ರಂಗಮನೆಯಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ

Advt_Headding_Middle

ಸುಳ್ಯ ಹಳೆಗೇಟು 5 ನೇ ವಾರ್ಡ್ ನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ, ಲಸಿಕಾ ಮೇಳದ ಅಂಗವಾಗಿ  ಸಮುದಾಯ ಆರೋಗ್ಯ ಕೇಂದ್ರ,ಸುಳ್ಯ ಇದರ ವತಿಯಿಂದ ಕೋವಿಡ್ ಲಸಿಕಾ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
    ನಗರ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಬುದ್ಧ ನಾಯ್ಕ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ರಂಗಮನೆಯ ರೂವಾರಿ ಜೀವನ್ ರಾಂ ಸುಳ್ಯ,ಸುಜನಾ  ಸುಳ್ಯ,ಕೇಶವ ಮಾಸ್ಟ್ರು ಹೊಸಗದ್ದೆ, ಅಜೀಜ್ ಹಳೆಗೇಟು, ದೇವದಾಸ್ ಓಡಬಾಯ್, ಕಿರಿಯ ಪ್ರಾಥಮಿಕ ಸುರಕ್ಷಾ ಅಧಿಕಾರಿಗಳಾದ ಲೀಲಾವತಿ ಮತ್ತು ಯಶಿಕಾ, ಅಂಗನವಾಡಿ ಕಾರ್ಯಕರ್ತೆಯರಾದ ತಿರುಮಲೇಶ್ವರಿ ಮತ್ತು ರತಿಕುಮಾರಿ ಉಪಸ್ಥಿತರಿದ್ದರು.
     ತಾಲೂಕು ವೈದ್ಯಾಧಿಕಾರಿ ಡಾ| ನಂದಕುಮಾರ್ ಮತ್ತು ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕಂದಡ್ಕ ಭೇಟಿ ನೀಡಿದರು. ಲಸಿಕಾ ಮೇಳದ ಅಂಗವಾಗಿ ಎಲ್ಲ ಲಸಿಕಾಕಾಂಕ್ಷಿಗಳಿಗೆ ರಂಗಮನೆಯ ವತಿಯಿಂದ ಸಿಹಿ ಹಂಚಲಾಯಿತು.
    ಚಿದಾನಂದ ವಿದ್ಯಾನಗರ ಮತ್ತು ಅರುಣ ವಿದ್ಯಾನಗರ,ಸಂತೃಪ್ತಿ ನಾಯಕ್, ಮನುಜ ನೇಹಿಗ ವಿಶೇಷವಾಗಿ ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.