ಸುಬ್ರಹ್ಮಣ್ಯ ಕೆ ಎಸ್ ಎಸ್ ಕಾಲೇಜಿನಲ್ಲಿ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶದ ಮಾಹಿತಿ ಕಾರ್ಯಕ್ರಮ

Advt_Headding_Middle

 

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಐಕ್ಯೂ ಎಸಿ ಘಟಕ ಮತ್ತು ಹೆಚ್ ಆರ್ & ಪ್ಲೇಸ್ ಮೆಂಟ್ ಘಟಕ ಇದರ ಸಹಯೋಗದೊಂದಿಗೆ ಆ. 25 ರಂದು ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶಗಳು‌ ಎಂಬ ಮಾಹಿತಿ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಗೋವಿಂದ ಎನ್ ಎಸ್ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಳದ‌ ವ್ಯವಸ್ಥಾಪನ ಸಮಿತಿಯ ಸದಸ್ಯ ರಾದ ಶ್ರೀಮತಿ ವನಜಾ ವಿ. ಭಟ್ ಇವರು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಹಾವಿದ್ಯಾಲಯದ ಪೂರ್ವ ವಿದ್ಯಾರ್ಥಿ, ಮದ್ರಾಸ್ ರೆಜಿಮೆಂಟ್ ಯೋಧ ರಾಧಾಕೃಷ್ಣ ಹಾಗೂ ನಾಗಾಲ್ಯಾಂಡ್ ನಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಮೋಹನ್ ಭಾಗವಹಿಸಿದ್ದರು.
ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶ್ರೀಮತಿ ಶೋಭಾ ಗಿರಿಧರ್ , ಎಚ್.ಆರ್ & ಪ್ಲೇಸ್ ಮೆಂಟ್ ಘಟಕದ ವಿದ್ಯಾರ್ಥಿ ಪ್ರತಿನಿಧಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ‌ ಸಂಯೋಜಕರಾದ ಹೆಚ್ ಆರ್ & ಪ್ಲೇಸ್ ಮೆಂಟ್ ಘಟಕದ ಸಂಯೋಜಕರಾದ ಶ ವಿನ್ಯಾಸ್ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ವಿದ್ಯಾರ್ಥಿನಿ ಸಂಧ್ಯಾ ಪ್ರಾರ್ಥಿಸಿದರು.
ಮಹಾವಿದ್ಯಾಲಯ ಐಕ್ಯೂ ಎಸಿ ಘಟಕದ ಸಂಯೋಜಕರಾದ ಡಾ. ಪ್ರಸಾದ್ ಎನ್. ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕರಾದ ಕುಮಾರ್ ಎಸ್ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಆರತಿ ಕೆ. ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.