ಕಾಗ್ನಿಜೆಂಟ್ ಕಂಪೆನಿ ಕೊಡಮಾಡಿದ 20  ಕಂಪ್ಯೂಟರ್ ಗಳು ರೋಟರಿ ಕ್ಲಬ್ ಮೂಲಕ ಸುಳ್ಯ ಸರಕಾರಿ ಕಾಲೇಜಿಗೆ ಹಸ್ತಾಂತರ

Advt_Headding_Middle

ಸಾಫ್ಟ್ ವೇರ್ ಕಂಪೆನಿಯಾದ ಕಾಗ್ನಿಜೆಂಟ್ ಕಂಪೆನಿಯು ರಾಜ್ಯಾದ್ಯಂತದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಉಚಿತವಾಗಿ ನೀಡಲು ಕಾಲೇಜು ಶಿಕ್ಷಣ ಇಲಾಖೆಗೆ ಹನ್ನೆರಡು ಸಾವಿರದ ಐನೂರು ಕಂಪ್ಯೂಟರ್ ಗಳನ್ನು ನೀಡಿದ್ದು ಅವುಗಳನ್ನು ಕಾಲೇಜುಗಳಿಗೆ ತಲುಪಿಸುವ ಜವಾಬ್ದಾರಿಯನ್ನು ರೋಟರಿ ಸಂಸ್ಥೆಯು ವಹಿಸಿಕೊಂಡಿದೆ. ಅದರಂತೆ ಸುಳ್ಯಜ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬಂದ ೨೦ ಕಂಪ್ಯೂಟರ್ ಗಳನ್ನು ಸುಳ್ಯ ರೋಟರಿ ಕ್ಲಬ್ ಪದಾಧಿಕಾರಿಗಳು ಆಗಸ್ಟ್ ೨೬ ರಂದು ಕಾಲೇಜಿಗೆ ಹಸ್ತಾಂತರಿಸಿದರು.
ಕಾಲೇಜಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಭಾಕರನ್ ನಾಯರ್ ರವರು ಕಾಲೇಜು ಪ್ರಾಂಶುಪಾಲ ಡಾ. ಅಚ್ಯುತ ಪೂಜಾರಿ ಅವರಿಗೆ ಕಂಪ್ಯೂಟರ್ ಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ಆನಂದ ಖಂಡಿಗ, ಡಾ.ಪಿ.ಕೆ. ಕೇಶವ್, ಗಣೇಶ್ ಭಟ್ ಸಿ.ಎ., ಕಸ್ತೂರಿ ಶಂಕರ್, ಕು. ಮಹಾಲಕ್ಷ್ಮಿ ಕೊರಂಬಡ್ಕ, ಆಗ್ರೋ ಸನತ್, ಸಿಎಚ್ ಪ್ರಭಾಕರನ್ ನಾಯರ್, ಸರಕಾರಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಸತೀಶ್ ಕೊಯಿಂಗಾಜೆ, ಉಪನ್ಯಾಸಕ ಸುರೇಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಕಾಲೇಜಿಗೆ ಇನ್ನೂ ಹತ್ತು ಕಂಪ್ಯೂಟರ್ ಗಳು ಬರಲಿದ್ದು ಅವುಗಳನ್ನು ರೋಟರಿ ಸಿಟಿ ಕ್ಲಬ್ ನವರು ಹಸ್ತಾಂತರ ಮಾಡಲಿದ್ದಾರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.