ನಮ್ಮ ವ್ಯಕ್ತಿತ್ವ ಮತ್ತು ಕಾರ್ಯಗಳು ಸಮಾಜಮುಖಿಯಾಗಿರಲಿ : ಆಶ್ರೀತ ಗೌಡ ಮಲ್ಕಜೆ

Advt_Headding_Middle

ಮನುಷ್ಯ ಸಂಘ ಜೀವಿ ಎಂಬುದು ಸಾಬೀತಾಗಿರುವ ಸತ್ಯ, ಯಾವುದೋ ಗುರಿಸಾಧನೆಗಾಗಿ ಆತನ ಸಮಾಜವನ್ನು ಕಟ್ಟಿಕೊಂಡ ಮಾನವ ನಿರ್ಮಿಸಿದ ಮೌಲ್ಯಗಳು ಮತ್ತು ಚೌಕಟ್ಟಿನಲ್ಲಿ ತಾನು ಇಂದು ನೆಮ್ಮದಿಯಿಂದ ಬದುಕನ್ನು ಸಾಗಿಸುತ್ತಿದ್ದಾರೆ.ಪರಸ್ಪರ ಅವಲಂಬನೆ ಮತ್ತು ವಿನಿಮಯದ ಮೂಲಕ ಆತನ ಆಶಯಗಳು ಆಶೋತ್ತರಗಳು ಬೆಳೆಯುತ್ತದೆ ಮತ್ತು ಚಟುವಟಿಕೆಗಳು ನಡೆಯುತ್ತದೆ. ವ್ಯಕ್ತಿಯೊಬ್ಬನ ಚಟುವಟಿಕೆಗಳು ಸಮಾಜಮುಖಿಯಾಗಿ ಇರುತ್ತವೋ ಅಥವಾ ಸಮಾಜ ವಿಮುಖವಾಗಿರುತ್ತವೋ ಎಂಬುದು ಬಹಳ ಮುಖ್ಯವಾಗುತ್ತದೆ.
ಸಮಾಜದ ಅಂಗವಾಗಿರುವ ಪ್ರತಿಯೊಬ್ಬರ ವ್ಯಕ್ತಿತ್ವವು ಸಮಾಜದ ಮೇಲೆ ಪರಿಣಾಮವನ್ನು ಬೀರುತ್ತದೆ. ಒಬ್ಬ ವ್ಯಕ್ತಿ ಸಮಾಜದಲ್ಲಿ ಇರುವುದು ಮಾತ್ರವಲ್ಲದೆ ಸಮಾಜದ ಒಂದು ಸಕ್ರಿಯ ಭಾಗವಾಗಿ ಕೆಲಸ ಮಾಡುತ್ತಾನೆಂದರೆ ಆತನದು ಸಮಾಜಮುಖಿ ವ್ಯಕ್ತಿತ್ವ ಎನ್ನಬಹುದು, ಆತನು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದನ್ನು ಮಾಡುತ್ತಾನೆ.ಸಂಘ-ಸಂಸ್ಥೆಗಳನ್ನು ಕಟ್ಟಿಕೊಳ್ಳುವುದು ಇರಬಹುದು ಕಷ್ಟದಲ್ಲಿರುವವರ ಸಮಸ್ಯೆಗಳನ್ನು ಆಲಿಸುವುದು ಅವರ ಸಬಲೀಕರಣದಲ್ಲಿ ಪಾಲ್ಗೊಳ್ಳುವುದು,ಹೀಗೆ ಅನೇಕ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಳ್ಳುತ್ತಾನೆ.ಇನ್ನು ಕೆಲವರು ಸಮಾಜದಲ್ಲಿ ಇದ್ದರೂ ಸಮಾಜದಿಂದ ಹೊರಗುಳಿಯುತ್ತಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಅಷ್ಟಾಗಿ ಭಾಗವಹಿಸುವುದಿಲ್ಲ ಒಂದುವೇಳೆ ಭಾಗವಹಿಸಿದರು ಸಕ್ರಿಯವಾಗಿ ಇರುವುದಿಲ್ಲ. ಅವರಿಗೆ ತಾವಾಯಿತು ತಮ್ಮ ಕೆಲಸವಾಯಿತು ತಮ್ಮ ಚಿಂತೆಯಾಯಿತು ಎಂಬಂತಿರುತ್ತಾರೆ. ಇತರರಿಗೆ ಏನಾಗುತ್ತದೆ ಎಂದು ತಿಳಿಯಲು ಹೋಗುವುದಿಲ್ಲ,ಹಾಗೆಂದು ಅವರ ಕುರಿತು ಅಸಹನೆಯ ಭಾವನೆಗಳಿಲ್ಲ. ಈ ವರ್ಗದ ಜನರಿಂದ ಸಮಾಜಕ್ಕೆ ಸಹಕಾರಿ ಯಾಗದಿದ್ದರೂ ತೊಂದರೆಯಂತೂ ಆಗುವುದಿಲ್ಲ.