ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ

Advt_Headding_Middle

 

ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ. 9ರಂದು ಭೋಧನಾ ಕಲೆ (Art of Teaching) ಎಂಬ ವಿಷಯದ ಬಗ್ಗೆ ಅಂತರ್ಜಾಲ (zoom) ತರಬೇತಿ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಕ ತರಬೇತಿ ಸಂಸ್ಥೆಯಾದ
ಎಂ.ಇ.ಎಸ್ ಟೀಚರ್ಸ್ ಕಾಲೇಜಿನ ಪೂರ್ವ ಪ್ರಾಂಶುಪಾಲರೂ, ಖ್ಯಾತ ಶಿಕ್ಷಕ ತರಬೇತುದಾರರೂ ಹಾಗೂ ಹಿರಿಯ ಶಿಕ್ಷಣ ತಜ್ಞರಾದ ಡಾ.ಹೆಚ್.ಎಸ್‌. ಗಣೇಶ ಭಟ್ ತರಬೇತಿ ನೀಡಲಿದ್ದಾರೆ.
ವಿದ್ಯಾರ್ಥಿಗಳು ಮತ್ತು ವೃತಿಪರ ಸಮೂಹದ ಕೌಶಲ್ಯವನ್ನು ಹೆಚ್ವಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗುತ್ತಿರುವ ಪ್ರತಿಷ್ಠಾನದ ಹನ್ನೊಂದನೆ ತರಬೇತಿ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನ ಅಧ್ಯಕ್ಷರಾದ ಡಾ‌. ಉಮ್ಮರ್ ಬೀಜದಕಟ್ಟೆ ವಹಿಸಲಿದ್ದಾರೆ.
ಮಂಗಳೂರಿನ ಪ್ರತಿಷ್ಠಿತ ಸಮಾಜಸೇವಾ ವಿದ್ಯಾಸಂಸ್ಥೆಯಾದ ಸ್ಕೂಲ್ ಆಫ್ ಸೋಷಿಯಲ್ ವರ್ಕ್
ರೋಶನಿ ನಿಲಯ ಇದರ ಪ್ರಾಂಶುಪಾಲ ಡಾ. ಜ್ಯೂಲಿಯೆಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಂಡ್ ಟ್ರೈನರ್ ಡಾ. ಸರ್ಫರಾಜ್ ಜೆ ಹಾಶಿಮ್, ಶಿಕ್ಷಣ ತಜ್ಞರು ಹಾಗೂ ಸಲಹೆಗಾರರಾದ ರಫೀಕ್ ಮಾಸ್ಟರ್ , ಎನ್.ಎಂ.ಸಿ. ಸುಳ್ಯ ಇದರ ನಿಕಟಪೂರ್ವ ಪ್ರಾಂಶುಪಾಲರಾದ ಡಾ. ಪೂವಪ್ಪ ಕಣಿಯೂರು, ಸಜ್ಜನ ಪ್ರತಿಷ್ಠಾನದ ರಾಜ್ಯ ಸಂಚಾಲಕ ಹಾಗೂ ಎಎ ಪಾರ್ಟ್ನರ್ಸ್ ಬೆಂಗಳೂರು ಇದರ ಮುಖ್ಯಸ್ಥರಾದ ಅಡ್ವೋಕೇಟ್ ಮಂಜುನಾಥ್ ಬಿ, ಎವಿಎನ್ ವಿದ್ಯಾಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೃತಿ ಆದಿತ್ಯ, ಬೆಂಗಳೂರಿನ ಖ್ಯಾತ ತರಬೇತುದಾರರಾದ ಎಂ.ಎಸ್. ಶೇಖರ್, ಮಂಗಳೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಡಾ. ಶಿವರಾಂ ಹಾಗೂ ವಿಸ್ಡಂ ವಿದ್ಯಾ ಸಂಸ್ಥೆ ಬುಡೋಳಿ ಇದರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಫಾತಿಮ ಅಫ್ರೀನರವರು ಉಪಸ್ಥಿತರಾಗಲಿದ್ದಾರೆ. ‌ ಶ್ರೀಮತಿ ವೀಣಾ ಪಿ.ಎಂ (ಯುಎಇ) ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯಿರುವವರು ಕು| ಹರ್ಷಿತ ಅಡೀಲು [ 63640 25719 ] ಮತ್ತು ಶಶಿಕಾಂತ್ [ 9591997651 ] ಇವರನ್ನು ಸಂಪರ್ಕಿಸಬೇಕೆಂದು ಕಾರ್ಯಕ್ರಮ ಸಂಘಟಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.