Breaking News

ಗುತ್ತಿಗಾರು:ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿದ ಸಹಕಾರಿ ಸಂಘ

Advt_Headding_Middle

 

ಕೋವಿಡ್ ನಿಯಂತ್ರಣದ ಬಳಕೆಗೆ ವಾಹನ ನಿಯೋಜನೆ

ಗುತ್ತಿಗಾರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಗುತ್ತಿಗಾರು ಪ್ರಾ ಕೃ ಪ ಸ ಸಂಘ ಕೈ ಜೋಡಿಸಿ ಸಹಕಾರ ನೀಡಿದೆ.

ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರು ಗುತ್ತಿಗಾರಿಗೆ ಬಂದಿರುವ ಸಂದರ್ಭ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣ ಕ್ಕೆ ಏನು ವ್ಯವಸ್ಥೆಗಳಾಗ ಬೇಕೋ ಅದಕ್ಕೆ ಸ್ಟಳೀಯವಾಗಿಯೂ ಸಹಕಾರ ನೀಡುವಂತೆ ಕರೆಕೊಟ್ಟಿದ್ದರು. ಅದನ್ನು ಮನಗಂಡ ಗುತ್ತಿಗಾರು ಸೊಸೈಟಿಯ ವೆಂಕಟ್ ದಂಬೆಕೋಡಿ ನೇತೃತ್ವದ ಆಡಳಿತ ಮಂಡಳಿಯು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಒಂದು ಜೀಪ್ ನ್ನು ಉಚಿತ ಬಾಡಿಗೆ ನೆಲೆಯಲ್ಲಿ ಒಂದು ತಿಂಗಳ ಅವದಿಗೆ ನೀಡಿದೆ. ಇದರ ಸಹಾಯದಿಂದ ಗುತ್ತಿಗಾರು ಆರೋಗ್ಯ ಕೇಂದ್ರವು ಗುತ್ತಿಗಾರು, ನಾಲ್ಕೂರು, ದೇವಚಳ್ಳ ಮತ್ತಿತರ ಕಡೆ ಕೋವಿಡ್ ನಿಯಂತ್ರಣಕ್ಕೆ ಮಾಡಬೇಕಾದ ಕೆಲಸಗಳಿಗೆ ಬಳಸುತ್ತಿರುವುದಾಗಿ ವರದಿಯಾಗಿದೆ. ಬಹು ಮುಖ್ಯವಾಗಿ ಕೊರೋನಾ ಪೀಡಿತ ಮನೆಯವರ ಪ್ರಾಥಮಿಕ ಸಂಪರ್ಕಿತರ ಸ್ವಾಬ್ ತೆಗೆಯಲು ಹಾಗೂ ಕೆಲ ನಿಗದಿತ ಪ್ರದೇಶಗಳ ಸ್ವಾಬ್ ತೆಗೆಯುವ ಸಲುವಾಗಿ, ಕೊರೋನಾ ಪೀಡಿತರನ್ನು ಟ್ರೇಸಿಂಗಾಗಿ ಕೆಲ ಪ್ರದೇಶಗಳಿಗೆ ಹೋಗಲು ಇದನ್ನು ಬಳಸುತಿದ್ದಾರೆ.

ವಾಹನ ಹಸ್ತಾಂತರ ಕಾರ್ಯ ಇತ್ತೀಚೆಗೆ ನಡೆದಿದ್ದು ಈ ಸಂದರ್ಭ ಮಾತನಾಡಿದ ವೈದ್ಯೆ ಡಾ.ಚೈತ್ರಾಬಾನು ಈ ವಾಹನ ಸೇವೆಯಿಂದ ನಮಗೆ ತುಂಬಾ ಪ್ರಯೋಜನವಾಗಲಿದ್ದು ಹಳ್ಳಿಗಾಡಿನ ರಸ್ತೆಯಲ್ಲಿ ಪ್ರತಿ ಮನೆಗೆ ಹೋಗುವುದು ತ್ರಾಸದಾಯಕವಾಗಿದ್ದು ಈ ವಾಹನದಿಂದ ನಮಗೆ, ಸಿಬ್ಬಂದಿಗಳಿಗೆ ಸಹಕರಾವಾಗಲಿದೆ. ಕೊರೋನಾ ನಿಯಂತ್ರಣಕ್ಕಾಗಿ ತಹಶಿಲ್ದಾರರ ಸೂಚನೆಯಂತೆ ಸ್ವಾಬ್ ತೆಗೆಯಲು ಸಿಬ್ಬಂದಿ ನಿಯೋಜಿಸಿದ್ದು ಅವರಿಗೆ ಮನೆ ಮನೆ ತೆರಳಿ ಸ್ವಾಬ್ ತಗೆಯಲು ಇದು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭ ಸೊಸೈಟಿ ಉಪಾಧ್ಯಕ್ಷ ಕಿಶೋರ್ ಕುಮಾರ್ ಅಂಬೆಕಲ್ಲು, ನಿರ್ದೇಶಕರಾದ ಬೆಳ್ಯಪ್ಪ ಕಡ್ತಲ್ ಕಜೆ, ರವಿಪ್ರಕಾಶ್, ನವೀನ್ ಬಾಳುಗೋಡು, ಕಾರ್ಯನಿರ್ವಹಣಾಧಿಕಾರಿ ಶರತ್ ಎ ಕೆ, ಗುತ್ತಿಗಾರು ಗ್ರಾ.ಪಂ ಸದಸ್ಯರಾದ ವೆಂಕಟ್ ವಳಲಂಬೆ, ಸೊಸೈಟಿ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.