗಬೇಕು ಎಂದು ಹೇಳಿ ರಕ್ಷಾ ಬಂಧನದ ಮಹತ್ವದ ಬಗ್ಗೆ ತಿಳಿಸಿದರು.

ನಂತರ ವೇದಿಕೆಯಲ್ಲಿರುವವರಿಗೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆಲ್ಲರಿಗೂ ಕೈಗೆ ರಾಖಿ ಕಟ್ಟಿ ಸಿಹಿ ತಿಂಡಿ ನೀಡಿದರು.

*ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ*

ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮಧುರಾ, ಮನಿಷಾ, ಕಿರಣ್ ಪಿ, ಕೃತಿಕಾ ಪಿ, ರಶ್ಮಿ ಕೆ.ಎಂ, ಪದ್ಮಿನಿ ಸಿ.ಆರ್ ರವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಪೊಲೀಸರಿಗೆ ಸನ್ಮಾನ

ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿದ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್.ಐ.ಆಂಜನೇಯ ರೆಡ್ಡಿ, ಎ.ಎಸ್.ಐ.ಭಾಸ್ಕರ ಅಡ್ಕಾರು, ಹೆಡ್ ಕಾನ್ಸ್ ಟೇಬಲ್ ಬಾಲಕೃಷ್ಣ, ಕಾನ್ ಸ್ಟೇಬಲ್ ಗಳಾದ ಮಂಜುನಾಥ, ಚಂದ್ರ,ಪ್ರವೀಣ್, ಹಾಲೇಶ, ಶೈಲೇಶ್ ರವರನ್ನು ಶಾಲು ಹೊದಿಸಿ,ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಆಶಾ ಕಾರ್ಯಕರ್ತೆಗೆ ಸನ್ಮಾನ

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯಾದ ಗೀತಾರವರನ್ನು ಎಲ್ಲಾ ಆಶಾ ಕಾರ್ಯಕರ್ತೆಯರ ಪರವಾಗಿ ಸನ್ಮಾನಿಸಲಾಯಿತು.

ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಮಾಧವ ಗೌಡರು ಮನೆಯಲ್ಲಿ ಒಂದು ಕಾರ್ಯಕ್ರಮ ಇಟ್ಟುಕೊಳ್ಳಬೇಕು ಎಂದು ಭಾವಿಸಿದ್ದೆ.
ರಕ್ಷಾ ಬಂಧನ ಕಾರ್ಯಕ್ರಮ ನಡೆಸುವ ಬಗ್ಗೆ ಈಶ್ವರಿ ವಿದ್ಯಾಲಯದವರಲ್ಲಿ ತಿಳಿಸಿದ ಮೇರೆಗೆ ಅವರು ಇಂದು ಬಂದಿದ್ದಾರೆ.
ಒಳ್ಳೆಯ ರೀತಿಯಲ್ಲಿ ರಕ್ಷಾ ಬಂಧನ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ಅಲ್ಲದೆ ಕೊರೊನಾ ಸಂದರ್ಭದಲ್ಲಿ ಉತ್ತಮವಾಗಿ ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿದಲ್ಲದೆ ಲಾಕ್ ಡೌನ್ ಸಂದರ್ಭದಲ್ಲಿ ಯಾರಿಗೂ ತೊಂದರೆ ಕೊಡದೆ.
ಕಾನೂನು ಪ್ರಕಾರ ಉತ್ತಮವಾಗಿ ಕೆಲಸ ಮಾಡಿದ ಬೆಳ್ಳಾರೆ ಠಾಣೆಯ ಪೊಲೀಸರಿಗೆ,ಆಶಾ ಕಾರ್ಯಕರ್ತೆಯರಿಗೆ ಸನ್ಮಾನವನ್ನು ಕೂಡ ಇಟ್ಟುಕೊಂಡಿದ್ದೇವೆ.
ಕೇವಲ ಒಂದು ದಿನದಲ್ಲಿ ಇಂತಹ ಕಾರ್ಯಕ್ರಮ ಎರೇಂಜ್ ಮಾಡಿದ್ದೇವೆ.
ಎಲ್ಲ ಆತ್ಮೀಯರೂ ಪ್ರೀತಿಯಿಟ್ಟು ಬಂದಿದ್ದಾರೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.

ವೇದಿಕೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಶೇಖರ ಕಾಮತ್, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು, ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂ.ಮಾಜಿ ಅಧ್ಯಕ್ಷ ವಿಶ್ವನಾಥ ರೈ ಕಳಂಜ , ಶ್ರೀಮತಿ ನೀರಜಾಕ್ಷಿ ಮಾಧವ ಗೌಡ ಉಪಸ್ಥಿತರಿದ್ದರು.

ಸಾಗರ್ ಕಾರ್ಯಕ್ರಮ ನಿರೂಪಿಸಿದರು.
ಮನೆಯವರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.