Breaking News

ಜೀರ್ಣಾವಸ್ಥೆಯಲ್ಲಿದ್ದ ದೊಡ್ಡತೋಟದ ಶ್ರೀರಾಮನ ಮಂದಿರಕ್ಕೆ ಮತ್ತೆ ಮರುಜೀವ!

Advt_Headding_Middle

ಆ.29ರಂದು ಭಕ್ತಾಭಿಮಾನಿಗಳ ಸಭೆ

ಅಲ್ಲಿ ನಡೆಯುತ್ತಿದ್ದ ಭಜನೆಯ ಝೇಂಕಾರಗಳು ಕೇಳುಗನ ಮನಸ್ಸನ್ನು ಹಗುರಗೊಳಿಸುತ್ತಿತ್ತು. ಊರಿನ ಸಣ್ಣ ಪುಟ್ಟ ಸಭೆಗಳಿಗೆ ಈ ಮಂದಿರ ಸಾಕ್ಷಿಯಾಗುತ್ತಿತ್ತು. ಆದರೆ ಕಳೆದ ಹಳವು ಸಮಯಗಳಿಂದ ಈ ಮಂದಿರ ಮಾತ್ರ ಯಾವುದೇ ಕಾರ್ಯಕ್ರಮಗಳು, ಸಭೆ ಸಮಾರಂಭಗಳು ನಡೆಯದೇ ಬಿಕೋ ಎನ್ನುತ್ತಿತ್ತು. ಗಿಡ ಗಂಟೆಗಳು, ಪೊದೆಗಳು ಈ ಮಂದಿರದ ಸುತ್ತ ತುಂಬಿ ಬಳ್ಳಿಗಳು ಶ್ರೀ ರಾಮನ ಮಂದಿರವನ್ನು ಆವರಸುತ್ತಿತ್ತು.

ಅತ್ತ ಆಯೋಧ್ಯೆಯ ರಾಮನ ಮಂದಿರ ಎದ್ದು ನಿಲ್ಲುತ್ತಿದ್ದರೆ, ಇತ್ತ ದೊಡ್ಡತೋಟದ ಶ್ರೀ ರಾಮನ ಮಂದಿರ ಕುಸಿತ್ತಿದೆಯಲ್ಲ ಅನ್ನುವ ಚಿಂತೆ ದೊಡ್ಡತೋಟ ಆಸುಪಾಸಿನ‌ ಹಲವರನ್ನು ಕಾಡುತ್ತಿತ್ತು.
ಈಗ ಇದಕ್ಕೆಲ್ಲ ಮುಕ್ತಿ ಸಿಗುವ ಸಮಯ ಒದಗಿ ಬಂದಂತಿದೆ. ಶ್ರೀ ರಾಮನ ಭಜನಾ ಮಂದಿರವೊಂದು ದೊಡ್ಡ ತೋಟದಲ್ಲಿ ಮತ್ತೆ ಹೊಸ ರೂಪ ಪಡೆದು, ಹಿಂದೆ ನಡೆಯುತ್ತಿದ್ದ ಕಾರ್ಯಕ್ರಮ ಗಳು ಮತ್ತೆ ನಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ. ಜೀರ್ಣವಸ್ಥೆಯಲ್ಲಿರುವ ದೊಡ್ಡತೋಟದ ಶ್ರೀ ರಾಮ ಮಂದಿರ ಜೀರ್ಣೋದ್ಧಾರ ಗೊಳ್ಳಲಿದೆ!

 

ದೊಡ್ಡತೋಟದ ಶ್ರೀ ರಾಮ ಭಜನಾ ಮಂದಿರದಲ್ಲಿ ಯಾವುದೇ ಕಾರ್ಯಗಳು ನಡೆಯದೇ ಬೀಳುವ ಹಂತಕ್ಕೆ ತಲುಪಿದೆ. ಮಾಡಿನ ಪಕ್ಕಾಸುಗಳು ತುಂಡಾಗಿ ಹಂಚುಗಳು ನೆಲಕ್ಕೆ ಬಿದ್ದಿವೆ. ವಿದ್ಯುತ್ ನೀರು ಹೀಗೆ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದ್ದರೂ ಕೆಲವು ಸಮಯಗಳಿಂದ ಯಾವುದೇ ಪ್ರಯೋಜನಕ್ಕೆ ಬಾರದಂತಿತ್ತು. ಇದೀಗ ಭಜನಾ ಮಂದಿರವನ್ನು ಮತ್ತೆ ಅಭಿವೃದ್ಧಿ ಮಾಡುವ ವಿಚಾರವಾಗಿ ಚರ್ಚಿಸುವ ಸಲುವಾಗಿ ಕಾರ್ಯಕಾರಿ ಮಂಡಳಿ ಸದಸ್ಯರ ವತಿಯಿಂದ ಭಕ್ತಾಭಿಮಾನಿಗಳ ಸಭೆಯನ್ನು ಆ.29ರಂದು ಸಂಜೆ 4 ಗಂಟೆಗೆ ಭಜನಾ ಮಂದಿರದಲ್ಲಿ ಕರೆಯಲಾಗಿದೆ.

ಒಟ್ಟಾಗಿ ಊರಿನ ಹಿರಿಯರು ಕಟ್ಟಿ ಬೆಳೆಸಿ, ಹಲವು ಚಟುವಟಿಕೆಗಳಿಗೆ ವೇದಿಕೆಯಾಗುವಂತಹ ಭಜನಾ ಮಂದಿರಗಳನ್ನು ಉಳಿಸಿ‌ಕೊಂಡು ಮುಂದಿನ ಜನಾಂಗದವರಿಗೆ ಉಪಯೋಗವಾಗುವಂತಹ‌ ಪ್ರಯತ್ನಕ್ಕೆ ಊರವರು ಮುಂದಾಗಿರುವುದು ಶ್ಲಾಘನೀಯ ವಾಗಿದೆ.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.