Breaking News

ಆಲೆಟ್ಟಿ ಪ್ರಾ. ಕೃ.ಪ.ಸಂಘಕ್ಕೆ ನಡೆಯಲಿರುವ ನೇಮಕಾತಿ ತಡೆಹಿಡಿದು ಪುನ: ಅರ್ಜಿ ಆಹ್ವಾನಿಸುವಂತೆ ರೈತ ಸಂಘದ ವತಿಯಿಂದ ಮನವಿ

Advt_Headding_Middle

 

ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಖಾಲಿಯಿರುವ ಮೂರು ಹುದ್ದೆಗೆ ನೇಮಕಾತಿ ಪ್ರಕಟಣೆಯಲ್ಲಿ ಸ್ಪಷ್ಟ ಮಾಹಿತಿ ನೀಡದೆ ಕ್ರಮ ಪ್ರಕಾರ ಪರೀಕ್ಷೆ ನಡೆಸದೆ ನೇಮಕಾತಿಯಲ್ಲಿ ರಾಜಕೀಯ ಮಾಡಲಾಗುತ್ತಿದೆ ಇದರಿಂದ ಆ.28 ರಂದು ನಡೆಯಲಿರುವ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯುವ ಬಗ್ಗೆ ಹಾಗೂ ಅರ್ಹ ಅಭ್ಯರ್ಥಿಗಳು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಸುಳ್ಯ ತಾಲೂಕು ರೈತ ಸಂಘದ ವತಿಯಿಂದ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಆ 27 ರಂದು ಮನವಿ ನೀಡಲಾಯಿತು.
ಸಂಘಕ್ಕೆ ಅವಶ್ಯವಿರುವ ಹುದ್ದೆಗೆಮೇಲಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ತಮಗೆ ಬೇಕಾದ ಅಭ್ಯರ್ಥಿಗಳ ಅರ್ಜಿ ಸ್ವೀಕರಿಸಿ ನಂತರ ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಿರುತ್ತಾರೆ. ಇದರಿಂದ ಬಹಳ ಮಂದಿ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಅರ್ಜಿ ಸ್ವೀಕರಿಸಿದ ಸಂದರ್ಭ ಪ್ರತಿಯೊಬ್ಬ ಅಭ್ಯರ್ಥಿಗಳಿಂದ ರೂ. 500/-ಶುಲ್ಕ ಕಟ್ಟಿಸಿಕೊಂಡಿದ್ದು ಅದನ್ನು ಹಿಂತಿರುಗಿಸಿಲ್ಲ. ರಾಜಕೀಯ ಪಕ್ಷದ ಮುಖಂಡರ ಮನೆಯವರಿಗೆ ಮತ್ತು ಸಂಬಂಧಿಕರಿಗೆ ಹಾಗೂ ಸಂಘದಲ್ಲಿ ದಿನಗೂಲಿ ನೌಕರನಿಗೆ ಅತೀ ಹೆಚ್ಚು ಅಂಕ ಬಂದ ಕಾರಣ ಪ್ರಶ್ನೆ ಪತ್ರಿಕೆಯ ಸೊರಿಕೆಯಾಗಿದೆ ಎಂಬ ಸಂಶಯ ಉಂಟಾಗಿದೆ. ಆದ್ದರಿಂದ ನೇಮಕಾತಿ ತಡೆಹಿಡಿದು ನಿಷ್ಪಕ್ಷಪಾತವಾದ ತನಿಖೆ ನಡೆಸಿ ಮತ್ತೇ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಹುದ್ದೆಗೆ ನೇಮಕಾತಿ ಮಾಡಬೇಕು. ಇಲ್ಲವಾದಲ್ಲಿ ವಂಚಿತರಾಗಿರುವ ಅಭ್ಯರ್ಥಿಗಳ ಪರ ಸಂಘದ ಎದುರಿನಲ್ಲಿ ಸುಳ್ಯ ತಾಲೂಕು ರೈತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ದಿವಾಕರ ಪೈ ಮಜಿಗುಂಡಿ, ಮನ್ಮಥ ಕೆ ಮೈಂದೂರು ಮತ್ತಿತರರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.