ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಾಲ್ಸೂರು ವಲಯದ ಬೊಳುಬೈಲು ಒಕ್ಕೂಟದ 2021-22ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಬೊಳುಬೈಲಿನ ನವಚೇತನ ಯುವಕ ಮಂಡಲದ ಸಭಾಭವನದಲ್ಲಿ ಆ.22ರಂದು ರಚಿಸಲಾಯಿತು.
ಅಧ್ಯಕ್ಷರಾಗಿ ಪದ್ಮನಾಭ ನೆಕ್ರಾಜೆ, ಕಾರ್ಯದರ್ಶಿಯಾಗಿ ಕು. ಭವ್ಯ ಪಿಲಿಕೋಡಿ, ಉಪಾಧ್ಯಕ್ಷರಾಗಿ ಜಯಂತ ಕುಂಬರ್ಚೋಡು, ಕೋಶಾಧಿಕಾರಿಯಾಗಿ ಶ್ರೀಮತಿ ಸುಮತಿ ಹುಲಿಮನೆ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ಜಯಂತಿ ಅರ್ಭಡ್ಕ, ದಾಖಲಾತಿ ಸದಸ್ಯರುಗಳಾಗಿ ವಸಂತಿ, ಸುಮಂಗಲಿ, ರಾಜೀವಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಸುಜಾತ, ಸೇವಾ ಪ್ರತಿನಿಧಿ ಬಾಲಕೃಷ್ಣ ಕಾನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕಿ ಶ್ರೀಮತಿ ಸುಜಾತ ಅವರು ಸಂಘದ ನಿಯಮಗಳ ಕುರಿತು ವಿವರಿಸಿದರು.