ಸಚಿವ ಅಂಗಾರರಿಗೆ ಗಡಿಪ್ರದೇಶದ ಜನರ ಮನವಿ ಫಲಪ್ರದ

Advt_Headding_Middle

 

ಪಂಜಿಕಲ್ ತನಕ ಬರಲಾರಂಭಿಸಿದ ಕೇರಳ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು
ಕೇರಳದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇರಳದ ಕಾಸರಗೋಡಿನಿಂದ ಸುಳ್ಯಕ್ಕೆ ಪ್ರತಿನಿತ್ಯ ಸಂಚರಿಸುತ್ತಿದ್ದ ಕೇರಳ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಇದೀಗ ಕೇರಳ-ಕರ್ನಾಟಕದ ಗಡಿಪ್ರದೇಶವಾದ ಪಂಜಿಕಲ್ ತನಕ ಬರಲಾರಂಭಿಸಿದೆ.
ಈ ಬಗ್ಗೆ ಗಡಿಪ್ರದೇಶದ ಜನರು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತ್ತು. ಮನವಿ ಸ್ವೀಕರಿಸಿದ ಸಚಿವರು ಗಡಿಪ್ರದೇಶದ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರೆಂದು ತಿಳಿದುಬಂದಿದೆ.
ಇದೀಗ ಆ.24ರಿಂದ ಪರಪ್ಪೆ ತನಕ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು ಪಂಜಿಕಲ್ ತನಕ ಬರುತ್ತಿವೆ.
ಕೊರೊನಾ ಕಾರಣದಿಂದ ಮಂಡೆಕೋಲು ಗ್ರಾಮದ ಮುರೂರು ಚೆಕ್ ಪೋಸ್ಟ್ ನಿಂದ ಪಂಜಿಕಲ್ (ಗಡಿ)ಗೆ ಬರುವ ಕೇರಳ ಬಸ್ ಅನ್ನು ತಡೆಹಿಡಿಯಲಾಗುತ್ತಿತ್ತು. ಇದರಿಂದಾಗಿ ಪಂಜಿಕಲ್ಲು ಗಡಿಪ್ರದೇಶದ ಬೆಳ್ಳಿಪಾಡಿ ಗ್ರಾಮಸ್ಥರ ಮನವಿಯ ಮೇರೆಗೆ ಬಸ್ ಗಡಿಯವರೆಗೆ ಬರಲು ಆರಂಭಿಸಿದೆ.
ಬೆಳ್ಳಿಪ್ಪಾಡಿ ಬಿಜೆಪಿ ಕಾರ್ಯಕರ್ತರು ಸುಳ್ಯ ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ಕಡ್ಕ ಮತ್ತು ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರಾದ ಡಿ .ಸಿ ಬಾಲಚಂದ್ರ ಅವರ ನೇತೃತ್ವದಲ್ಲಿ ಸಚಿವ ಅಂಗಾರರಿಗೆ ಮನವಿ ಸಲ್ಲಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.