Breaking News

ಗುತ್ತಿಗಾರು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Advt_Headding_Middle

 

 

ಗುತ್ತಿಗಾರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಆ.26 ರಂದು ನಡೆಯಿತು. 2019- 20 ನೇ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಅಖಿಲಾ ಕರುವಜೆ, ಜಾಯ್ಲಿನ್ ಮರಿಯಾ ಅವರನ್ನು ಗೌರವಿಸಲಾಯಿತು. ಹಾಗೂ 2020-21 ನೇ ಸಾಲಿನಲ್ಲಿ ಎಸ್.ಎಸ್.ಎಲ್. ಸಿ.ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ನಿಶ್ಮಿತಾ ಕೆ ಜಿ ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಅನುಷಾ ಎಂ.ವಿ. ಆಶಿಕ್ ಎಚ್, ಸುಶ್ಮಿತಾ ಬಿ. ಎ, ಸಿಂಚನಾ ಗೌರಿ, ತ್ರಪ್ತಿ ಕೆ. ಟಿ. ಇವರನ್ನು ಸನ್ಮಾನಿಸಲಾಯಿತು.

2020-21ನೇ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ ಮಲೆನಾಡ ಸಿರಿ ಪ್ರಶಸ್ತಿ ಪಡೆದ ಹಾಗೂ ಎನ್ ಎಂ ಎಂ ಎಸ್ ಮತ್ತು ಎನ್ ಟಿ ಎಸ್ ಸಿ ಪರೀಕ್ಷೆಯ ಶಾಲಾ ನೋಡೆಲ್ ಶಿಕ್ಷಕರಾದ ಶ್ರೀ ಗಿರೀಶ್ ಕುಮಾರ್ ಪಿ ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2020-21 ನೇ ಸಾಲಿನಲ್ಲಿ ಕೊಡಲಾಗುವ ದತ್ತಿನಿಧಿ ಬಹುಮಾನಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರೇವತಿ ಆಚಳ್ಳಿ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್. ಡಿ.ಎಂ.ಸಿ ಅಧ್ಯಕ್ಷರಾದ ಲೋಕೇಶ್ವರ ಡಿ ಆರ್, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟ್ ವಳಲಂಬೆ, ಮಾಯಿಲಪ್ಪ ಗೌಡ ಕೊಂಬೊಟ್ಟು, ಶ್ರೀಮತಿ ಮಂಜುಳಾ ಮುತ್ಲಾಜೆ ಹಾಗೂ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ನಾಗರಾಜ ಪಿ , ಮುಖ್ಯ ಶಿಕ್ಷಕರಾದ ನೆಲ್ಸನ್ ಕ್ಯಾಸ್ಟಲಿನೊ ಮತ್ತು ಶಿಕ್ಷಕ- ಶಿಕ್ಷಕೇತರ ವರ್ಗದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪ್ರಸನ್ನಕುಮಾರ್ ವೈ ಡಿ , ಕುಮಾರಿ ಸೌಜನ್ಯ ಎಂ ಎಂ ಹಾಗೂ ಸುನಿಲ್ ಕುಮಾರ್ ಆರ್ ಕೆ ಇವರು ಸನ್ಮಾನಿತರನ್ನು ಪರಿಚಯಿಸಿದರು. ಮುಖ್ಯ ಶಿಕ್ಷಕರು ಶಾಲಾ ವರದಿ ವಾಚಿಸಿದರು. ಶ್ರೀಮತಿ ಶ್ರುತಿ ಟ.ಸಿ. ದತ್ತಿನಿಧಿ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು. ಶಿಕ್ಷಕರಾದ ಗಿರೀಶ್ ಕುಮಾರ್ ಪಿ ಸ್ವಾಗತಿಸಿದರೆ, ಸುನಿಲ್ ಕುಮಾರ್ ವಂದಿಸಿದರು .ವಿಜ್ಞಾನ ಶಿಕ್ಷಕಿ ಕವಿತಾ ಡಿ ಎಂ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.