ಆ.27  : ಹರಿಹರ ಪಲ್ಲತ್ತಡ್ಕದಲ್ಲಿ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

Advt_Headding_Middle

 

ಆ.27 ರಂದು ದ.ಕ ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರ ವತಿಯಿಂದ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನ ಸಹಯೋಗದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ್” ದ ಪ್ರಯುಕ್ತ “ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಹಾಗೂ ಮಾಹಿತಿ ಶಿಬಿರ” ನಡೆಯಲಿದೆ.

ಈ ಕಾರ್ಯಕ್ರಮವು ಪೂರ್ವಾಹ್ನ 10:30 ಕ್ಕೆ ಉದ್ಘಾಟನೆಗೊಂಡು ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ವಠಾರದಲ್ಲಿ ಲಸಿಕೆ ನೀಡಲಾಗುವುದು.
ನಂತರ 11:30 ರಿಂದ ಹರಿಹರ ಶ್ರೀರಾಮಕುಟ್ಟಿ ಅವರ ಮನೆಯ ಬಳಿ ಲಸಿಕೆ ನೀಡಲಾಗುವುದು.
ಪೂರ್ವಾಹ್ನ 12:00 ರಿಂದ ರೇಗನ್ ಶೆಟ್ಟಿಯಡ್ಕ ಅವರ ಮನೆಯ ಬಳಿ ಲಸಿಕೆ ನೀಡಲಾಗುವುದು.
ಅಪರಾಹ್ನ 12:30 ರಿಂದ ಕಲ್ಲೇಮಠ ಸಾರ್ವಜನಿಕ ಗ್ರಂಥಾಲಯದ ಬಳಿ ಲಸಿಕೆ ನೀಡಲಾಗುವುದು.
ಅಪರಾಹ್ನ 1:00 ರಿಂದ ಬಾಳುಗೋಡು ಬಸವನಗುಡಿ ವಠಾರದಲ್ಲಿ ಹಾಗೂ 1:30 ರಿಂದ ಬಾಳುಗೋಡು ಬೆಟ್ಟುಮುಕ್ಕಿ ಮೈದಾನದ ಬಳಿ ಲಸಿಕೆ ನೀಡಲಾಗುವುದು. ಎಲ್ಲಾ ನಾಯಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ನಾಯಿಗಳನ್ನು ಲಸಿಕೆಗಾಗಿ ಕರೆತರುವವರು ನಾಯಿಯ ಮಾಲಿಕರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಯನ್ನು ಕಡ್ಡಾಯವಾಗಿ ತರತಕ್ಕದ್ದು ಎಂದು ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.