ಇನ್ನು ಕೆಲವರಿರುತ್ತಾರೆ ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡುತ್ತಾರೆ,ಇವರುಗಳಿಂದ ಸಮಾಜಕ್ಕೆ ಹೆಚ್ಚಿನ ಆಘಾತ ಗಳಾಗುತ್ತವೆ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆ.ಸಮಾಜದಲ್ಲಿ ಅಸಮತೋಲನವನ್ನು ತರುವಲ್ಲಿ ಇವರದ್ದು ಮುಖ್ಯ ಪಾತ್ರವಿರುತ್ತದೆ.ಇಂತಹ ಕೃತ್ಯಗಳು ಸ್ವಯಂಪ್ರೇರಿತವಾಗಿ ಇಲ್ಲದೆ ಇರಬಹುದು ಆದರೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವುದು ನಿಶ್ಚಿತ.
ಈ ಮೂರು ವಿಧದ ಸಮಾಜದ ವ್ಯಕ್ತಿಗಳು ವ್ಯಕ್ತಿತ್ವಗಳು ಬೆಳವಣಿಗೆಯ ಸಂದರ್ಭದಲ್ಲಿ ಸಿಗುವ ವಾತಾವರಣದಿಂದ ನಿರ್ಧರಿತವಾಗುತ್ತದೆ. ತಂದೆ-ತಾಯಿ ಗುರು-ಹಿರಿಯರ ಸರಿಯಾದ ಮಾರ್ಗದರ್ಶನ ಬಹಳ ಅವಶ್ಯ.ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎಂಬ ಮಾತು ದಿಟ ಅನಿಸುವುದು ಇದೇ ಕಾರಣಕ್ಕೆ.ಆದುದರಿಂದ ಸಮಾಜದ ಬಹುಮುಖ್ಯ ಅಂಗವಾದ ಕುಟುಂಬದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವುದು ಅವಶ್ಯಕ.
ವ್ಯಕ್ತಿಯು ತನ್ನ ವೈಯಕ್ತಿಕ ಜೀವನವನ್ನು ದೊಡ್ಡದು ಮಾಡಿಕೊಳ್ಳದ ಹೊರತು ಸಮಾಜವನ್ನು ದೊಡ್ಡದು ಮಾಡಲಾರ.ಆದ್ದರಿಂದ ವ್ಯಕ್ತಿಯ ನೈತಿಕ ಆಚರಣೆ ಉಳ್ಳವನಾಗಿರಬೇಕು, ಅಂದರೆ ವೈಯಕ್ತಿಕ ನಡವಳಿಕೆಗಳನ್ನು ಸುಧಾರಿಸಿಕೊಳ್ಳಬೇಕು.ಸದ್ವಿಚಾರ ಉಳ್ಳವನು,ಸದಾಚಾರ ಸಂಪನ್ನನೂ ಆಗಿರಬೇಕು. ದೇಹಗತವಾದ ದುರ್ಗುಣಗಳನ್ನು ತ್ಯಜಿಸಬೇಕು,ಆಸೆ ಆಮಿಷ,ವಿಷಯ ವಾಸನೆಗಳಿಂದ ದೂರಾಗಿ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಸುಂದರ ಸಮಾಜಕ್ಕೆ ಮೊದಲು ತಾನು ಪರಿಶುದ್ಧವಾಗಿರಬೇಕು.
ಒಟ್ಟಾರೆ ಮನುಷ್ಯನಾದವನು ತನ್ನದೇ ಆದ ಸಮಾಜಕ್ಕೆ ಒಳ್ಳೆಯದನ್ನು ಬಗೆಯಬೇಕು.ತಾನು ಮಾಡುವ ಕಾರ್ಯಗಳು ಸಮಾಜಮುಖಿಯಾಗಿರಬೇಕು. ವ್ಯಕ್ತಿಯಿಂದ ಸುಂದರ ಸಮಾಜ ನಿರ್ಮಾಣವಾಗಬೇಕು, ಆ ಸಮಾಜದಿಂದ ಸದಾ ವ್ಯಕ್ತಿಯ ಹಿತ ಸಾಧನೆಯಾಗಬೇಕು ಮತ್ತು ವ್ಯಕ್ತಿಯ ಪೂರ್ಣ ವಿಕಾಸವಾಗಬೇಕು.ಇದು ಸಮಾಜ ರಚನೆಯ ಮೂಲ ಉದ್ದೇಶವೂ ಆಗಿದೆ.

– ಆಶ್ರೀತ ಗೌಡ ಮಲ್ಕಜೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.