ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘಕ್ಕೆ ಮಾಜಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಭೇಟಿ

Advt_Headding_Middle

 

ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗು ಮಾಜಿ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಮತ್ತು ಅವರ ಪತ್ನಿ ಡಾಟಿ ಸದಾನಂದ ಗೌಡರವರು ಭೇಟಿ ನೀಡಿದರು.
ತನ್ನ ದೇವರಗುಂಡ ಮನೆಯಿಂದ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಸಂಘಕ್ಕೆ ಭೇಟಿ ನೀಡಿದ ಸದಾನಂದ ಗೌಡರನ್ನು ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಮತ್ತು ಡಾಟಿ ಸದಾನಂದ ಗೌಡರವರಿಗೆ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ ಹೂಗುಚ್ಚ ನೀಡಿ ಸ್ವಾಗತಿಸಿದರು. ಬಳಿಕ ಸಂಘದ ಬ್ಯಾಂಕಿಂಗ್ ವಿಭಾಗಕ್ಕೆ ಭೇಟಿ ನೀಡಿದ ಸದಾನಂದ ಗೌಡರು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ ಆಡಳಿತ ಮಂಡಳಿ ಪರವಾಗಿ ಸ್ವಾಗತಿಸಿ, ಈ ಭಾಗದಲ್ಲಿ ಹಳದಿ ರೋಗದಿಂದ ಉಂಟಾಗುತ್ತಿರುವ ತೊಂದರೆಯ, ಕಾಡನೆಗಳ ಹಾವಳಿಯಿಂದ ಕೃಷಿಕರಿಗೆ ಉಂಟಾಗುತ್ತಿರುವ ನಷ್ಟಗಳ ಬಗ್ಗೆ, ವಿದ್ಯುತ್ ಸಮಸ್ಯೆ ಬಗ್ಗೆ ಮತ್ತು ಬಿ.ಎಸ್.ಎನ್.ಎಲ್. ಸಮಸ್ಯೆಗಳ ಬಗ್ಗೆ ಬಗ್ಗೆ ಗಮನ ಸೆಳೆದರು. ಡಿ.ವಿ.ಯವರು ಮಾತನಾಡಿ, ಬಹಳ ದಿನಗಳ ಬಳಿಕ ನಿಮ್ಮನ್ನೆಲ್ಲ ಭೇಟಿ ಮಾಡುತಿದ್ದೇನೆ. ಈ ಭೇಟಿಯು ಚಾಯ್ ಪೇ ಚರ್ಚಾ ಆಗಲಿ ಎಂದರು. ಹಳದಿ ರೋಗದ ನಿವಾರಣೆಗೆ ಸರಕಾರವು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ಅಡಿಕೆ ಕೃಷಿಕರ ನೆರವಿಗಾಗಿ ಸರಕಾರದ ಮಟ್ಟದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಹೇಳಿದರು. ಅಡಿಕೆ ಬೆಳೆದ ಕೃಷಿಕನಿಗೆ ಪರ್ಯಾಯ ಬೆಳೆಗೆ ಆರ್ಥಿಕವಾಗಿ ಹೊಂದಿಕೊಳ್ಳುವುದು ತ್ರಾಸದಾಯಕವಾದರೂ ಅಡಿಕೆ ಎಲೆ ಹಳದಿರೋಗವು ವ್ಯಾಪಕವಾಗಿ ಹಬ್ಬಿದ್ದು ಪರ್ಯಾಯ ಬೆಳೆ ಅನಿವಾರ್ಯ ಎಂದರು. ಕಾಡಾನೆ ಹಾವಳಿ, ೧೧೦ ಕೆ.ವಿ. ಅನುಷ್ಟಾನದಲ್ಲಿ ಉಂಟಾಗುತ್ತಿರುವ ವಿಳಂಬದ ಬಗ್ಗೆ ಮತ್ತು ಬಿಎಸ್.ಎನ್.ಎಲ್. ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸಂಬಂಧಪಟ್ಟ ಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಹೇಳಿದರು. ಸಹಕಾರ ಸಂಘದ ವಿದ್ಯಾರ್ಥಿಗಳಿಗೆ ಉಚಿತ ವೈಫೈ ಸೇವೆ, ಆಂಬ್ಯುಲನ್ಸ್ ಸೇವೆ ಮತ್ತು ಒಟ್ಟಾರೆ ಕಾರ್ಯವೈಖರಿಯ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು.
ಬಳಿಕ ಸದಾನಂದ ಗೌಡರಿಗೆ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆಯವರು ಸ್ಮರಣಿಕೆ ನೀಡಿ ಗೌರವಿಸಿದರು. ಬಳಿಕ ಸಮೃದ್ಧಿ ಮಾರ್ಟ್ಗೆ ಭೇಟಿ ನೀಡಿದ ಡಿ.ವಿ. ಸದಾನಂದ ಗೌಡ ಮತ್ತು ಅವರ ಪತ್ನಿ ಡಾಟಿಸದಾನಂದ ಗೌಡರವರು ಗ್ರಾಮೀಣ ಭಾಗದಲ್ಲಿ ಇಂತಹ ಸೂಪರ್ ಮಾರ್ಕೆಟ್ ಅವಶ್ಯಕ ಹಾಗು ಇದೊಂದು ಮಾದರಿ ಕಾರ್ಯ ಎಂದು ಶ್ಲಾಘನೆ ಮಾಡಿ, ರೈತರ ಎಲ್ಲಾ ಸಮಸ್ಯೆಗಳ ಪರಿಹಾರಗಳಿಗೆ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವದೇ ಪರಿಹಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ನಿರ್ದೇಶಕರುಗಳಾದ ವಿನೋದ್ ಉಳುವಾರು, ಚಂದ್ರಶೇಖರ ಚೋಡಿಪಣೆ, ಕುಸುಮಾಧರ ಅಡ್ಕಬಳೆ, ನಿಧೀಶ್ ಅರಂತೋಡು, ಸೋಮಯ್ಯ ಹೆಚ್, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಣಿ ದೇರಾಜೆ, ಉಪಾಧ್ಯಕ್ಷರಾದ ಶ್ವೇತಾ ಅರಮನೆಗಯ, ಪಂಚಾಯತ್ ಸದಸ್ಯರಾದ ಕೇಶವ ಅಡ್ತಲೆ, ಪುಷ್ಪಾಧರ ಕೊಡೆಂಕೇರಿ, ಮಾಲಿನಿ ಉಳುವಾರು, ವೆಂಕಟ್ರಮಣ ಪೆತ್ತಾಜೆ, ಮರ್ಕಂಜ ಗ್ರಾಮ ಪಂಚಾಯತ್ ಸದಸ್ಯರಾದ ಚಿತ್ತರಂಜನ್ ಕಟ್ಟಕೋಡಿ, ಮಹಿಳಾ ಯುವ ಮೋರ್ಚಾ ಕಾರ್ಯದರ್ಶಿಯಾದ ಗೀತಾ ಶೇಖರ್ ಉಳುವಾರು, ಸಂಘದ ಮಾಜಿ ನಿರ್ದೇಶಕರಾದ ವಾರಿಜಾ ಕುರುಂಜಿ, ನಾರಾಯಣ ಕೆ.ಕೆ., ಸಂಘದ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.