Breaking News

ಕರ್ನಾಟಕ ರಾಜ್ಯ ರೈತ ಸಂಘದ ಸುಳ್ಯ ತಾಲೂಕು ಘಟಕದ ಸಭೆ

Advt_Headding_Middle

 

ಕರ್ನಾಟಕ ರಾಜ್ಯ ರೈತ ಸಂಘದ ಸುಳ್ಯ ತಾಲೂಕು ಘಟಕದ ಸಭೆಯು ಆ. 2೦ರಂದು ತೊಡಿಕಾನ ಕೇಶವ ಪ್ರಸಾದ್‌ರವರ ಮನೆಯ ಸಭಾಂಗಣದಲ್ಲಿ ನಡೆಯಿತು.
ದ.ಕ.ಜಿಲ್ಲಾ ಘಟಕದ ಕ.ರಾ. ರೈತ ಸಂಘದ ಜಿಲ್ಲಾಧ್ಯಕ್ಷರಾದ ಒಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಬಾಳ್ತಿಲ ವಿಶೇಷ ಆಹ್ವಾನಿತ ಅತಿಥಿಯಾಗಿ ಆಗಮಿಸಿದ್ದರು.
ತಾಲೂಕು ಘಟಕದ ಅಧ್ಯಕ್ಷರಾದ ಲೋಲಜಾಕ್ಷ ಭೂತಕಲ್ಲು ಅಧ್ಯಕ್ಷತೆ ವಹಿಸಿದ್ದರು.
ರೈತರ ಅಡಿಕೆ ಎಲೆ ಹಳದಿ ರೋಗದ ಸಮಸ್ಯೆಗಳಿಗೆ ಸರಕಾರದಿಂದ ಪರಿಹಾರ ದೊರಕಿಸುವ ಉದ್ದೇಶದಿಂದ ಖ್ಯಾತ ಕೃಷಿ ತಜ್ಞರಾದ ಪ್ರಕಾಶ್ ಕಮ್ಮರಡಿಯವರನ್ನು ಕರೆಯಿಸಿ ರೈತರ ಸ್ವಯಂ ಘೋಷಿತ ಅರ್ಜಿಯನ್ನು ಸೆ. ೧೮ ರಂದು ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಅಕ್ಟೋಬರ್ ೨ರಂದು ಮೂರು ಕೃಷಿ ಮಸೂದೆ ಹಾಗೂ ವಿದ್ಯುತ್ ಖಾಸಗೀಕರಣದ ವಿರುದ್ಧ ಕಲ್ಲುಗುಂಡಿಯಿಂದ ಜಾಥಾ ಹೊರಟು ಮಂಗಳೂರಿನಲ್ಲಿ ಸಭೆ ನಡೆಸಲು , ಪ್ರತಿ ತಾಲೂಕಿಗೆ ರೈತ ಭವನಕ್ಕೆ ಕನಿಷ್ಟ ಒಂದು ಎಕರೆ ಜಾಗವನ್ನು ನೀಡಲು ಮನವಿ ಸಲ್ಲಿಸಲು, ೧೮೩೭ರ ರೈತರ ಹೋರಾಟದ ಭಾಗವಾಗಿ ಉಬರಡ್ಕದಲ್ಲಿ ಸಭೆ ಕರೆದು ಮುಂದಿನ ವಿಷಯವನ್ನು ಚರ್ಚಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನೂಜಾಲು ಪದ್ಮನಾಭ ಗೌಡ, ತೀರ್ಥರಾಮ ಉಳುವಾರು, ಮಾಧವ ಗೌಡ ಸುಳ್ಯಕೋಡಿ, ದಿವಾಕರ ಪೈ ಆರಂಬೂರು, ಭರತ್ ಕುಮಾರ್, ಕೇಶವ ಪ್ರಸಾದ್ ತೋಡಿಕಾನ, ಮಂಜುನಾಥ ಮಡ್ತಿಲ, ಬಾಲಕೃಷ್ಣ ಪರಮಲೆ, ದೇವಪ್ಪ ಗೌಡ ಕುಂದಲ್ಪಾಡಿ, ತೀರ್ಥರಾಮ ಜಾಲ್ಸೂರು, ಹರಿಶ್ಚಂದ್ರ ಪಂಡಿತ್, ಅನಂತ ಪದ್ಮನಾಭ ಭಟ್ ಜಾಲ್ಸೂರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.