ಕರ್ನಾಟಕ ರಾಜ್ಯ ರೈತ ಸಂಘ ತೊಡಿಕಾನ ಗ್ರಾಮ ಘಟಕ ರಚನೆ

Advt_Headding_Middle

 

ಕರ್ನಾಟಕ ರಾಜ್ಯ ರೈತ ಸಂಘ ತೊಡಿಕಾನ ಗ್ರಾಮ ಘಟಕವನ್ನು ಆ. 20ರಂದು ರಚಿಸಲಾಯಿತು.

ಅಧ್ಯಕ್ಷತೆಯನ್ನು ರೈತ ಸಂಘದ ಒಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ವಹಿಸಿದ್ದರು.
ಅತಿಥಿಗಳಾಗಿ ಲೋಲಜಾಕ್ಷ ಭೂತಕಲ್ಲು , ಪ್ರೇಮನಾಥ ಶೆಟ್ಟಿ ಬಾಳ್ತಿಲ, ನುಜಾಲು ಪದ್ಮನಾಭ ಗೌಡ, ಕೇಶವ ಗೌಡ ತೊಡಿಕಾನ ಉಪಸ್ಥಿತರಿದ್ದರು.

ತೊಡಿಕಾನ ಗ್ರಾಮ ಘಟಕಕ್ಕೆ ಶಾಲು ಹಾಕಿ ಸದಸ್ಯತನವನ್ನು ಸ್ವೀಕರಿಸಲಾಯಿತು.
ನಂತರ ತೊಡಿಕಾನ ಗ್ರಾಮದ ನೂತನ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಕೇಶವ ಪ್ರಸಾದ್ ತೊಡಿಕಾನ
ಉಪಾಧ್ಯಕ್ಷರಾಗಿ ಚಂದ್ರಶೇಖರ್ ಬಾಳೆಕಜೆ, ಕಾರ್ಯದರ್ಶಿಯಾಗಿ ರಾಮಕೃಷ್ಣ ಕುಂಟುಕಾಡು
ಜತೆ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಪಾರೆಮಜಲು,
ಖಜಾಂಜಿಯಾಗಿ ಕೇಶವ ಕೊಳಲುಮೂಲೆ, ಸಂಚಾಲಕರಾಗಿ ವೆಂಕಟ್ರಮಣ ಪೆತ್ತಾಜೆ ಆಯ್ಕೆಯಾದರು.
ಐವತ್ತಕ್ಕೂ ಹೆಚ್ಚು ಜನರು ಸದಸ್ಯತ್ವ ಸ್ವೀಕರಿಸಿದರು.

ನೂತನ ಘಟಕದ ಪದಾಧಿಕಾರಿಗಳಿಗೆ ಹಾಗೂ ನೂತನ ಸದಸ್ಯರಿಗೆ ಪ್ರಮಾಣ ವಚನ ನಡೆಯಿತು. ನೂತನ ಘಟಕದ ಅಧ್ಯಕ್ಷ ಕೇಶವ ಪ್ರಸಾದ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಮಾಹಿತಿ ಹಾಗು ಸಂವಾದ ನಡೆಯಿತು.

ಒಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಮಾತನಾಡಿ, ಸಮಸ್ಯೆ-ಸಂಘಟನೆ-ಹೋರಾಟ-ಪರಿಹಾರ ಎಂದು ರೈತ ಸಂಘದ ಧ್ಯೇಯೋದ್ದೇಶಗಳನ್ನು ತಿಳಿಸಿದರು.
ಸುಳ್ಯ ತಾಲೂಕು ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.

ನೂತನ ಸಂಚಾಲಕ ವೆಂಕಟ್ರಮಣ ಪೆತ್ತಾಜೆ ವಂದಿಸಿದರು. ಸುಳ್ಯ ತಾಲೂಕು ಘಟಕದ ಕಾರ್ಯದರ್ಶಿ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.